ಮೊಹಮ್ಮದ್ ಮುಯಿಝು
ಮೊಹಮ್ಮದ್ ಮುಯಿಝು AFP
ವಿದೇಶ

ಮಾಲ್ಡೀವ್ಸ್ ಸಂಸತ್ ಚುನಾವಣೆ: ಚೀನಾ ಬೆಂಬಲಿತ ಮುಯಿಝಗೆ ಭರ್ಜರಿ ಗೆಲುವು, ಭಾರತದ ಪರ MDPಗೆ ಹೀನಾಯ ಸೋಲು!

Vishwanath S

ಮಾಲೆ: ಮಾಲ್ಡೀವ್ಸ್‌ನ ಸಂಸತ್ತಿನ ಮಜ್ಲಿಸ್‌ಗೆ ನಡೆದ ಚುನಾವಣೆಯಲ್ಲಿ ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಆಡಳಿತ ಪಕ್ಷ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮಾಲ್ಡೀವ್ಸ್‌ನ 93 ಸ್ಥಾನಗಳಲ್ಲಿ 90ರಲ್ಲಿ ಸ್ಪರ್ಧಿಸಿತ್ತು.

ಮಾಲ್ಡೀವ್ಸ್ ಸಂಸತ್ತಿನಲ್ಲಿ PNC ಬಹುಮತವನ್ನು ಪಡೆದುಕೊಂಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಾಲ್ಡೀವ್ಸ್ ಡೆವಲಪ್‌ಮೆಂಟ್ ಅಲಯನ್ಸ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಅಧ್ಯಕ್ಷ ಮುಯಿಝುಗೆ ಚುನಾವಣೆಗಳು ಏಕೆ ಮುಖ್ಯ?

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊಹಮ್ಮದ್ ಸೋಲಿಹ್ ಅವರನ್ನು ಸೋಲಿಸುವ ಮೂಲಕ ಮುಯಿಝು ಅಧ್ಯಕ್ಷರಾದರು. ಸೊಲಿಹ್ ಅವರ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಪ್ರಸ್ತುತ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿತ್ತು. ಇದು ಮುಯಿಜ್ಜುಗೆ ಹೊಸ ಬಿಲ್‌ಗಳನ್ನು ಅಂಗೀಕರಿಸಲು ಕಷ್ಟಕರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಹೊಸ ಕಾನೂನುಗಳನ್ನು ಮಾಡಲು, ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷವು ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.

ಎಷ್ಟು ಪಕ್ಷಗಳು ಮತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ?

ಸಂಸತ್ತಿನ 93 ಸ್ಥಾನಗಳಿಗೆ ಆರು ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಗುಂಪುಗಳು 368 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜನಸಂಖ್ಯೆಯ ಹೆಚ್ಚಳದ ನಂತರ, ಹಿಂದಿನ ಸಂಸತ್ತಿಗಿಂತ ಆರು ಹೆಚ್ಚು ಸ್ಥಾನಗಳಿವೆ. ಚುನಾವಣೆಯಲ್ಲಿ ಸುಮಾರು 2,84,000 ಜನರು ಮತ ಚಲಾಯಿಸುತ್ತಿದ್ದಾರೆ. ಮುಯಿಜ್ಜುವಿನ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಸ್ವತಂತ್ರರು ಕಣದಲ್ಲಿದ್ದಾರೆ.

SCROLL FOR NEXT