ವಿದೇಶ

ಹಮಾಸ್ ಉಗ್ರಗಾಮಿಗಳಿಂದ ಕನಿಷ್ಠ 14 ಮಂದಿ ಅಮೆರಿಕನ್ನರ ಸಾವು; ಹಲವರು ಒತ್ತೆಯಾಳು!

Sumana Upadhyaya

ವಾಷಿಂಗ್ಟನ್: ಅಮೆರಿಕದ ಕನಿಷ್ಠ 14 ಮಂದಿ ನಾಗರಿಕರು ಇಸ್ರೇಲ್‌ನಲ್ಲಿ ಕೊಲ್ಲಲ್ಪಟ್ಟಿದ್ದಾರೆ, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧ್ಯಕ್ಷ ಜೊ ಬೈಡನ್ ಘೋಷಿಸಿದ್ದಾರೆ. ಹಮಾಸ್ ವಶದಲ್ಲಿರುವವರಲ್ಲಿ ಅಮೆರಿಕದ ನಾಗರಿಕರು ಕೂಡ ಇದ್ದಾರೆ ಎಂದು ಅವರು ಹೇಳಿದರು. 

"ಒತ್ತೆಯಾಳು ಬಿಕ್ಕಟ್ಟಿನ ಪ್ರತಿಯೊಂದು ಅಂಶದ ಬಗ್ಗೆ ಇಸ್ರೇಲ್ ಪ್ರಧಾನಿ ಜೊತೆ ಮಾತುಕತೆ ನಡೆಸುತ್ತಿದ್ದೇನೆ ಗುಪ್ತಚರ ಇಲಾಖೆಯ ಸಹಾಯದಿಂದ ಒತ್ತೆಯಾಳುಗಳನ್ನು ಬಂಧನದಿಂದ ಮುಕ್ತಿಗೊಳಿಸಲು ಪ್ರಯತ್ನಗಳ ಕುರಿತು ಸಮಾಲೋಚಿಸಲು ಮತ್ತು ಸಲಹೆ ನೀಡಲು ಅಮೆರಿಕ ಸರ್ಕಾರದಾದ್ಯಂತ ತಜ್ಞರನ್ನು ನಿಯೋಜಿಸಲಾಗುವುದು ಎಂದು ಬೈಡನ್ ತಿಳಿಸಿದರು. 

ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧಗಳು ಮತ್ತಷ್ಟು ಆಳವಾಗಿ ಸಾಗುತ್ತದೆ. ಈ ದಾಳಿಯ ನೋವನ್ನು ಅನುಭವಿಸುತ್ತಿರುವ ಅನೇಕ ಅಮೆರಿಕನ್ ಕುಟುಂಬಗಳಿಗೆ ಇದು ವೈಯಕ್ತಿಕ ನೋವಾಗಿದೆ ಎಂದು ಜೊ ಬೈಡನ್ ತಿಳಿಸಿದ್ದಾರೆ. 

ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ಚರ್ಚಿಸಿದರು. ದಾಳಿಯ ನಂತರ ಇಸ್ರೇಲ್ ನ್ನು ಬೆಂಬಲಿಸಲು ತಾನು ಮತ್ತು ಇತರ ಮಿತ್ರರಾಷ್ಟ್ರಗಳು ತೆಗೆದುಕೊಂಡ ಕ್ರಮಗಳನ್ನು ಬೈಡನ್ ವಿವರಿಸಿದರು. 

ಹಮಾಸ್ ಕಾರ್ಯಾಚರಣೆಯನ್ನು ಭಯೋತ್ಪಾದಕ ಗುಂಪು ಐಸಿಸ್‌ಗೆ ಹೋಲಿಸಿದ ಬೈಡನ್, ಯಾವುದೇ ಅನುಮಾನ ಬೇಡ. ಅಮೆರಿಕ ಇಸ್ರೇಲ್ ನ್ನು ಬೆಂಬಲಿಸುತ್ತದೆ. ಯಹೂದಿ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾದ ಇಸ್ರೇಲ್ ಗೆ ನಮ್ಮ ಬೆಂಬಲ ಯಾವತ್ತಿಗೂ ಇರುತ್ತದೆ ಎಂದರು. 

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಪ್ರತೀಕಾರದ ದಾಳಿಗಳು ಪ್ಯಾಲೆಸ್ತೀನ್ ದಿಗ್ಬಂಧನದ 141-ಚದರ ಮೈಲಿ ಪ್ರದೇಶದಲ್ಲಿ, ವಿಶ್ವದ ಅತ್ಯಂತ ಬಡ ಸ್ಥಳಗಳಲ್ಲಿ ಒಂದಾಗಿದೆ. ಇಸ್ರೇಲ್ ಗಾಜಾವನ್ನು ವೈಮಾನಿಕ ದಾಳಿಯಿಂದ ಹೊಡೆದುರುಳಿಸಿದೆ. ಹತ್ತಾರು ಸಾವಿರ ಪ್ಯಾಲೆಸ್ತೀನಿಯನ್ನರು ವಿಶ್ವಸಂಸ್ಥೆ ಆಶ್ರಯಕ್ಕೆ ಪಲಾಯನ ಮಾಡುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಅಮೆರಿಕದ ಒತ್ತೆಯಾಳುಗಳ ನಿಖರವಾದ ಸಂಖ್ಯೆಯು ತಿಳಿದಿಲ್ಲ ಎಂದಿದ್ದಾರೆ. ಈ ಸಮಯದಲ್ಲಿ ಅಮೆರಿಕ ಸೈನ್ಯವನ್ನು ಕಳುಹಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸುಲ್ಲಿವನ್ ಹೇಳಿದರು.

SCROLL FOR NEXT