ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

UK Election 2024: ಎಕ್ಸಿಟ್ ಪೋಲ್ ನಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ತೀವ್ರ ಮುಖಭಂಗ, ಜಯದ ಹಾದಿಯಲ್ಲಿ ಲೇಬರ್ ಪಾರ್ಟಿ

ಎಕ್ಸಿಟ್ ಪೋಲ್ ಪ್ರಕಾರ ಕೀರ್ ಸ್ಟಾರ್ಮರ್ ನೇತೃತ್ವದ ಎಡ-ಕೇಂದ್ರ ಲೇಬರ್ ಪಾರ್ಟಿಯು ಭಾರಿ ಬಹುಮತದತ್ತ ಸಾಗುತ್ತಿದೆ ಎಂದು ಹೇಳಿದೆ.

ಉತ್ತರ ಲಂಡನ್‌ನ ಕ್ಯಾಮ್ಡೆನ್‌ನಲ್ಲಿರುವ 5 ಪ್ಯಾನ್‌ಕ್ರಾಸ್ ಸ್ಕ್ವೇರ್‌ನಲ್ಲಿರುವ ಕ್ಯಾಮ್‌ಡೆನ್ ಕೌನ್ಸಿಲ್‌ನ ಪ್ರಧಾನ ಕಛೇರಿಯಲ್ಲಿ, ಹೋಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್ ಕ್ಷೇತ್ರದ ಎಣಿಕೆಯ ಸಮಯ
Sumana Upadhyaya
Updated On : 5 Jul 2024, 8:43 am

ಲಂಡನ್: ಮುಂದಿನ ಐದು ವರ್ಷಗಳ ಕಾಲ ಸಂಸತ್ತಿನಲ್ಲಿ ಕುಳಿತುಕೊಳ್ಳುವ 650 ಶಾಸಕರನ್ನು ಆಯ್ಕೆ ಮಾಡಲು ಇಂಗ್ಲೆಂಡ್ (United Kingdom) ಮತದಾರರು ನಿನ್ನೆ ಗುರುವಾರ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ನಿನ್ನೆ ರಾತ್ರಿ 9 ಗಂಟೆಗೆ ಮತದಾನ ಮುಕ್ತಾಯವಾಯಿತು. ಎಕ್ಸಿಟ್ ಪೋಲ್ ಪ್ರಕಾರ ಕೀರ್ ಸ್ಟಾರ್ಮರ್ ನೇತೃತ್ವದ ಎಡ-ಕೇಂದ್ರ ಲೇಬರ್ ಪಾರ್ಟಿಯು ಭಾರಿ ಬಹುಮತದತ್ತ ಸಾಗುತ್ತಿದೆ ಎಂದು ಹೇಳಿದೆ.

Also Read

ಇಂಗ್ಲೆಂಡ್ ಮುಂದಿನ ಪ್ರಧಾನಿ ಯಾರು?: ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿ, ರಿಷಿ ಸುನಕ್ ಭವಿಷ್ಯ ಅಸ್ಪಷ್ಟ!

ಐದು ಬೇರೆ ಬೇರೆ ಪ್ರಧಾನ ಮಂತ್ರಿಗಳ ಅಡಿಯಲ್ಲಿ 14 ವರ್ಷಗಳ ಅಧಿಕಾರದ ನಂತರ, ಪ್ರಧಾನಿ ರಿಷಿ ಸುನಕ್ ಅವರ ನೇತೃತ್ವದ ಕನ್ಸರ್ವೇಟಿವ್‌ ಪಕ್ಷ 650 ಸ್ಥಾನಗಳ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಬಾರಿ 131 ಕ್ಕೆ ಸೀಟುಗಳು ಬರಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಪಕ್ಷದ ಎರಡು ಶತಮಾನಗಳ ಇತಿಹಾಸದಲ್ಲಿ ಇದು ಟೋರಿ ನೇತೃತ್ವದ ಪಕ್ಷಕ್ಕೆ ಅತ್ಯಂತ ಕೆಟ್ಟ ಫಲಿತಾಂಶವಾಗಬಹುದು ಎಂದು ಹೇಳಲಾಗುತ್ತಿದೆ.

Advertisement

Advertisement

ಲೇಬರ್ ಪಕ್ಷವು 410 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಬಹುಮತಕ್ಕೆ ಅಗತ್ಯವಿರುವ 326 ನ್ನು ಸ್ಥಾನವನ್ನು ಸುಲಭವಾಗಿ ದಾಟಿ ಸರಳ ಬಹುಮತ ಗೆಲ್ಲುವ ನಿರೀಕ್ಷೆಯಿದೆ. ಬಹುತೇಕ ಕ್ಷೇತ್ರಗಳ ಫಲಿತಾಂಶವು ಇಂದು ಬೆಳಗ್ಗೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments