ಮಾನವ ಕಳ್ಳಸಾಗಣೆ
ಮಾನವ ಕಳ್ಳಸಾಗಣೆ ಸಾಂದರ್ಭಿಕ ಚಿತ್ರ
ವಿದೇಶ

ಮಾನವ ಕಳ್ಳಸಾಗಣೆ: ನೇಪಾಳದಲ್ಲಿ ಭಾರತ ಮೂಲದ 11 ಮಂದಿ ಒತ್ತೆಯಾಳು ಬಿಡುಗಡೆ, 7 ಮಂದಿ ಬಂಧನ

Srinivasamurthy VN

ಕಠ್ಮಂಡು: ನೆರೆಯ ನೇಪಾಳದಲ್ಲಿ ಮತ್ತೊಂದು ಮಾನವ ಕಳ್ಳಸಾಗಣೆ ಪ್ರಕರಣ ವರದಿಯಾಗಿದ್ದು, ಭಾರತ ಮೂಲದ 11 ಮಂದಿ ಒತ್ತೆಯಾಳು ಬಿಡುಗಡೆಯಾಗಿ, 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಅಮೇರಿಕಾಕ್ಕೆ ಕಳುಹಿಸುವ ನೆಪದಲ್ಲಿ ನೇಪಾಳದಲ್ಲಿ ಅಕ್ರಮ ಮಾನವ ಕಳ್ಳಸಾಗಣೆ ದಂಧೆಗೆ ತುತ್ತಾಗಿ ಒಂದು ತಿಂಗಳ ಕಾಲ ಒತ್ತೆಯಾಳಾಗಿದ್ದ 11 ಭಾರತೀಯರನ್ನು ರಕ್ಷಿಸಲಾಗಿದೆ. ಅಂತೆಯೇ ದಂಧೆಯಲ್ಲಿ ತೊಡಗಿದ್ದಕ್ಕಾಗಿ ಏಳು ಮಂದಿ ಭಾರತೀಯ ಏಜೆಂಟರನ್ನು ಬಂಧಿಸಲಾಗಿದೆ ಎಂದು ನೇಪಾಳ ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ಮೂಲಗಳ ಪ್ರಕಾರ 11 ಮಂದಿಯನ್ನು ರಾಜಧಾನಿ ಕಠ್ಮಂಡುವಿನ ಹೊರವಲಯದ ರಾಟೊಪುಲ್ ಪ್ರದೇಶದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಬಾಡಿಗೆ ಮನೆಯಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಒತ್ತೆಯಾಳುಗಳ ಸುಳಿವಿನ ಮೇರೆಗೆ ಕಠ್ಮಂಡು ಜಿಲ್ಲಾ ಪೊಲೀಸ್ ರೇಂಜ್‌ನಿಂದ ರವಾನೆಯಾದ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳ ರಕ್ಷಣೆ ಮಾಡಿದೆ.

ಆದಾಗ್ಯೂ, ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ ವಿವರವಾದ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕಠ್ಮಂಡು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಮೂಲಗಳು ತಿಳಿಸಿವೆ.

SCROLL FOR NEXT