ಇಸ್ರೇಲ್ ದಾಳಿಗೆ ಮೃತಪಟ್ಟ ಕಾರ್ಯಕರ್ತರು
ಇಸ್ರೇಲ್ ದಾಳಿಗೆ ಮೃತಪಟ್ಟ ಕಾರ್ಯಕರ್ತರು online desk
ವಿದೇಶ

ಗಾಜಾದಲ್ಲಿ ಸಹಾಯ ಕಾರ್ಯಕರ್ತರ ಹತ್ಯೆ: ಬೈಡನ್, ಸುನಕ್ ಆಕ್ಷೇಪದ ಬೆನ್ನಲ್ಲೇ IDF ಕ್ಷಮೆ ಯಾಚನೆ!

Srinivas Rao BV

ಗಾಜಾ: ಗಾಜಾದಲ್ಲಿ ಸಹಾಯ ಕಾರ್ಯಕರ್ತರ ಹತ್ಯೆ ಮಾಡಿದ ಪ್ರಕರಣದಲ್ಲಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕ್ಷಮೆ ಕೋರಿದೆ. ಗಾಜಾದಲ್ಲಿ 7 ಕಾರ್ಯಕರ್ತರು ಇಸ್ರೆಲ್ ರಕ್ಷಣಾ ಪಡೆಯ ದಾಳಿಗೆ ಸಾವನ್ನಪ್ಪಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿತ್ತು. ಅಮೇರಿಕಾ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜಾಗತಿಕ ನಾಯಕರು ಈ ಘಟನೆಯನ್ನು ಖಂಡಿಸಿದ್ದರು.

ಎಚ್ಚೆತ್ತುಕೊಂಡಿರುವ ಇಸ್ರೆಲ್ ರಕ್ಷಣಾ ಪಡೆಯ ಮುಖ್ಯಸ್ಥ ಹರ್ಜಿ ಹಲೇವಿ, ಇಸ್ರೇಲ್ ಸೇನೆ ಸಹಾಯ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದು ಗಂಭೀರ ತಪ್ಪು, ಇದು ಆಗಬಾರದಿತ್ತು. WCK ಸದಸ್ಯರಿಗೆ ಉದ್ದೇಶಪೂರ್ವಕವಲ್ಲದ ಹಾನಿಗಾಗಿ ನಾವು ವಿಷಾದಿಸುತ್ತೇವೆ, ”ಎಂದು ಹೇಳಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯನ್ ಮತ್ತು ಪೋಲಿಷ್ ಸರ್ಕಾರಗಳು ಸಹಾಯ ಕಾರ್ಯಕರ್ತರ ಸಾವಿನ ವಿಷಯದಲ್ಲಿ ಇಸ್ರೇಲ್ ನ್ನು ಟೀಕಿಸಿದ್ದರು. ಅಕ್ಟೋಬರ್ ನಲ್ಲಿ ಇಸ್ರೇಲ್- ಗಾಜಾ ನಡುವೆ ಯುದ್ಧ ಆರಂಭವಾದಾಗಿನಿಂದಲೂ ವರ್ಲ್ಡ್ ಸೆಂಟ್ರಲ್ ಕಿಚನ್ ಎಂಬ ಸ್ವಯಂ ಸೇವಕ ಸಂಸ್ಥೆಯ ಕಾರ್ಯಕರ್ತರು ನಿರಾಶ್ರಿತ ಗಾಜಾ ಜನಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದರು.

ಕಡಲ ಮಾರ್ಗದಲ್ಲಿ ಗಾಜಾಕ್ಕೆ ತಂದ 100 ಟನ್ ಮಾನವೀಯ ಆಹಾರ ಸಹಾಯವನ್ನು ಇಳಿಸಿದ್ದ ಬೆನ್ನಲ್ಲೆ ಸೋಮವಾರ 7 ಮಂದಿ ಕಾರ್ಮಿಕರನ್ನು ಇಸ್ರೇಲ್ ಸೇನಾ ಪಡೆ ಕೊಂದಿದೆ ಎಂದು ಸಂಘಟನೆ ಆರೋಪಿಸಿತ್ತು.

SCROLL FOR NEXT