ವಿದೇಶ

ಫ್ರಾನ್ಸ್‌ಗೆ ಅತ್ಯಂತ ಕಿರಿಯ ಹಾಗೂ ಸಲಿಂಗಕಾಮಿ ಪ್ರಧಾನಿ; ಗೇಬ್ರಿಯಲ್ ಅಟಲ್ ನೂತನ PM

Vishwanath S

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು 34 ವರ್ಷದ ಶಿಕ್ಷಣ ಸಚಿವ ಗೇಬ್ರಿಯಲ್ ಅಟಲ್ ಅವರನ್ನು ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ. 

ಪ್ರಧಾನಿಯಾಗಿದ್ದ ಎಲಿಜಬೆತ್ ಅವರ ಪೋಸ್ಟ್ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಗೇಬ್ರಿಯಲ್ ಅಟಲ್ ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಫ್ರಾನ್ಸ್ ನ ಮೊದಲ ಸಲಿಂಗಕಾಮಿ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಲಸೆಯ ವಿಷಯದ ಬಗ್ಗೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ಎಲಿಜಬೆತ್ ರಾಜೀನಾಮೆ ನೀಡಿದರು. ಇದನ್ನು ಅಧ್ಯಕ್ಷ ಮ್ಯಾಕ್ರನ್ ಒಪ್ಪಿಕೊಂಡರು. ವರ್ಷಾಂತ್ಯದಲ್ಲಿ ನಡೆಯಲಿರುವ ಯುರೋಪಿಯನ್ ಚುನಾವಣೆಗೆ ಮುನ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತನ್ನ ಉನ್ನತ ತಂಡವನ್ನು ಪುನರ್ರಚಿಸಲು ತಯಾರಿ ನಡೆಸುತ್ತಿರುವ ಸಮಯದಲ್ಲಿ ಫ್ರಾನ್ಸ್‌ನಲ್ಲಿ ಈ ಪುನರ್ರಚನೆ ನಡೆದಿದೆ.

ಫ್ರೆಂಚ್ ಮಾಧ್ಯಮಗಳ ಪ್ರಕಾರ, ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯ ಮೊದಲು ಮ್ಯಾಕ್ರನ್ ತಮ್ಮ ಪಕ್ಷಕ್ಕೆ ಮತ್ತಷ್ಟು ಚೇತರಿಕೆ ಕೊಡಲು ಯತ್ನಿಸಿದ್ದಾರೆ. ಇದರಿಂದಾಗಿ ಎಲಿಜಬೆತ್ ಅವರನ್ನು ಪದಚ್ಯುತಗೊಳಿಸಿ ನೂತನ ಪ್ರಧಾನಿಗೆ ಅವಕಾಶ ನೀಡಲಾಗಿದೆ. ವಾಸ್ತವವಾಗಿ, ಮ್ಯಾಕ್ರನ್ ಎರಡನೇ ಬಾರಿಗೆ ಫ್ರಾನ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ 2022ರ ಮೇನಲ್ಲಿ ಎಲಿಜಬೆತ್ ದೇಶದ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು. ಎಲಿಜಬೆತ್ ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದು ಫ್ರಾನ್ಸ್‌ನ ಎರಡನೇ ಮಹಿಳಾ ಪ್ರಧಾನಿ ಎಂಬ ಖ್ಯಾತಿಗೂ ಭಾಜನರಾಗಿದದ್ರು.

ಗೇಬ್ರಿಯಲ್ ಅತ್ಯಂತ ಕಿರಿಯ ಶಿಕ್ಷಣ ಮಂತ್ರಿ
ಇಮ್ಯಾನುಯೆಲ್ ಮ್ಯಾಕ್ರನ್ ಅವರ ದೀರ್ಘಕಾಲದ ಬೆಂಬಲಿಗ ಮತ್ತು ಸ್ನೇಹಿತ ಗೇಬ್ರಿಯಲ್ ಅಟಲ್ ಅವರು ಫ್ರೆಂಚ್ ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರು ಧರಿಸುವ ಹಿಜಾಬ್ ಎಂಬ ಉಡುಪನ್ನು ನಿಷೇಧಿಸುವ ಮೂಲಕ ಶಿಕ್ಷಣ ಸಚಿವರಾಗಿ ವಿಶ್ವದಾದ್ಯಂತ ಸುದ್ದಿ ಮಾಡಿದರು. ಗೇಬ್ರಿಯಲ್ ಅವರ ತಂದೆ ಯಹೂದಿ ಮೂಲದವರು ಎಂದು ಹೇಳಲಾಗುತ್ತದೆ. ಆದರೆ ಅವರ ತಾಯಿಯ ಪೂರ್ವಜರು ಗ್ರೀಕ್-ರಷ್ಯನ್ ಆಗಿದ್ದರು. ಅವರು ಬಹಿರಂಗವಾಗಿ ಸಲಿಂಗಕಾಮಿ ಮತ್ತು ಯುರೋಪಿಯನ್ ಪಾರ್ಲಿಮೆಂಟ್‌ನ ಸದಸ್ಯರಾಗಿರುವ ಫ್ರೆಂಚ್ ವಕೀಲರೊಂದಿಗೆ ನಾಗರಿಕ ಒಕ್ಕೂಟದಲ್ಲಿ ವಾಸಿಸುತ್ತಿದ್ದಾರೆ. ಅವರು ಫ್ರಾನ್ಸ್‌ನ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕಿರಿಯ ಶಿಕ್ಷಣ ಸಚಿವರಾಗಿದ್ದರು.

SCROLL FOR NEXT