ಬ್ರಿಟನ್: ಲೈಂಗಿಕ ಕಾರ್ಯಕರ್ತೆಯೊಂದಿಗಿನ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದರೂ ಬಯಲುಗೊಂಡ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆಯ ವಿರುದ್ಧ ಇಂಗ್ಲೆಂಡ್ ನ ಉದ್ಯಮಿಯೊಬ್ಬರು ಕೇಸ್ ಹಾಕಿದ್ದಾರೆ. ಫ್ಯಾಮಿಲಿ ಐಮ್ಯಾಕ್ ನಲ್ಲಿ ಡಿಲೀಟ್ ಆಗಿದ್ದ ಮೆಸೇಜ್ ಗಳು ಬಯಲಾಗಿ ಈ ವ್ಯಕ್ತಿಯ ಪತ್ನಿ ಕೈಗೆ ಸಿಕ್ಕಿತ್ತು. ಪರಿಣಾಮ ಉದ್ಯಮಿಯ ಪತ್ನಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು.
ಹೆಸರನ್ನು ಬಹಿರಂಗಗೊಳಿಸಲು ಇಚ್ಛಿಸದ ವ್ಯಕ್ತಿ ಸೆಕ್ಸ್ ವರ್ಕರ್ ಗಳೊಂದಿಗೆ ಚಾಟ್ ಮಾಡುವುದಕ್ಕಾಗಿ ಐ ಮೆಸೇಜ್ ಬಳಕೆ ಮಾಡುತ್ತಿದ್ದರು. ಇದೇ ಆಪಲ್ ಐಡಿಯ ಮೂಲಕ ಕುಟುಂಬದ ಇನ್ನಿತರ ಉಪಕರಣಗಳು ಸಿಂಕ್ರೊನೈಸೇಷನ್ ಆಗಿತ್ತು. ಪರಿಣಾಮ ಮೆಸೇಜ್ ಗಳನ್ನೂ ಓದಬಹುದಾಗಿತ್ತು.
ಒಂದು ಸಾಧನದಲ್ಲಿ ಸಂದೇಶವನ್ನು ಅಳಿಸುವುದರಿಂದ ಅದನ್ನು ಎಲ್ಲಾ ಲಿಂಕ್ ಮಾಡಿದ ಸಾಧನಗಳಲ್ಲಿ ಮೆಸೇಜ್ ಡಿಲೀಟ್ ಆಗುವುದಿಲ್ಲ ಎಂದು ಆಪಲ್ ಬಳಕೆದಾರರಿಗೆ ತಿಳಿಸಿಲಿಲ್ಲ ಎಂದು ಉದ್ಯಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಒಂದು ಸಂದೇಶವನ್ನು ಅಳಿಸಲಾಗಿದೆ ಎಂದು ನಿಮಗೆ ಹೇಳಿದರೆ, ಅದನ್ನು ಅಳಿಸಲಾಗಿದೆ ಎಂದು ನಂಬಲು ನೀವು ಅರ್ಹರಾಗಿದ್ದೀರಿ" ಎಂದು ಅವರು ಔಟ್ ಲೆಟ್ ವಿರುದ್ಧ ದೂರಿದ್ದಾರೆ.
ವ್ಯಕ್ತಿಯ ಪತ್ನಿ ಸಂದೇಶಗಳನ್ನು ಕಂಡು ಆತನ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇದರಿಂದ ಆತನಿಗೆ 5 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ವೆಚ್ಚವಾಗಲಿದೆ ಎಂದು ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.