ವಿದೇಶ

ಸ್ಥಳಾಂತರ ಕಾರ್ಯಾಚರಣೆ ವೇಳೆ ಹಮಾಸ್ ನಿಂದ ಯೋಧರ ಮೇಲೆ ಗುಂಡಿನ ದಾಳಿ: ಐಡಿಎಫ್

Srinivas Rao BV

ಗಾಜಾ: ಗಾಜಾ ನಗರದ ಅಲ್-ಶಾತಿ ಕ್ಯಾಂಪ್ ನಲ್ಲಿ ಯೋಧರು ಹೋರಾಡುತ್ತಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಗಿವಾತಿ ಬ್ರಿಗೇಡ್ ಟ್ರೂಪ್ ಗಳು ಅಲ್ಲಿ ನಾಗರಿಕರನ್ನು ಪತ್ತೆ ಮಾಡಿದ್ದು, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ವೇಳೆ ಇಸ್ರೇಲಿ ಯೋಧರ ಮೇಲೆ ಹಮಾಸ್ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಐಡಿಎಫ್ ಆರೋಪಿಸಿದೆ.

 ಐಡಿಎಫ್ ನ ಪ್ರಕಾರ, ಸೈನಿಕರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದರು ಮತ್ತು ಟ್ಯಾಂಕ್‌ಗಳು ಭಯೋತ್ಪಾದಕರ ಮೇಲೆ ಗುಂಡು ಹಾರಿಸಿ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಮತ್ತೊಂದು ಘಟನೆಯಲ್ಲಿ, ಅಲ್-ಶಾತಿಯಲ್ಲಿನ ಕಟ್ಟಡವೊಂದರಲ್ಲಿ ಹಮಾಸ್ ಕಾರ್ಯಕರ್ತರ ಗುಂಪನ್ನು ಸೈನಿಕರು ಗುರುತಿಸಿದ್ದು ಅವರನ್ನು ಹೊಡೆದುರುಳಿಸಲು ವೈಮಾನಿಕ ದಾಳಿಗೆ ನಿರ್ದೇಶಿಸಿದ್ದಾರೆ ಎಂದು ಐಡಿಎಫ್ ಹೇಳಿದೆ.

ಏತನ್ಮಧ್ಯೆ, ದಿ ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಕ್ಷಿಪಣಿಯೊಂದು ಅಲ್ಲಿನ ಶಿಬಿರದ ಕಟ್ಟಡದಲ್ಲಿದ್ದ ಹಮಾಸ್ ಶಸ್ತ್ರಾಸ್ತ್ರಗಳ ಡಿಪೋಗೆ ಅಪ್ಪಳಿಸಿದೆ ಎಂದು ಐಡಿಎಫ್ ಹೇಳಿದೆ. 

SCROLL FOR NEXT