ವಯಸ್ಕರ ಸೈಟ್‌ ಗಳು
ವಯಸ್ಕರ ಸೈಟ್‌ ಗಳು 
ವಿದೇಶ

Pornhub, XVideos, Stripchat ಗೆ ಕಟ್ಟುನಿಟ್ಟಿನ ನಿಯಮ ಜಾರಿ! ಸಾವಿರಾರು ವಿಡಿಯೋ ತೆಗೆಯಲು ಆದೇಶ!

Srinivasamurthy VN

ಬ್ರಸೆಲ್ಸ್: ಖ್ಯಾತ ವಯಸ್ಕರ ವಿಡಿಯೋ ತಾಣಗಳಾದ ಪೋರ್ನ್‌ಹಬ್, ಸ್ಟ್ರಿಪ್‌ಚಾಟ್ ಮತ್ತು ಎಕ್ಸ್‌ವೀಡಿಯೋಗಳಿದೆ ಯೂರೋಪಿಯನ್ ಒಕ್ಕೂಟದ ಆಡಳಿತ ಶಾಕ್ ನೀಡಿದ್ದು, ಅಶ್ಲೀಲ ಕಟೆಂಟ್ ತಾಣಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ.

ಆ ಮೂಲಕ ಹೊಸ ನಿಯಮಗಳ ಜಾರಿ ಮಾತ್ರವಲ್ಲದೇ ನಿಯಮದಡಿಯಲ್ಲಿ ಕಾನೂನು ಬಾಹಿರವಾಗುವ ಸಾವಿರಾರು ವಿಡಿಯೋಗಳನ್ನು ತೆಗೆಯುವಂತೆಯೂ ಆದೇಶ ನೀಡಿದೆ.

ಯೂರೋಪಿಯನ್ ಒಕ್ಕೂಟದ ಹೊಸ ಡಿಜಿಟಲ್ ಕಟೆಂಟ್ ನಿಯಮಗಳ ಅನ್ವಯ ನಿಯಮ ಅನುಸರಿಸುವುದು ಮಾತ್ರವಲ್ಲದೇ ಅಪಾಯದ ಮೌಲ್ಯಮಾಪನ ವರದಿಗಳನ್ನು ಮಾಡುವುದು, ಅವರ ಸೇವೆಗಳ ನಿಬಂಧನೆಗೆ ಸಂಬಂಧಿಸಿದ ವ್ಯವಸ್ಥಿತ ಅಪಾಯಗಳನ್ನು ಪರಿಹರಿಸಲು ತಗ್ಗಿಸುವ ಕ್ರಮಗಳನ್ನು ಕೈಗೊಳ್ಳುವುದನ್ನು ಈ ತಾಣಗಳು ಮಾಡಬೇಕಾಗುತ್ತದೆ.

ಅಲ್ಲದೆ ತಮ್ಮ ಸೇವೆಗಳಿಗೆ ಸಂಬಂಧಿಸಿದ ವ್ಯವಸ್ಥಿತ ಅಪಾಯಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಯೂರೋಪಿಯನ್ ಒಕ್ಕೂಟದ ಆಡಳಿತ ಶುಕ್ರವಾರ ತನ್ನ ಆದೇಶದಲ್ಲಿ ತಿಳಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಡಿಜಿಟಲ್ ಸರ್ವೀಸ್ ಆಕ್ಟ್ (ಡಿಎಸ್‌ಎ) ಅಡಿಯಲ್ಲಿ ಈ ಮೂರು (Pornhub, XVideos, Stripchat) ಕಂಪನಿಗಳನ್ನು ಅತಿ ದೊಡ್ಡ ಆನ್‌ಲೈನ್ ಕಟೆಂಟ್ ಪ್ಲಾಟ್‌ಫಾರ್ಮ್‌ಗಳಾಗಿ ಗೊತ್ತುಪಡಿಸಲಾಗಿದೆ. ಇದು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಕಾನೂನುಬಾಹಿರ ಮತ್ತು ಹಾನಿಕಾರಕ ಕಟೆಂಟ್ ಗಳನ್ನು ಅಥವಾ ವಿಡಿಯೋಗಳನ್ನು ತೆಗೆದುಹಾಕಲು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತದೆ.

ಪೋರ್ನ್‌ಹಬ್ ಮತ್ತು ಸ್ಟ್ರಿಪ್‌ಚಾಟ್ ಈ DSA ಕಟ್ಟುಪಾಡುಗಳನ್ನು ಏಪ್ರಿಲ್ 21 ರಿಂದಲೇ ಅನುಸರಿಸಬೇಕಾಗುತ್ತದೆ, XVideos ಏಪ್ರಿಲ್ 23 ರಂದು ಅನುಸರಿಸಬೇಕು ಎಂದು EU ಕಾರ್ಯನಿರ್ವಾಹಕರು ಹೇಳಿದ್ದಾರೆ.

ಕಂಪನಿಗಳು ಜಾಹೀರಾತುಗಳಿಗೆ ಸಂಬಂಧಿಸಿದ ಮತ್ತು ಸಂಶೋಧಕರಿಗೆ ದತ್ತಾಂಶ ಪ್ರವೇಶವನ್ನು ಒದಗಿಸುವುದು ಸೇರಿದಂತೆ ಹೆಚ್ಚುವರಿ ಪಾರದರ್ಶಕತೆ ಬಾಧ್ಯತೆಗಳನ್ನು ಪೂರೈಸಬೇಕಾಗುತ್ತದೆ. DSA ಉಲ್ಲಂಘನೆಗಳಿಗಾಗಿ ಕಂಪನಿಗಳು ತಮ್ಮ ಜಾಗತಿಕ ವಾರ್ಷಿಕ ವಹಿವಾಟಿನ ಶೇ.6% ರಷ್ಟು ದಂಡವನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT