ವಿದೇಶ

ಇಸ್ರೇಲ್-ಹಮಾಸ್ ಯುದ್ಧ: ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವ ಹಮಾಸ್ ನಡೆ ಖಂಡಿಸಿದ ಯುರೋಪಿಯನ್ ಯೂನಿಯನ್!

Vishwanath S

ಇಸ್ರೇಲ್ ವಿರುದ್ಧದ ತನ್ನ ಹೋರಾಟದಲ್ಲಿ ಆಸ್ಪತ್ರೆಗಳು ಮತ್ತು ನಾಗರಿಕರನ್ನು 'ಮಾನವ ಗುರಾಣಿ'ಗಳಾಗಿ ಬಳಸಿದ್ದಕ್ಕಾಗಿ 27 ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ದೇಶಗಳು ಜಂಟಿಯಾಗಿ ಹಮಾಸ್ ಅನ್ನು ಖಂಡಿಸಿವೆ. 

ಇಯು ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಪ್ ಬೊರೆಲ್, ನಾವು ಇಸ್ರೇಲ್ ಅನ್ನು ಗರಿಷ್ಠ ಸಂಯಮವನ್ನು ತೋರುವಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದರು. ಇದರೊಂದಿಗೆ, ಗಾಜಾದಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ಅನ್ನು ತಕ್ಷಣವೇ ರಚಿಸುವಂತೆ ಮನವಿ ಮಾಡಿದ್ದೇವೆ ಎಂದರು.

ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ, ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಅವರು ಮತ್ತೊಮ್ಮೆ ಹಮಾಸ್‌ಗೆ ಕರೆ ನೀಡಿದರು. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಒತ್ತೆಯಾಳುಗಳಿಗೆ ಪ್ರವೇಶ ನೀಡುವುದು ಅತ್ಯಗತ್ಯ ಎಂದು ಹೇಳಿಕೆ ತಿಳಿಸಿದೆ.

'ಹಮಾಸ್ ಆಸ್ಪತ್ರೆಗಳು ಮತ್ತು ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುವುದನ್ನು EU ಖಂಡಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಇಸ್ರೇಲ್ ಅಕ್ಟೋಬರ್ 8 ರಂದು ಪ್ಯಾಲೇಸ್ಟಿನಿಯನ್ ಮಿಲಿಟರಿ ಗುಂಪು ಹಮಾಸ್ ವಿರುದ್ಧ ಯುದ್ಧವನ್ನು ಘೋಷಿಸಿತ್ತು. ಅಕ್ಟೋಬರ್ 7ರಂದು ಇಸ್ರೇಲ್ ನಲ್ಲಿ ಹಮಾಸ್ ನಡೆಸಿದ ಹತ್ಯಾಕಾಂಡದಲ್ಲಿ 1400 ಜನರು ಹತ್ಯೆಯಾಗಿತ್ತು. ಅಲ್ಲದೆ ನೂರಾರು ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡಿತು. ಅದೇ ಸಮಯದಲ್ಲಿ, ಇಸ್ರೇಲ್ನ ಪ್ರತೀಕಾರದಲ್ಲಿ ಇದುವರೆಗೆ 11 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಹತ್ಯೆಯಾಗಿದ್ದಾರೆ.

SCROLL FOR NEXT