ಡಿವೈ ಚಂದ್ರಚೂಡ್
ಡಿವೈ ಚಂದ್ರಚೂಡ್ 
ವಿದೇಶ

ಸಂಸತ್ತು, ಇಸಿ ಮತ್ತು ಸುಪ್ರೀಂ ಕೋರ್ಟ್ ಸಂದರ್ಭಕ್ಕೆ ತಕ್ಕಂತೆ ಪೂರಕವಾಗಿ ಕಾರ್ಯನಿರ್ವಹಿಸಬೇಕು: ಸಿಜೆಐ ಚಂದ್ರಚೂಡ್

Lingaraj Badiger

ಢಾಕಾ: ಸಂಸತ್ತು, ಸುಪ್ರೀಂ ಕೋರ್ಟ್ ಅಥವಾ ಚುನಾವಣಾ ಆಯೋಗ "ಅಸ್ಪಷ್ಟತೆ ಮತ್ತು ಅನಿಶ್ಚಿತತೆಯ" ಸಂದರ್ಭಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಸಂವಿಧಾನದ ಮೇಲಿನ ಜನರ ವಿಶ್ವಾಸ ಹೆಚ್ಚುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಶನಿವಾರ ಹೇಳಿದ್ದಾರೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಎರಡು ದಿನಗಳ ಕಾನೂನು ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಚಂದ್ರಚೂಡ್, ಸಂವಿಧಾನಗಳು ಸ್ವಭಾವತಃ ನೀಲನಕ್ಷೆಗಳಾಗಿವೆ. ಆದರೆ ಎಲ್ಲಾ ಅನಿಶ್ಚಿತತೆಗಳಿಗೆ ವಿವರವಾದ, ಸಿದ್ಧವಾದ ಮರುಪರಿಶೀಲನೆಗಳಿಲ್ಲ ಎಂದರು.

'ಇಪ್ಪತ್ತೊಂದನೇ ಶತಮಾನದಲ್ಲಿ ದಕ್ಷಿಣ ಏಷ್ಯಾದ ಸಾಂವಿಧಾನಿಕ ನ್ಯಾಯಾಲಯಗಳು: ಬಾಂಗ್ಲಾದೇಶ ಮತ್ತು ಭಾರತದಿಂದ ಪಾಠಗಳು' ವಿಷಯದ ಕುರಿತು ಮಾತನಾಡಿದ ಸಿಜೆಐ ಚಂದ್ರಚೂಡ್ ಅವರು, ಸಂವಿಧಾನಗಳು ಆದಾಯ ತೆರಿಗೆ ಕಾಯಿದೆಯಂತಲ್ಲ(ತೆರಿಗೆ ಪಾವತಿಸಲು ಜನ ಮುಂದೆ ಬರುತ್ತಾರೆ), ಎಂದು ಹೇಳಿದರು.

"ನಮ್ಮ ಅಧಿಕಾರದ ಮೂಲವಾಗಿರುವ ಜನರ ಬಳಿ ಸಂವಿಧಾನವನ್ನು ಕೊಂಡೊಯ್ಯುಬೇಕು" ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಸಿಜೆಐ ಹೇಳಿದರು.

ಸಂಸತ್ತು, ಕೇಂದ್ರ ತನಿಖಾ ಸಂಸ್ಥೆಗಳು, ಚುನಾವಣಾ ಆಯೋಗ ಅಥವಾ ಸುಪ್ರೀಂ ಕೋರ್ಟ್ ಸೇರಿದಂತೆ ಆಡಳಿತದ ಸಂಸ್ಥೆಗಳು, ಅಸ್ಪಷ್ಟತೆ ಮತ್ತು ಅನಿಶ್ಚಿತತೆಯ ಸಂದರ್ಭಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಸಂವಿಧಾನದ ಮೇಲಿನ ಜನರ ವಿಶ್ವಾಸ ಗಟ್ಟಿಯಾಗುತ್ತದೆ ಎಂದು ಸಿಜೆಐ ತಿಳಿಸಿದರು.

ಚಂದ್ರಚೂಡ್ ಅವರು ತಮ್ಮ ಭಾಷಣದಲ್ಲಿ, ಭಾರತ ಮತ್ತು ಬಾಂಗ್ಲಾದೇಶದ ನ್ಯಾಯಾಲಯ ವ್ಯವಸ್ಥೆಗಳು "ನಾಗರಿಕರನ್ನು ತಲುಪಲು" ತಂತ್ರಜ್ಞಾನವನ್ನು ಹೆಚ್ಚು ಬಳಸಬೇಕು ಎಂದು ಕರೆ ನೀಡಿದ್ದಾರೆ.

SCROLL FOR NEXT