ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ 
ವಿದೇಶ

ಸೊಮಾಲಿಯಾ ಕಡಲ್ಗಳ್ಳರ ದಾಳಿಯಿಂದ ಇರಾನ್-ಪಾಕ್ ಪ್ರಜೆಗಳಿದ್ದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ!

ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ.

ನವದೆಹಲಿ: ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ.

ಭಾರತೀಯ ಯುದ್ಧನೌಕೆ ಐಎನ್‌ಎಸ್ ಶಾರದಾ ನೌಕೆ ಎಫ್‌ವಿ ಒಮರಿಲ್ ನೌಕೆಯನ್ನು ರಕ್ಷಣೆ ಮಾಡಿದ್ದು, 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಗಳಿದ್ದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರು ದಾಳಿಗೆ ಮುಂದಾಗಿದ್ದರು. ಆದರೆ ನೌಕಾಪಡೆಯ ಪ್ರವೇಶದೊಂದಿಗೆ ಈ ದಾಳಿ ವಿಫಲವಾಗಿದೆ ಎಂದು ಹೇಳಲಾಗಿದೆ.

"ಇರಾನ್ ಮೂಲದ ಎಫ್‌ವಿ ಒಮರಿಲ್ ಹಡಗನ್ನು ಏಳು ಕಡಲ್ಗಳ್ಳರು ದಾಳಿ ಮಾಡಿ ಅದನ್ನು ವಶಕ್ಕೆ ಪಡೆಯಲು ಯತ್ನಿಸಿದ್ದರು. ಅವರು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಕೂಡಲೇ ಐಎನ್‌ಎಸ್ ಶಾರದಾ ಶುಕ್ರವಾರ ಮುಂಜಾನೆ ಹಡಗನ್ನು ತಡೆಯಿತು.

ಹಡಗಿನ ಜೊತೆಗೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕಡಲ್ಗಳ್ಳರಿಗೆ ಸೂಚಿಸಲಾಗಿತ್ತು. ಈ ಹಡಗಿನಲ್ಲಿ 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel