ಲೇಖಕರೊಂದಿಗೆ ಪ್ರಧಾನಿ ಮೋದಿ 
ವಿದೇಶ

ರಾಮಾಯಣ, ಮಹಾಭಾರತ ಅರೇಬಿಕ್ ಗೆ ಅನುವಾದ: ಭೇಟಿಯಾದ ಪ್ರಧಾನಿ ಮೋದಿ

ಇಂದು ಲೇಖಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಎರಡು ಮಹಾಕಾವ್ಯಗಳ ಅರೇಬಿಕ್ ಆವೃತ್ತಿಗಳಿಗೆ ಸಹಿ ಹಾಕಿದರು.

ಕುವೈತ್‌: ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ದಿನವಾದ ಶನಿವಾರ ಭಾರತದ ಎರಡು ಅಪ್ರತಿಮ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣವನ್ನು ಅರೇಬಿಕ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ ಇಬ್ಬರು ಕುವೈತ್ ಪ್ರಜೆಗಳನ್ನು ಭೇಟಿಯಾದರು.

ಇಂದು ಲೇಖಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಎರಡು ಮಹಾಕಾವ್ಯಗಳ ಅರೇಬಿಕ್ ಆವೃತ್ತಿಗಳಿಗೆ ಸಹಿ ಹಾಕಿದರು.

"ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಭಾಷಾಂತರಗಳನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ನಾನು ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನೆಸೆಫ್ ಅವರ ಅನುವಾದ ಮತ್ತು ಪ್ರಕಟಣೆಯಲ್ಲಿ ಅವರ ಪ್ರಯತ್ನಗಳಿಗಾಗಿ ಅಭಿನಂದಿಸುತ್ತೇನೆ. ಅವರ ಈ ಕ್ರಮವು ಜಾಗತಿಕವಾಗಿ ಭಾರತೀಯ ಸಂಸ್ಕೃತಿಯ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋಟ್ಯಂತರ ಹಿಂದೂಗಳ ನಂಬಿಕೆಯ ಪ್ರತೀಕವಾಗಿರುವ ‘ರಾಮಾಯಣ’ ಮತ್ತು ‘ಮಹಾಭಾರತ’ದ ಪುಸ್ತಕವನ್ನು ಕುವೈತ್‌ನಲ್ಲಿ ಪ್ರಧಾನಿ ಮೋದಿ ಹಿಡಿದುಕೊಂಡಿರುವ ಫೋಟೋ ಭಾರೀ ವೈರಲ್‌ ಆಗುತ್ತಿದೆ.

ಕುವೈತ್‌ನ ಅಮೀರ್, ಶೇಖ್‌ ಮಿಶಾಲ್‌ ಅಲ್‌ ಅಹ್ಮದ್‌ ಅಲ್‌ ಜಬೇರ್‌ ಅಲ್‌ ಸಬ್ಹಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಕುವೈತ್‌ಗೆ ತೆರಳಿದ್ದಾರೆ.

ಇದು 43 ವರ್ಷಗಳ ನಂತರ ಗಲ್ಫ್ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ.

ಭೇಟಿ ವೇಳೆ ಮೋದಿಯವರು ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಜೊತೆಗೆ ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯು ಭಾರತ ಮತ್ತು ಕುವೈತ್‌ ನಡುವಿನ ಬಹುಮುಖಿ ಸಂಬಂಧವನ್ನು ಬಲಪಡಿಸಲು ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

Viral Video: 'ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ'; ಬಾಲ್ಕನಿಯಿಂದ ಜಿಗಿದ ಬಾಲಕ, ಅಪ್ಪನ ಹುಚ್ಚಾಟಕ್ಕೆ ತೀವ್ರ ಆಕ್ರೋಶ!

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ; ಲೆಬನಾನ್ ಕದನ ವಿರಾಮ, ಸ್ವತ್ತುಗಳ ಬಿಡುಗಡೆ ಪ್ರಮುಖ ಅಜೆಂಡಾ; Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

SCROLL FOR NEXT