ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

'ರಾಜಕೀಯ ಪ್ರಚೋದನೆ ಬೇಡ, ಏಕತೆ ತೋರಿಸುವ ಸಮಯವಿದು': ಟ್ರಂಪ್ ಹತ್ಯೆ ಯತ್ನ ನಂತರ ಜೋ ಬೈಡನ್ ಮಾತು

ಇದು ಚುನಾವಣಾ ವರ್ಷವಾಗಿರುವುದರಿಂದ ಜನರು ಭಾವೋದ್ರೇಕಕ್ಕೆ ಒಳಗಾಗಬಹುದು ಎಂದು ಹೇಳಿದ್ದಾರೆ. ರಿಪಬ್ಲಿಕನ್ನರು ವಿಭಿನ್ನ ನೀತಿ ದೃಷ್ಟಿಕೋನಗಳನ್ನು ನೀಡುತ್ತಾರೆ, ಆದರೆ ಅಮೆರಿಕನ್ನರು ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಬೇಕೆಂದು ಮನವಿ ಮಾಡಿದರು.

ಜೋ ಬೈಡನ್
Sumana Upadhyaya
Updated On : 15 Jul 2024, 10:19 am

ವಾಷಿಂಗ್ಟನ್: ಮೊನ್ನೆ ಶನಿವಾರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಪ್ರಯತ್ನದ ನಂತರ ಅಮರಿಕ ರಾಜಕೀಯ ಹಿಂಸಾಚಾರದ ಅಪಾಯಗಳ ಬಗ್ಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದರು, ಪರಿಸ್ಥಿತಿ ತಣ್ಣಗಾಗಬೇಕಾದ ಸಮಯವಿದು ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ಘಟನೆಯ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಬೈಡನ್, ರಾಜಕೀಯ ಭಾವೋದ್ರೇಕಗಳು ಹೆಚ್ಚಾಗಬಹುದು ಆದರೆ ನಾವು ಎಂದಿಗೂ ಹಿಂಸಾಚಾರಕ್ಕೆ ಇಳಿಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದು ಚುನಾವಣಾ ವರ್ಷವಾಗಿರುವುದರಿಂದ ಜನರು ಭಾವೋದ್ರೇಕಕ್ಕೆ ಒಳಗಾಗಬಹುದು ಎಂದು ಹೇಳಿದ್ದಾರೆ. ರಿಪಬ್ಲಿಕನ್ನರು ವಿಭಿನ್ನ ನೀತಿ ದೃಷ್ಟಿಕೋನಗಳನ್ನು ನೀಡುತ್ತಾರೆ, ಆದರೆ ಅಮೆರಿಕನ್ನರು ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಬೇಕೆಂದು ಮನವಿ ಮಾಡಿದರು.

Advertisement

Advertisement

Also Read

'ದೇವರ ದಯೆಯಿಂದ ಬದುಕುಳಿದಿದ್ದೇನೆ, ಇದಕ್ಕೆಲ್ಲ ಹೆದರುವುದಿಲ್ಲ': ಹತ್ಯೆ ಯತ್ನಕ್ಕೆ ಟ್ರಂಪ್ ಪ್ರತಿಕ್ರಿಯೆ!

ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ ಮತ್ತು ವಿನಾಯಿತಿ ಇಲ್ಲ. ಈ ಹಿಂಸಾಚಾರವನ್ನು ಸಾಮಾನ್ಯ ವಿಷಯವಲ್ಲ ಎಂದರು. ಮುಂದಿನ ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ನಾವೆಲ್ಲರೂ ಒಂದು ರಾಷ್ಟ್ರವಾಗಿ ನಿಲ್ಲಬೇಕು ಎಂದು ಕರೆ ನೀಡಿದರು. ಸಂಪೂರ್ಣ ಮತ್ತು ತ್ವರಿತ ಪರಿಶೀಲನೆಗೆ ಭರವಸೆ ನೀಡಿದರು, ಸಾರ್ವಜನಿಕ ಊಹಾಪೋಹದ ಅಗತ್ಯವಿಲ್ಲ ಎಂದರು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಶನಿವಾರ ರಾತ್ರಿ ಟ್ರಂಪ್ ರ್ಯಾಲಿಯಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ ಮಾಜಿ ಅಗ್ನಿಶಾಮಕ ಮುಖ್ಯಸ್ಥ ಕೋರಿ ಕಾಂಪರೇಟೋರ್ ಅವರ ಕುಟುಂಬಕ್ಕಾಗಿ ನಾನು ಮತ್ತು ಜಿಲ್ ಬೈಡನ್ ಪ್ರಾರ್ಥಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments