ವಿದೇಶ

ಇಸ್ರೇಲ್ ಅಥವಾ ಗಾಜಾಕ್ಕೆ ಅಮೆರಿಕ ಪಡೆ ಕಳುಹಿಸುವುದಿಲ್ಲ: ಕಮಲಾ ಹ್ಯಾರಿಸ್

Nagaraja AB

ನ್ಯೂಯಾರ್ಕ್:  ಸಂಘರ್ಷದ ಮಧ್ಯೆ ಇಸ್ರೇಲ್ ಅಥವಾ ಗಾಜಾಕ್ಕೆ ಸೇನಾಪಡೆ ಕಳುಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಭಾನುವಾರ ಸಿಬಿಎಸ್‌ಗೆ  ನೀಡಿದ ಸಂದರ್ಶನದಲ್ಲಿ ಯುದ್ಧ ಪೀಡಿತ ಪ್ರದೇಶದಲ್ಲಿ ಅಮೆರಿಕ ಪಡೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಮಲಾ ಹ್ಯಾರಿಸ್, ಇಸ್ರೇಲ್ ಅಥವಾ ಗಾಜಾ ಪಟ್ಟಿಗೆ ಸೇನಾಪಡೆ ಕಳುಹಿಸುವ ಯಾವುದೇ ಉದ್ದೇಶವಿಲ್ಲ ಅಥವಾ ಯೋಜನೆಗಳಿಲ್ಲ ಎಂದು ಸ್ಪಷ್ಪಪಡಿಸಿದರು. 

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ನಡೆದ ಚರ್ಚೆ ಮತ್ತು ಫೋನ್ ಸಂಭಾಷಣೆಯಲ್ಲಿ ಪಾಲ್ಗೊಂಡ ಉಪಾಧ್ಯಕ್ಷೆ, ಸರ್ಕಾರದ ಯೋಜನೆಗಳಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ ಹಕ್ಕನ್ನು ತಾನು ಬೆಂಬಲಿಸುತ್ತೇನೆ ಎಂದು ಹೇಳಿದರು. 

ಅಂದಾಜಿನ ಪ್ರಕಾರ, ಯುದ್ಧದಲ್ಲಿ ಕನಿಷ್ಠ 1,400 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ.  ಉಗ್ರರಿಂದ ತನ್ನ ನಾಗರಿಕರನ್ನು ರಕ್ಷಿಸಲು ಇಸ್ರೇಲ್ ಗೆ ಎಲ್ಲ ಹಕ್ಕಿದೆ. ಹಮಾಸ್ ಮತ್ತು ಪ್ಯಾಲೆಸ್ಟೀನಿಯನ್ನರ ನಡುವೆ ಯಾವುದೇ ಘರ್ಷಣೆ ಇಲ್ಲ, ಪ್ಯಾಲೇಸ್ಟಿನಿಯನ್ನರು ಸುರಕ್ಷತೆ ಮತ್ತು ಭದ್ರತೆ, ಸ್ವ-ನಿರ್ಣಯ ಮತ್ತು ಘನತೆಯ ಸಮಾನ ಕ್ರಮಗಳಿಗೆ ಅರ್ಹರಾಗಿದ್ದಾರೆ ಮತ್ತು ಯುದ್ಧದ ನಿಯಮಗಳನ್ನು ಪಾಲಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಮಾನವೀಯ ನೆರವು ಹರಿದುಬರುತ್ತದೆ  ಎಂದು ಹ್ಯಾರಿಸ್ ಹೇಳಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. 

SCROLL FOR NEXT