ಗಡಿಯಲ್ಲಿರುವ 24 ಪಟ್ಟಣಗಳ ಪೈಕಿ 15 ಪಟ್ಟಣಗಳನ್ನು ಸೇನೆಯು ಸ್ಥಳಾಂತರಿಸಿದೆ ಎಂದು ಇಸ್ರೇಲಿ ಸೇನಾಧಿಕಾರಿ ತಿಳಿಸಿದ್ದಾರೆ 
ವಿದೇಶ

ಹಮಾಸ್ ವಿರುದ್ಧ ಹೋರಾಡಲು ಇಸ್ರೇಲ್ 48 ಗಂಟೆಗಳಲ್ಲಿ 3 ಲಕ್ಷ ಸೈನಿಕರ ಸಜ್ಜು: ಹಮಾಸ್ ಗೆ ಎಫ್ ಬಿಐ ಎಚ್ಚರಿಕೆ

ಗಾಜಾದಿಂದ ಹಮಾಸ್ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ದಾಖಲೆಯ 3 ಲಕ್ಷ ಪಡೆಯನ್ನು ಒಗ್ಗೂಡಿಸಿ ಆಕ್ರಮಣ ನಡೆಸಲು ಮುಂದಾಗಿದೆ ಎಂದು ಮುಖ್ಯ ಮಿಲಿಟರಿ ವಕ್ತಾರರು ಹೇಳಿದ್ದಾರೆ.

ಜೆರುಸಲೇಂ: ಗಾಜಾದಿಂದ ಹಮಾಸ್ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ದಾಖಲೆಯ 3 ಲಕ್ಷ ಪಡೆಯನ್ನು ಒಗ್ಗೂಡಿಸಿ ಆಕ್ರಮಣ ನಡೆಸಲು ಮುಂದಾಗಿದೆ ಎಂದು ಮುಖ್ಯ ಮಿಲಿಟರಿ ವಕ್ತಾರರು ಹೇಳಿದ್ದಾರೆ.

ಶನಿವಾರದ ಅನಿರೀಕ್ಷಿತ ದಾಳಿಯ ನಂತರ, ಇಸ್ರೇಲಿ ವಿಮಾನಗಳು ಗಾಜಾ ಮೇಲೆ ಗುರಿಯಾಗಿಟ್ಟು ದಾಳಿ ನಡೆಸುತ್ತಿದೆ. ಆದರೆ ಇಸ್ರೇಲ್ ಸೇನೆ ಪ್ಯಾಲೆಸ್ತೀನ್ ಬಂದೂಕುಧಾರಿಗಳಿಂದ ಆಕ್ರಮಿಸಿಕೊಂಡಿರುವ ಗಡಿ ಗ್ರಾಮಗಳು ಮತ್ತು ಪಟ್ಟಣಗಳ ನಿಯಂತ್ರಣ ಹಿಂಪಡೆಯಲು ಹೋರಾಡುತ್ತಿವೆ.

ಮುಖ್ಯ ಮಿಲಿಟರಿ ವಕ್ತಾರ ರಿಯರ್-ಅಡ್ಮಿರಲ್ ಡೇನಿಯಲ್ ಹಗರಿ ಅವರು ಆ ಸಮುದಾಯಗಳ ನಿಯಂತ್ರಣವನ್ನು ಮರುಸ್ಥಾಪಿಸಲಾಗಿದೆ ಆದರೆ ಕೆಲವು ಬಂದೂಕುಧಾರಿಗಳು ಸಕ್ರಿಯವಾಗಿದ್ದರಿಂದ ಪ್ರತ್ಯೇಕ ಘರ್ಷಣೆಗಳು ಮುಂದುವರೆದವು. ನಾವು ಈಗ ಎಲ್ಲಾ ಸಮುದಾಯಗಳಲ್ಲಿ ಹುಡುಕಾಟ ನಡೆಸುತ್ತಿದ್ದೇವೆ, ಪ್ರದೇಶವನ್ನು ತೆರವುಗೊಳಿಸುತ್ತಿದ್ದೇವೆ ಎಂದು ಹೇಳಿದರು. 

ಗಾಜಾದಲ್ಲಿ ಪ್ರತಿದಾಳಿಯಿಂದ ಗಡಿಯ ಇಸ್ರೇಲ್‌ನ ಭಾಗವನ್ನು ಭದ್ರಪಡಿಸುವುದು ಮುಖ್ಯವಾಗಿದೆ. ಶನಿವಾರದಿಂದ 300,000 ಮಿಲಿಟರಿ ಪಡೆಗಳನ್ನು ಕರೆಸಲಾಗಿದೆ ಎಂದು ಹಗರಿ ಹೇಳಿದರು.

ಭದ್ರತಾ ಪಡೆಗಳ 73 ಸದಸ್ಯರು ಸೇರಿದಂತೆ ಇಸ್ರೇಲ್‌ನ ಗಡಿ ಭಾಗದಲ್ಲಿ 700 ಜನರು ಮೃತಪಟ್ಟಿದ್ದಾರೆ. ಇಸ್ರೇಲ್‌ನ ಸೇನೆಯು ನೂರಾರು ಪ್ಯಾಲೆಸ್ತೀನ್ ಬಂದೂಕುಧಾರಿಗಳನ್ನು ಕೊಂದಿದೆ ಎಂದು ಅವರು ಹೇಳಿದರು.

ಎಫ್ ಬಿಐ ಹೇಳಿಕೆ: ಅಮೆರಿಕದ ಪ್ರಧಾನ ತನಿಖಾ ಸಂಸ್ಥೆ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI), ಹಮಾಸ್‌ನಿಂದ ಇಸ್ರೇಲ್‌ನ ಮೇಲೆ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಾಗರಿಕರ ಸುರಕ್ಷತೆಗೆ ಸಂಭವನೀಯ ಬೆದರಿಕೆಗಳ ಕುರಿತು ತನಿಖೆ ನಡೆಸುತ್ತಿದೆ.

"ಇಸ್ರೇಲ್‌ನಲ್ಲಿ ಹಮಾಸ್ ದಾಳಿಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ಬೆದರಿಕೆಯನ್ನು ಸೂಚಿಸುವ ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಗುಪ್ತಚರವನ್ನು ಎಫ್‌ಬಿಐ ಹೊಂದಿಲ್ಲವಾದರೂ, ನಾವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ರಾಜ್ಯ, ಸ್ಥಳೀಯ, ಫೆಡರಲ್ ಮತ್ತು ಅಂತರರಾಷ್ಟ್ರೀಯ ಕಾನೂನು ಜಾರಿ, ಗುಪ್ತಚರದೊಂದಿಗೆ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ನಾವು ನಮ್ಮ ಭದ್ರತೆಯನ್ನು ಹೆಚ್ಚಿಸುತ್ತಿದ್ದೇವೆ, ಅಮೆರಿಕನ್ನರನ್ನು ರಕ್ಷಿಸುತ್ತೇವೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT