ರೂಮಿ ಅಲ್ಕಹ್ತಾನಿ
ರೂಮಿ ಅಲ್ಕಹ್ತಾನಿ online desk
ವಿದೇಶ

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಸೌದಿ ಅರೇಬಿಯಾ ಭಾಗಿ!

Srinivas Rao BV

ರಿಯಾದ್: ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಪೆಜೆಂಟ್ ನಲ್ಲಿ ಭಾಗಿಯಾಗಲಿದೆ. ಇಸ್ಲಾಮಿಕ್ ದೇಶವೊಂದಕ್ಕೆ ಇದು ಐತಿಹಾಸಿಕ ಕಾರ್ಯಕ್ರಮವಾಗಿರಲಿದೆ.

ಹಿರಿಯ ಬ್ಯೂಟಿ ಪೆಜೆಂಟ್ ಹಾಗೂ ಪ್ರಭಾವಿ ವ್ಯಕ್ತಿಯಾಗಿರುವ ರೂಮಿ ಅಲ್ಕಹ್ತಾನಿ ಈ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದು ತಮ್ಮ ದೇಶವನ್ನು ಪ್ರತಿನಿಧಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಮಾಡೆಲ್ ಸ್ಟ್ರಾಪ್‌ಲೆಸ್ ಸೀಕ್ವಿನ್ಡ್ ಗೌನ್ ಧರಿಸಿರುವುದನ್ನು ಕಾಣಬಹುದಾಗಿದೆ.

"ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಬಗ್ಗೆ ನನಗೆ ಗೌರವವಿದೆ. ಇದು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಮೊದಲ ಭಾಗವಹಿಸುವಿಕೆ" ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿದ್ದಾರೆ.

ಖಲೀಜ್ ಟೈಮ್ಸ್ ಪ್ರಕಾರ, ರಿಯಾದ್‌ನಲ್ಲಿ ಜನಿಸಿದ ಅಲ್ಕಹ್ತಾನಿ ಗಮನ ಸೆಳೆದಿರುವುದು ಹೊಸದೇನಲ್ಲ. ಕೆಲವು ವಾರಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್ ಜೊತೆಯಲ್ಲಿ ಅವರು ಹಲವಾರು ಜಾಗತಿಕ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.

ಕಳೆದ ವರ್ಷ, ಮಿಸ್ ನಿಕರಾಗುವಾ ಶೆನ್ನಿಸ್ ಪಲಾಸಿಯೊಸ್ 2023 ರ ವಿಶ್ವ ಸುಂದರಿ ಕಿರೀಟವನ್ನು ಪಡೆದಿದ್ದರು. ಮುಂದಿನ ಆವೃತ್ತಿಯನ್ನು ಮೆಕ್ಸಿಕೋದಲ್ಲಿ ನಡೆಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಕಳೆದ ವರ್ಷ ಘೋಷಿಸಿದ್ದರು.

SCROLL FOR NEXT