ಜೋ ಬೈಡನ್ online desk
ವಿದೇಶ

ನಾನು ಏನು ಮಾಡುತ್ತಿದ್ದೇನೆ?: ಶ್ವೇತ ಭವನದಲ್ಲಿ ಜೋ ಬೈಡನ್ ಪ್ರಶ್ನೆ; ಸಿಬ್ಬಂದಿ ಕಕ್ಕಾಬಿಕ್ಕಿ!

ಜೆರ್ಸಿಯನ್ನು ಜೋಪಾನವಾಗಿ ತೆಗೆದುಕೊಂಡು ಹೋಗಲು ಬಂದ ಸಿಬ್ಬಂದಿಗೆ ಜೋ ಬೈಡನ್, ನನ್ನ ಜೆರ್ಸಿಯನ್ನೇಕೆ ಕಸಿಯುತ್ತಿದ್ದೀರ? ಎಂದು ಪ್ರಶ್ನಿಸಿದ್ದಾರೆ.

ವಾಷಿಂಗ್ ಟನ್: ಹಲವು ದಿನಗಳಿಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ನೆನಪಿನ ಶಕ್ತಿ ಕುಗ್ಗಿರುವುದರ ಬಗ್ಗೆ ಹಲವು ವರದಿಗಳು ಪ್ರಕಟವಾಗಿತ್ತು.

ಜೋ ಬೈಡನ್ ನೆನಪಿನ ಶಕ್ತಿ ಬಗ್ಗೆ ರಿಪಬ್ಲಿಕನ್ ಪಕ್ಷದ ಸದಸ್ಯರೂ ಕಳವಳ ವ್ಯಕ್ತಪಡಿಸಿದ್ದರು. ಈಗ ಬೈಡನ್ ನೆನಪಿನ ಶಕ್ತಿ ಕುಗ್ಗಿದೆಯೇ? ಎಂಬ ಅನುಮಾನ ಬಲಗೊಳ್ಳುವಂತಹ ಮತ್ತೊಂದು ಘಟನೆ ಶ್ವೇತ ಭವನದಲ್ಲಿ ನಡೆದಿದೆ.

ಶ್ವೇತ ಭವನದಲ್ಲಿ ಟೆಕ್ಸಾಸ್ ರೇಂಜರ್ಸ್ ವರ್ಲ್ಡ್ ಸೀರಿಸ್ ವಿಕ್ಟರಿ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಜೋ ಬೈಡನ್ ಭಾಗಿಯಾಗಿದ್ದರು. ಅಮೇರಿಕಾ ಅಧ್ಯಕ್ಷರಿಗೆ ಟೆಕ್ಸಾಸ್ ರೇಂಜರ್ಸ್ ತಂಡ ನೆನಪಿನ ಕಾಣಿಕೆಯಾಗಿ ಪರ್ಸನಲೈಸ್ಡ್ ಜೆರ್ಸಿ ಹಾಗೂ ಕೌ ಬಾಯ್ ಬೂಟ್ ಗಳನ್ನು ಉಡುಗೊರೆಯಾಗಿ ನೀಡಿತ್ತು.

ಉಡುಗೊರೆ ಸ್ವೀಕರಿಸಿದ ಬಳಿಕ ಜೋ ಬೈಡನ್ ಏನು ಮಾಡಬೇಕೆಂಬುದು ತೋಚದೆ, ಈಗ ನಾನೇನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಇನ್ನು ಬೈಡನ್ ಸ್ವೀಕರಿಸಿದ್ದ ಜೆರ್ಸಿಯನ್ನು ತೆಗೆದುಕೊಂಡು ಹೋಗಲು ಬಂದ ಸಹಾಯಕ ಸಿಬ್ಬಂದಿ ಬೈಡನ್ ಆಡಿದ ಮಾತು ಕೇಳಿ ಕಕ್ಕಾಬಿಕ್ಕಿಯಾದ ಘಟನೆಯೂ ನಡೆದಿದೆ. ಜೆರ್ಸಿಯನ್ನು ಜೋಪಾನವಾಗಿ ತೆದುಕೊಂಡು ಹೋಗಲು ಬಂದ ಸಿಬ್ಬಂದಿಗೆ ಜೋ ಬೈಡನ್, ನನ್ನ ಜೆರ್ಸಿಯನ್ನೇಕೆ ಕಸಿಯುತ್ತಿದ್ದೀರ? ಎಂದು ಪ್ರಶ್ನಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಹಾಲ್ ನಲ್ಲಿ ಹಲವು ಸಮಾರಂಭಗಳಿಗೆ ಸಾಕ್ಷಿಯಾಗಿದ್ದರೂ ಅಧ್ಯಕ್ಷ ಜೋ ಬೈಡನ್ ದಾರಿಗಾಗಿ ಗೊಂದಲಕ್ಕೀಡಾಗಿ ಎರಡೂ ಕೈ ಎತ್ತಿ ತಡಬಡಾಯಿಸಿದ್ದೂ ಸಹ ಬೈಡನ್ ಸ್ಮೃತಿ ಶಕ್ತಿ ಕುಗ್ಗಿರುವುದನ್ನು ತೋರಿಸುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ತಕ್ಷಣವೇ ಎಚ್ಚೆತ್ತ ಶ್ವೇತ ಭವನ ಸಿಬ್ಬಂದಿ ಅಧ್ಯಕ್ಷರು ಈಗ ನಿರ್ಗಮಿಸುತ್ತಿದ್ದಾರೆ ಎಂದು ಘೋಷಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

“ಜೋ ಬಿಡೆನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಲ್ಲದಿದ್ದರೆ, ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅರ್ಹರಲ್ಲ. ಅವರು ಕೂಡಲೇ ಕಚೇರಿಗೆ ರಾಜೀನಾಮೆ ನೀಡಬೇಕ ಎಂದು ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಇತ್ತೀಚೆಗೆ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ