ವಿದೇಶ

ಕಾಂಗೋ: ಸ್ಟೇಡಿಯಂನಲ್ಲಿ ನೇಮಕಾತಿ ವೇಳೆ ಕಾಲ್ತುಳಿತ; ಕನಿಷ್ಠ 37 ಮಂದಿ ಸಾವು

Lingaraj Badiger

ರಿಪಬ್ಲಿಕ್ ಆಫ್ ಕಾಂಗೋ: ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಬ್ರಾಝಾವಿಲ್ಲೆ ಕ್ರೀಡಾಂಗಣದಲ್ಲಿ ನಡೆದ ಸೇನಾ ನೇಮಕಾತಿ ವೇಳೆ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ ಮೂವತ್ತೇಳು ಯುವಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕಳೆದ ವಾರ, ಕಾಂಗೋ-ಬ್ರಜಾವಿಲ್ಲೆ ಎಂದೂ ಕರೆಯಲ್ಪಡುವ ಮಧ್ಯ ಆಫ್ರಿಕಾದ ರಾಷ್ಟ್ರದ ಸೇನೆ, 18 ರಿಂದ 25 ವರ್ಷದ 1,500 ಜನರನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತ್ತು.

ಬ್ರಾಝಾವಿಲ್ಲೆಯ ಹೃದಯಭಾಗದಲ್ಲಿರುವ ಮೈಕೆಲ್ ಡಿ'ಒರ್ನಾನೊ ಕ್ರೀಡಾಂಗಣ ನಡೆದ "ದುರಂತ"ದಲ್ಲಿ 37 ಜನರು ಸಾವನ್ನಪ್ಪಿದ್ದಾರೆ, ಅನಿರ್ದಿಷ್ಟ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಅನಾಟೊಲ್ ಕೊಲಿನೆಟ್ ಮಕೊಸೊ ಅವರು ಹೇಳಿದ್ದಾರೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಸೋಮವಾರ ರಾತ್ರಿ ಕಾಲ್ತುಳಿತ ಆರಂಭವಾದಾಗಲೂ ಅನೇಕ ಜನ ಕ್ರೀಡಾಂಗಣದಲ್ಲಿದ್ದರು. ಕೆಲವರು ಗೇಟ್‌ಗಳ ಮೂಲಕ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಅನೇಕರು ಹರಸಾಹಸದಲ್ಲಿ ತುಳಿತಕ್ಕೊಳಗಾದರು ಎಂದು ತಿಳಿಸಿದ್ದಾರೆ.

SCROLL FOR NEXT