ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ನಡೆದ ಘಟನೆಯ ನಂತರ ಕ್ರಿಸ್ಮಸ್ ಮಾರುಕಟ್ಟೆಯ ನೋಟ. 
ವಿದೇಶ

ಜರ್ಮನ್ ಕ್ರಿಸ್‌ಮಸ್ ಮಾರುಕಟ್ಟೆಗೆ ನುಗ್ಗಿದ ಕಾರು: ಇಬ್ಬರು ಸಾವು, 60 ಮಂದಿಗೆ ಗಾಯ; ಸೌದಿ ಮೂಲದ ವ್ಯಕ್ತಿ ಬಂಧನ

ವಾರಾಂತ್ಯ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದಾಗ, ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಮಾರುಕಟ್ಟೆಗೆ ಕಾರು ನುಗ್ಗಿದ ಕೂಡಲೇ ಚಾಲಕನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಯಿತು.

ಮ್ಯಾಗ್ಡೆಬರ್ಗ್: ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ನಿನ್ನೆ ಶುಕ್ರವಾರ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ಕಾರೊಂದು ನುಗ್ಗಿ ಇಬ್ಬರು ಮೃತಪಟ್ಟು ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ, ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಾಂತ್ಯ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದಾಗ, ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಮಾರುಕಟ್ಟೆಗೆ ಕಾರು ನುಗ್ಗಿದ ಕೂಡಲೇ ಚಾಲಕನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಯಿತು. ಜರ್ಮನ್ ನ್ಯೂಸ್ ಏಜೆನ್ಸಿ ಡಿಪಿಎ ಬಿತ್ತರಿಸಿದ ದೃಶ್ಯಾವಳಿಗಳಲ್ಲಿ ರಸ್ತೆಯ ಮಧ್ಯದಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಶಂಕಿತನ ಬಂಧನವಾಗಿದೆ.

ಘಟನೆಯಲ್ಲಿ 15 ಜನರು ಗಂಭೀರವಾಗಿ ಗಾಯಗೊಂಡಿರುವ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕ್ರಿಸ್ ಮಸ್, ಹೊಸವರ್ಷ ಆಚರಣೆಯ ದಿನಗಳಲ್ಲಿ ಈ ಹಿಂಸಾಚಾರವು ನಗರ ಜನತೆಯನ್ನು ಬೆಚ್ಚಿಬೀಳಿಸಿದೆ, ಶತಮಾನಗಳ-ಹಳೆಯ ಜರ್ಮನ್ ಸಂಪ್ರದಾಯದ ಭಾಗವಾಗಿರುವ ಹಬ್ಬದ ಕಾರ್ಯಕ್ರಮವನ್ನು ನಿನ್ನೆಯ ಘಟನೆ ಕೊಂದುಹಾಕಿದೆ. ಮುನ್ನೆಚ್ಚರಿಕೆಯಾಗಿ ವಾರಾಂತ್ಯದ ಕ್ರಿಸ್ಮಸ್ ಮಾರುಕಟ್ಟೆಗಳನ್ನು ಜರ್ಮನ್ ನ ಇತರ ಪಟ್ಟಣಗಳಲ್ಲಿ ಬಂದ್ ಮಾಡಲಾಗಿದೆ.

ಶಂಕಿತ ವ್ಯಕ್ತಿ 2006 ರಲ್ಲಿ ಜರ್ಮನಿಗೆ ತೆರಳಿದ 50 ವರ್ಷದ ಸೌದಿ ಮುೂಲದ ವೈದ್ಯ ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ರಾಜ್ಯದ ಆಂತರಿಕ ಸಚಿವ ತಮಾರಾ ಝಿಸ್ಚಾಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮ್ಯಾಗ್ಡೆಬರ್ಗ್‌ನ ದಕ್ಷಿಣಕ್ಕೆ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿರುವ ಬರ್ನ್‌ಬರ್ಗ್‌ನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ ಎಂದರು.

ಸ್ಯಾಕ್ಸೋನಿ-ಅನ್ಹಾಲ್ಟ್‌ನ ರಾಜಧಾನಿಯಾಗಿ ಕಾರ್ಯನಿರ್ವಹಿಸುವ ಬರ್ಲಿನ್‌ನ ಪಶ್ಚಿಮಕ್ಕೆ ಸುಮಾರು 2,40,000 ಜನರಿರುವ ಮ್ಯಾಗ್ಡೆಬರ್ಗ್‌ನಲ್ಲಿ ಹಿಂಸಾಚಾರ ಸಂಭವಿಸಿದೆ. ಎಂಟು ವರ್ಷಗಳ ಹಿಂದೆ ಇಸ್ಲಾಮಿಕ್ ಉಗ್ರಗಾಮಿ ಬರ್ಲಿನ್‌ನಲ್ಲಿ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ಟ್ರಕ್ ನ್ನು ಓಡಿಸಿ 13 ಜನರನ್ನು ಕೊಂದು ಅನೇಕರು ಗಾಯಗೊಂಡಿದ್ದರು.

ಕ್ರಿಸ್‌ಮಸ್ ಮಾರುಕಟ್ಟೆಗಳು ಜರ್ಮನ್ ಸಂಸ್ಕೃತಿಯ ಒಂದು ದೊಡ್ಡ ಭಾಗವಾಗಿದ್ದು, ಮಧ್ಯಯುಗದಿಂದಲೂ ಪಾಲಿಸಿಕೊಂಡು ಬಂದ ವಾರ್ಷಿಕ ರಜಾ ಸಂಪ್ರದಾಯದಂತೆ ಮತ್ತು ಪಾಶ್ಚಿಮಾತ್ಯ ಪ್ರಪಂಚದ ಬಹುಭಾಗಕ್ಕೆ ಯಶಸ್ವಿಯಾಗಿ ರಫ್ತು ಮಾಡಲಾಗುತ್ತಿದೆ. ಇದು ಬರ್ಲಿನ್ ನಲ್ಲಿ ನಡೆಯುತ್ತದೆ. 100 ಕ್ಕೂ ಹೆಚ್ಚು ಮಾರುಕಟ್ಟೆಗಳು ಕಳೆದ ತಿಂಗಳ ಕೊನೆಯಲ್ಲಿ ತೆರೆಯಲ್ಪಟ್ಟವು ಮತ್ತು ಮಲ್ಲ್ಡ್ ವೈನ್, ಹುರಿದ ಬಾದಾಮಿ ಮತ್ತು ಬ್ರಾಟ್‌ವರ್ಸ್ಟ್‌ನ ವಾಸನೆಯನ್ನು ರಾಜಧಾನಿಗೆ ತಂದವು. ಇತರ ಮಾರುಕಟ್ಟೆಗಳು ದೇಶಾದ್ಯಂತ ವಿಪುಲವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT