ವಿದೇಶ

ಅಮೆರಿಕಾದ "ದೊಡ್ಡಣ್ಣನ" ಪಾತ್ರ ಪಲ್ಲಟವಾಗುತ್ತಿದೆ; ಯುಎಸ್ ಮಲ್ಟಿಪೋಲಾರ್ ಜಗತ್ತಿಗೆ ಹೊಂದಿಕೊಳ್ಳುತ್ತಿದೆ: ಜೈಶಂಕರ್ 

Srinivas Rao BV

ನವದೆಹಲಿ/ ನ್ಯೂಯಾರ್ಕ್: ಅಮೇರಿಕಾ ಮಲ್ಟಿಪೋಲಾರ್ ಜಗತ್ತಿಗೆ ಹೊಂದಿಕೊಳ್ಳುತ್ತಿದೆ, ಆದರೆ ಆ ಪದವನ್ನು ಎಲ್ಲಿಯೂ ಬಳಸುತ್ತಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
 
ಮಲ್ಟಿಪೋಲಾರ್ ಜಗತ್ತು ಎಂದರೆ, ಜಾಗತಿಕವಾಗಿ ವಿಕೇಂದ್ರೀಕೃತ ಅಧಿಕಾರ, ಅಥವಾ ಎರಡು ರಾಷ್ಟ್ರಗಳು ಸಮಾನವಾದ ಶಕ್ತಿಯನ್ನು ಹೊಂದಿರುವುದಾಗಿದೆ.

ಮಲ್ಟಿಪೋಲಾರ್ ಗೆ ಸಂಬಂಧಿಸಿದಂತೆ ಆಕಾರವನ್ನು ನೀಡಲು  ಅಮೇರಿಕಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನ್ಯೂಯಾರ್ಕ್ ವಿದೇಶಾಂಗ ವ್ಯವಹಾರಗಳ ಪರಿಷತ್ ನ ಸಂವಾದಲ್ಲಿ ಜೈಶಂಕರ್ ಹೇಳಿದ್ದಾರೆ. 

ಸೆ.27 ರಿಂದ 30 ವರೆಗೆ ಜೈಶಂಕರ್, ಅಮೇರಿಕಾದಲ್ಲಿ ದ್ವಿಪಕ್ಷೀಯ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಜೈಶಂಕರ್ ಅವರ ಕಾರ್ಯಕ್ರಮವು ಅವರ ಸಹವರ್ತಿ ಆಂಟೋನಿ ಬ್ಲಿಂಕೆನ್, ಬಿಡೆನ್ ಆಡಳಿತದ ಹಿರಿಯ ಸದಸ್ಯರು, ಯುಎಸ್ ವ್ಯಾಪಾರ ಮುಖಂಡರು ಮತ್ತು ಚಿಂತಕರ ಟ್ಯಾಂಕ್‌ಗಳೊಂದಿಗೆ ಚರ್ಚೆಗಳನ್ನು ಒಳಗೊಂಡಿದೆ.

ಜಗತ್ತು ಹೆಚ್ಚು ಪ್ರಜಾಸತ್ತಾತ್ಮಕವಾಗಿರುವುದರಿಂದ ಮತ್ತು ಸಾರ್ವತ್ರಿಕವಾಗಿ ಅವಕಾಶಗಳು ಲಭ್ಯವಾಗಿರುವುದರಿಂದ, "ಇತರ ಉತ್ಪಾದನೆ ಮತ್ತು ಬಳಕೆಯ ಕೇಂದ್ರಗಳು ಬರುವುದು ಸಹಜ ಮತ್ತು ಜಗತ್ತಿನಲ್ಲಿ ಅಧಿಕಾರದ ಪುನರ್ವಿತರಣೆಯಾಗುವುದು ಸಹಜ ಮತ್ತು ಅದು ಸಂಭವಿಸಿದೆ" ಎಂದು ಸಚಿವರು ಹೇಳಿದ್ದಾರೆ.

ಇರಾಕ್ ಹಾಗೂ ಅಫ್ಘಾನಿಸ್ತಾನದ ದೀರ್ಘಾವಧಿಯ ಪರಿಣಾಮಗಳು ಅಮೇರಿಕಾ ಮಲ್ಟಿಪೋಲಾರ್ ಜಗತ್ತಿಗೆ ಹೊಂದಿಕೊಳ್ಳುತ್ತಿರುವುದರ ಭಾಗವಾಗಿದೆ. ನೀವು ಜಗತ್ತಿನಲ್ಲಿ ಯುನೈಟೆಡ್ ಸ್ಟೇಟ್ ನ ಪ್ರಾಬಲ್ಯವನ್ನು ಇತರರಿಗೆ ಹೋಲಿಸಿದರೆ ಅದರ ಸಾಪೇಕ್ಷ ಶಕ್ತಿಯನ್ನು ನೋಡಿದರೆ, ಅದು ಕಳೆದ ದಶಕದಲ್ಲಿ ಬದಲಾಗಿದೆ," ಎಂದು ಜೈಶಂಕರ್ ತಾರ್ಕಿಕವಾಗಿ ವಿವರಿಸಿದ್ದಾರೆ.

"ಬಹುಶಃ", "ನಾವು ಈಗಾಗಲೇ ಮಲ್ಟಿಪೋಲಾರ್ ಜಗತ್ತನ್ನು ಪ್ರವೇಶಿಸಿದ್ದೇವೆ, ಅಲ್ಲಿ ಯುಎಸ್ ಇನ್ನು ಮುಂದೆ "ನಾನು ಮೂಲತಃ ನನ್ನ ಮಿತ್ರರಾಷ್ಟ್ರಗಳೊಂದಿಗೆ ಮಾತ್ರ ಕೆಲಸ ಮಾಡುತ್ತೇನೆ" ಎಂದು ಹೇಳುವ ಸ್ಥಿತಿ ಇಲ್ಲ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. 

ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಯುಎಸ್ ಅನ್ನು ಒಳಗೊಂಡಿರುವ ಕ್ವಾಡ್ -- ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಅವರು ಹೇಳಿದ್ದು ಕ್ವಾಡ್ ಗುಂಪಿನಲ್ಲಿ, ಭಾರತವು ಮಿತ್ರರಾಷ್ಟ್ರವಲ್ಲ, ಆದರೆ ಆಸ್ಟ್ರೇಲಿಯಾ ಮತ್ತು ಜಪಾನ್ ಒಪ್ಪಂದ ಆಧಾರಿತ ಮಿತ್ರರಾಷ್ಟ್ರಗಳಾಗಿವೆ ಎಂದು ಜೈಶಂಕರ್ ಹೇಳಿದರು.

ಭಾರತ ಮತ್ತು ಯುಎಸ್ ಪರಸ್ಪರರ ಹಿತಾಸಕ್ತಿಗಳನ್ನು ಹೆಚ್ಚಿಸುವಲ್ಲಿ ವಹಿಸಬಹುದಾದ ಪಾತ್ರಗಳಿಗೆ ಅಗಾಧವಾದ ಸಾಧ್ಯತೆಗಳ ಮನ್ನಣೆ ಇದೆ ಎಂದು ಸಚಿವರು ಹೇಳಿದರು.

SCROLL FOR NEXT