ವಿದೇಶ

ಒತ್ತೆಯಾಳುಗಳನ್ನು ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು: ಹಮಾಸ್‌ಗೆ ಯುಎನ್ ಮುಖ್ಯಸ್ಥ ಗುಟೆರೆಸ್ ಕರೆ 

Nagaraja AB

ನ್ಯೂಯಾರ್ಕ್: ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಯುದ್ಧ ಮುಂದುವರೆದಿರುವಂತೆಯೇ,  ಯಾವುದೇ ರೀತಿಯ ಷರತ್ತುಗಳನ್ನು ಇಟ್ಟುಕೊಳ್ಳದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹಮಾಸ್‌ಗೆ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು, ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯ ಮಧ್ಯೆ ಗುಟೆರೆಸ್ ಎರಡು ಮಾನವೀಯ ಮನವಿಗಳನ್ನು ಮಾಡಿದ್ದಾರೆ. ಒತ್ತೆಯಾಳುಗಳನ್ನು ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು,ಗಾಜಾದಲ್ಲಿನ ನಾಗರಿಕರಿಗೆ ಮಾನವೀಯ ಸಹಾಯಕ್ಕಾಗಿ ಇಸ್ರೇಲ್ ಗೆ ತ್ವರಿತ ಮತ್ತು ಅಡೆತಡೆಯಿಲ್ಲದ ಪ್ರವೇಶವನ್ನು ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

"ಈ ಎರಡು ಉದ್ದೇಶಗಳು ಮೌಲ್ಯಯುತವಾಗಿವೆ. ಇದರಲ್ಲಿ ಚೌಕಾಸಿ ತಂತ್ರ ಮಾಡಬಾರದು, ಅವುಗಳನ್ನುಕಾರ್ಯಗತಗೊಳಿಸಬೇಕು ಏಕೆಂದರೆ ಇದು ಸರಿಯಾದ ಕೆಲಸವಾಗಿದೆ" ಎಂದು ಗುಟೆರೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಾಜಾದಲ್ಲಿ ನೀರು, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.  ಇತ್ತೀಚಿನ ವರದಿ ಪ್ರಕಾರ, 1300 ಜನರು ಸಾವನ್ನಪ್ಪಿದ್ದಾರೆ, 3600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.

SCROLL FOR NEXT