ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ವಿದೇಶ

2022 ರಲ್ಲಿ 65,000ಕ್ಕೂ ಅಧಿಕ ಭಾರತೀಯರಿಗೆ US ಪೌರತ್ವ!

Nagaraja AB

ವಾಷಿಂಗ್ಟನ್: ಇತ್ತೀಚಿನ ಕಾಂಗ್ರೆಷನಲ್ ವರದಿ ಪ್ರಕಾರ, ಒಟ್ಟು 65,960 ಭಾರತೀಯರು ಅಧಿಕೃತವಾಗಿ US ಪ್ರಜೆಗಳಾಗಿದ್ದಾರೆ. ಅಮೆರಿಕಾದಲ್ಲಿ ಹೊಸ ನಾಗರಿಕರಲ್ಲಿ ಮೆಕ್ಸಿಕೋ ನಂತರ ಭಾರತವು ಎರಡನೇ ಅತಿದೊಡ್ಡ ಮೂಲ ದೇಶವಾಗಿದೆ.

US ಜನಗಣತಿ ಬ್ಯೂರೋದ ಅಮೇರಿಕನ್ ಸಮುದಾಯ ಸಮೀಕ್ಷೆಯ ಮಾಹಿತಿ ಪ್ರಕಾರ, 2022 ರಲ್ಲಿ ಅಂದಾಜು 46 ಮಿಲಿಯನ್ ವಿದೇಶಿ ಸಂಜಾತ ವ್ಯಕ್ತಿಗಳು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಇದು ಒಟ್ಟಾರೇ 333 ಮಿಲಿಯನ್ ಯುಎಸ್ ಜನಸಂಖ್ಯೆಯಲ್ಲಿ ಸರಿಸುಮಾರು ಶೇ.14 ರಷ್ಟಿದೆ. ಇವರಲ್ಲಿ 24.5 ಮಿಲಿಯನ್, ಸುಮಾರು ಶೇ. 53 ರಷ್ಟು ಜನರು ಸ್ವಾಭಾವಿಕ ನಾಗರಿಕರಾಗಿ ತಮ್ಮ ಸ್ಥಿತಿಯನ್ನು ವರದಿ ಮಾಡಿದ್ದಾರೆ.

2022 ರ ಆರ್ಥಿಕ ವರ್ಷದಲ್ಲಿ ಸ್ವತಂತ್ರ ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ ವರದಿ ಪ್ರಕಾರ, ಒಟ್ಟು 969,380 ವ್ಯಕ್ತಿಗಳು ಸ್ವಾಭಾವಿಕ ಯುಎಸ್ ನಾಗರಿಕರಾಗಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋದ ಜನರಿದ್ದಾರೆ. ತದನಂತರ ಭಾರತ, ಫಿಲಿಪೈನ್ಸ್, ಕ್ಯೂಬಾ ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ವ್ಯಕ್ತಿಗಳು ಇದ್ದಾರೆ ಎಂದು ಹೇಳಿದೆ.

SCROLL FOR NEXT