ಅಂಟೊನಿಯೊ ಗುಟೆರೆಸ್ 
ವಿದೇಶ

ಗಾಜಾ-ಇಸ್ರೇಲ್ ಬಿಕ್ಕಟ್ಟು ತೀವ್ರ: ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ ಮಾಡದಂತೆ ವಿಶ್ವಸಂಸ್ಥೆ ಮನವಿ

ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ದೇಶಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಮನವಿ ಮಾಡಿವೆ.

ಜಿನೆವಾ: ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ದೇಶಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಮನವಿ ಮಾಡಿವೆ.

ಇಸ್ರೇಲ್ ಮೇಲಿನ ದಾಳಿಯಲ್ಲಿ ವಿಶ್ವಸಂಸ್ಥೆ ಸಿಬ್ಬಂದಿ ಪಾತ್ರದ ಕುರಿತ ಸುದ್ದಿಗಳು ವ್ಯಾಪಕವಾಗಿರುವಂತೆಯೇ ಕೆಲ ದೇಶಗಳು ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದ್ದವು. ಆದರೆ ಇದೀಗ ಈ ದೇಶಗಳಿಗೆ ವಿಶ್ವಸಂಸ್ಥೆ ಮನವಿ ಮಾಡಿದ್ದು, ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೇಳಿಕೊಂಡಿವೆ.

‘ನೀವು ನೀಡುವ ಅನುದಾನವು ಗಾಜಾದಲ್ಲಿ 20 ಲಕ್ಷ ಜನರ ಜೀವ ಉಳಿವಿಗೆ ಕಾರಣವಾಗುತ್ತದೆ’ ಎಂದು ಅವು ಹೇಳಿವೆ.

ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೆರಸ್ ಭಾನುವಾರ ವಿಶ್ವಸಂಸ್ಥೆ ಮತ್ತು ಇತರ ಪ್ರಮುಖ ದಾನಿಗಳನ್ನು ಪ್ಯಾಲೆಸ್ಟೀನಿಯಾದವರಿಗೆ ಸಹಾಯ ಮಾಡುವ ಯುಎನ್ ಏಜೆನ್ಸಿಗೆ ಧನಸಹಾಯವನ್ನು ಮುಂದುವರೆಸುವಂತೆ ಮನವಿ ಮಾಡಿದರು, ಅವರ ಬೆಂಬಲವಿಲ್ಲದೆ ಏಜೆನ್ಸಿಯು ಅದನ್ನು ಆಹಾರ, ನೀರು ಮತ್ತು ಅಗತ್ಯ ಸೇವೆಗಳಿಗಾಗಿ ಅವಲಂಬಿಸಿರುವ ಎರಡು ಮಿಲಿಯನ್ ಗಾಜನ್ನರಿಗೆ ಸಹಾಯ ಮಾಡಲು ಮುಂದಿನ ತಿಂಗಳು ಹಣದ ಕೊರತೆಯಾಗುತ್ತದೆ ಎಂದು ಹೇಳಿದರು.

ಗಾಜಾಗೆ ಅಮೆರಿಕ, ಜರ್ಮನಿ ಸೇರಿದಂತೆ ಕನಿಷ್ಠ ಒಂಬತ್ತು ದೇಶಗಳು ಅನುದಾನ ನೀಡುವುದನ್ನು ನಿಲ್ಲಿಸಿವೆ. ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ್ದ ಹಠಾತ್‌ ದಾಳಿಯಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಇಸ್ರೇಲ್‌ ಆರೋಪಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿವೆ.

ಹಮಾಸ್‌ ಬಂಡುಕೋರರನ್ನು ಸದೆಬಡಿಯುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಈವರೆಗೆ 26,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಂಘರ್ಷ ಆರಂಭವಾದಾಗಿನಿಂದ ಗಾಜಾದ 23 ಲಕ್ಷ  ಜನರು ವಿಶ್ವಸಂಸ್ಥೆಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT