ಮೊಹಮ್ಮದ್ ಸೊಲಿಹ್, ಮುಯಿಝಿ
ಮೊಹಮ್ಮದ್ ಸೊಲಿಹ್, ಮುಯಿಝಿ 
ವಿದೇಶ

ಮೊಂಡುತನ ನಿಲ್ಲಿಸಿ: ಭಾರತ ಜೊತೆಗಿನ ಸಂಬಂಧ ಸರಿಪಡಿಸಲು ಮಾಲ್ಡೀವ್ಸ್ ಅಧ್ಯಕ್ಷರಿಗೆ ಸೂಚನೆ

Nagaraja AB

ಮಾಲೇ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು "ಮೊಂಡುತನ" ಮಾಡುವುದನ್ನು ನಿಲ್ಲಿಸಬೇಕು ಮತ್ತು ಹಣಕಾಸಿನ ಸವಾಲುಗಳನ್ನು ಎದುರಿಸಲು ನೆರೆಯ ಭಾರತದೊಂದಿಗೆ ಮಾತುಕತೆಗೆ ಪ್ರಯತ್ನಿಸಬೇಕು ಎಂದು ಹಿಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಹೇಳಿದ್ದಾರೆ.

ಭಾರತ ವಿರೋಧಿ ನಿಲುವು ಹೊಂದಿದ್ದ ಮೊಹಮ್ಮದ್ ಮುಯಿಝು ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದು ತಮ್ಮ ದೇಶಕ್ಕೆ ಭಾರತ ಸಾಲ ಪರಿಹಾರ (ಸಾಲ ಮನ್ನ) ನೀಡಬೇಕು ಎಂದು ಮನವಿ ಮಾಡಿದ ನಂತರ ಸೊಲಿಹ್ ಈ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 45 ವರ್ಷದ ಮುಯಿಝು, 62 ವರ್ಷದ ಸೊಲಿಹ್ ಅವರನ್ನು ಸೋಲಿಸಿದ್ದರು.

ಮಾಲೇಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೋಲಿಹ್, ಸಾಲ ಪರಿಹಾರ ನೀಡಬೇಕು ಎಂದು ಮುಯಿಝು ಭಾರತದೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ನೋಡಿದ್ದೇನೆ.

ಆದರೆ ಆರ್ಥಿಕ ಸವಾಲುಗಳು ಭಾರತೀಯ ಸಾಲಗಳಿಂದ ಉಂಟಾಗುವುದಿಲ್ಲ ಎಂದು ಸೋಲಿಹ್ ಹೇಳಿರುವುದಾಗಿ Adhadhu.com ನ್ಯೂಸ್ ಪೋರ್ಟಲ್ ಉಲ್ಲೇಖಿಸಿದೆ.

ಭಾರತಕ್ಕೆ ನೀಡಬೇಕಾದ 8 ಶತಕೋಟಿ MVRಗೆ ಹೋಲಿಸಿದರೆ ಮಾಲ್ಡೀವ್ಸ್ ಚೀನಾಕ್ಕೆ 18 ಶತಕೋಟಿ Mvr ಸಾಲ ಹೊಂದಿದೆ. ಮರುಪಾವತಿ ಅವಧಿಯು 25 ವರ್ಷಗಳಾಗಿವೆ. ಆದಾಗ್ಯೂ, ಭಾರತ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಾವು ಮೊಂಡುತನವನ್ನು ನಿಲ್ಲಿಸಬೇಕು ಮತ್ತು ಮಾತುಕತೆಗೆ ಪ್ರಯತ್ನಿಸಬೇಕು. ಮುಯಿಝಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ.ಅವರು ಈಗ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಸೋಲಿಹ್ ಹೇಳಿದರು.

ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಮತ್ತು ನಂತರ ಮುಯಿಝು ಭಾರತವನ್ನು ಟೀಕಿಸಿದರು ಮತ್ತು ನವೆಂಬರ್‌ನಲ್ಲಿ ಅವರು ಅಧಿಕಾರ ವಹಿಸಿಕೊಂಡ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಮೇ 10 ರೊಳಗೆ ಮಾಲ್ಡೀವ್ಸ್‌ನಲ್ಲಿ ಮಾನವೀಯ ಮತ್ತು ವೈದ್ಯಕೀಯ ಸ್ಥಳಾಂತರಕ್ಕಾಗಿ ಬಳಸಲಾಗುವ 88 ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಮೊದಲ ಬ್ಯಾಚ್ 26 ಭಾರತೀಯ ಮಿಲಿಟರಿ ಸಿಬ್ಬಂದಿ ಈಗಾಗಲೇ ದ್ವೀಪ ರಾಷ್ಟ್ರವನ್ನು ತೊರೆದಿದ್ದಾರೆ.

SCROLL FOR NEXT