ಕಟ್ಟಡಕ್ಕೆ ಢಿಕ್ಕಿಯಾದ ವಿಮಾನ 
ವಿದೇಶ

Plane Crash: 'ನಿಯಂತ್ರಣಕ್ಕೆ ಸಿಕ್ತಿಲ್ಲ'; ಕಟ್ಟಡಕ್ಕೆ ವಿಮಾನ ಢಿಕ್ಕಿ, Video

ಅಮೆರಿಕದ ಹವಾಯಿಯಲ್ಲಿರುವ ಹೊನೊಲುಲು ವಿಮಾನ ನಿಲ್ದಾಣದ ಬಳಿ ಈ ಘಟನೆ ನೇಡೆದಿದ್ದು, ವಿಮಾನ ನಿಲ್ದಾಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸೆಸ್ನಾ 208 ಪ್ರಯಾಣಿಕ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ.

ಹೊನೊಲುಲು: ಅಮೆರಿಕದ ಹವಾಯಿಯಲ್ಲಿ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಕಟ್ಟಡಕ್ಕೆ ಢಿಕ್ಕಿಯಾಗಿ ಪತನವಾಗಿದೆ.

ಅಮೆರಿಕದ ಹವಾಯಿಯಲ್ಲಿರುವ ಹೊನೊಲುಲು ವಿಮಾನ ನಿಲ್ದಾಣದ ಬಳಿ ಈ ಘಟನೆ ನೇಡೆದಿದ್ದು, ವಿಮಾನ ನಿಲ್ದಾಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸೆಸ್ನಾ 208 ಪ್ರಯಾಣಿಕ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ.

ಮೂಲಗಳ ಪ್ರಕಾರ ತರಬೇತಿ ಹಾರಾಟದಲ್ಲಿದ್ದ ವಿಮಾನವು ವೇಗವಾಗಿ ತನ್ನ ಎತ್ತರ ಕಳೆದುಕೊಂಡು ಎಡಕ್ಕೆ ತಿರುಗಿ ಖಾಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಮತ್ತು ತರಬೇತಿ ಪೈಲಟ್ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರೆಸ್ಟನ್ ಕಲುಹಿವಾ (ಪ್ರಯಾಣಿಕ) 22 ವರ್ಷದ ತರಬೇತಿ ಪೈಲಟ್ ಹಿರಾಮ್ ಡಿಫ್ರೈಸ್ ಎಂದು ಗುರುತಿಸಲಾಗಿದೆ.

ಕಮಲಾ ಏರ್ ನಿರ್ವಹಿಸುತ್ತಿದ್ದ ವಿಮಾನವು ಅಪಘಾತದ ನಂತರ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಕೂಡಲೇ ಹೊನೊಲುಲು ಅಗ್ನಿಶಾಮಕ ಇಲಾಖೆ, ಪೊಲೀಸರು ಮತ್ತು ನಗರದ ತುರ್ತು ನಿರ್ವಹಣಾ ಇಲಾಖೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಕಟ್ಟಡದಲ್ಲಿ ಯಾರೂ ಇಲ್ಲದ ವೇಳೆ ವಿಮಾನ ಢಿಕ್ಕಿಯಾಗಿದೆ.

ಹೀಗಾಗಿ ಇಲ್ಲಿ ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಫೆಡರಲ್ ವಿಮಾನಯಾನ ಆಡಳಿತ (ಎಫ್‌ಎಎ) ಅಪಘಾತದ ಬಗ್ಗೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೂ ಮೊದಲು ಪೈಲಟ್ "ಕಾಮಕಾ 689, ನಾವು, ನಾವು, ನಾವು ಇಲ್ಲಿ ನಿಯಂತ್ರಣ ತಪ್ಪಿದ್ದೇವೆ".. ಎಂದು ನಿಯಂತ್ರಣ ಕೇಂದ್ರಕ್ಕೆ ಸಂದೇಶ ರವಾನಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT