ಸುನಿತಾ ವಿಲಿಯಮ್ಸ್  
ವಿದೇಶ

Boeing Starliner ರಾಕೆಟ್ ನಲ್ಲಿ ತಾಂತ್ರಿಕ ಸಮಸ್ಯೆ; ಕೊನೆ ಕ್ಷಣದಲ್ಲಿ Sunita Williams ಬಾಹ್ಯಾಕಾಶ ಪಯಣ ಮುಂದೂಡಿಕೆ!

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ರ ಮೂರನೇ ಬಾಹ್ಯಾಕಾಶ ಪಯಣ ಕೊನೇ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಿಕೆಯಾಗಿದೆ.

ವಾಷಿಂಗ್ಟನ್: ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ರ ಮೂರನೇ ಬಾಹ್ಯಾಕಾಶ ಪಯಣ ಕೊನೇ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಿಕೆಯಾಗಿದೆ.

ಹೌದು.. ಉಡಾವಣೆಗೆ ಕೆಲವು ಗಂಟೆಗಳ ಮೊದಲು ತಾಂತ್ರಿಕ ಸಮಸ್ಯೆಯಿಂದಾಗಿ ಸುನಿತಾ ವಿಲಿಯಮ್ಸ್ ಅವರ ಮೂರನೇ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮುಂದೂಡಲಾಯಿತು.

ಇಂದು ಬೆಳಗ್ಗೆ 8.34 ಕ್ಕೆ ಕೆನಡಿ ಬಾಹ್ಯಕಾಶ ಕೇಂದ್ರ(Kennedy Space Center)ದಿಂದ ಅವರು ನೂತನವಾಗಿ ನಿರ್ಮಿಸಿರುವ ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟಾರ್ಲೈನರ್ (spacecraft)ನಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರೊಂದಿಗೆ ಗಗನಯಾತ್ರೆ ಕೈಗೊಂಡಿದ್ದರು.

ಆದರೆ ರಾಕೆಟ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಕೊನೇ ಕ್ಷಣದಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಉಡಾವಣೆಗೆ ಕೆಲವು ಗಂಟೆಗಳ ಮೊದಲು ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ, ಕಾರ್ಯಾಚರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.

ಪ್ರಸ್ತುತ ಈ ಕಾರ್ಯಾಚರಣೆಯ ಉಡಾವಣೆಗೆ ಯಾವುದೇ ಹೊಸ ದಿನಾಂಕವನ್ನು ಘೋಷಿಸಲಾಗಿಲ್ಲ. ಮಾಹಿತಿಯ ಪ್ರಕಾರ, ಈ ವಿಮಾನವು ಯುನೈಟೆಡ್ ಲಾಂಚ್ ಅಲೈಯನ್ಸ್ ಅಟ್ಲಾಸ್ ವಿ ರಾಕೆಟ್‌ನಿಂದ ಮೇ 7 ರಂದು ಅಂದರೆ ಇಂದು ಬೆಳಿಗ್ಗೆ 8.04 ಕ್ಕೆ ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದ ಸ್ಪೇಸ್ ಕಾಂಪ್ಲೆಕ್ಸ್-41 ರಿಂದ ಉಡಾವಣೆಯಾಗಬೇಕಿತ್ತು. ಆದರೆ ಕೊನೇ ಕ್ಷಣದ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ಮುಂದೂಡಿಕೆಯಾಗಿದೆ.

ಬೋಯಿಂಗ್ ಪ್ರಕಾರ, ಕ್ರ್ಯೂ ಸ್ಪೇಸ್ ಟ್ರಾನ್ಸ್‌ಪೋರ್ಟೇಶನ್ (CST)-100 ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಏಳು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸದಸ್ಯರು ಮತ್ತು ಸಾಮಾನುಗಳನ್ನು ಸಹ ಇರಿಸಬಹುದು ಮತ್ತು ಸಾಗಿಸಬಹುದು ಎಂದು ಹೇಳಿದೆ.

ಈ ಉಡಾವಣೆ ಕುರಿತು ಮಾಹಿತಿ ನೀಡಿರುವ ನಾಸಾ, 'ಇದನ್ನು ತಯಾರಿಸಲು 10 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಪ್ಯಾರಾಚೂಟ್‌ಗಳು ಮತ್ತು ಏರ್‌ಬ್ಯಾಗ್‌ಗಳ ಸಹಾಯದಿಂದ ಸಿಬ್ಬಂದಿ ಕ್ಯಾಪ್ಸುಲ್ ನೈರುತ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇಳಿಯುವ ಮೊದಲು ಗಗನಯಾತ್ರಿಗಳು ಪ್ರಯೋಗಾಲಯದಲ್ಲಿ ಸುಮಾರು ಒಂದು ವಾರ ಕಳೆಯುತ್ತಾರೆ ಎಂದು ಹೇಳಿದೆ.

ದಾಖಲೆಯ ಮೂರನೇ ಬಾರಿಗೆ ಸುನಿತಾ ಪಯಣ

ಇಂದು ಸುನೀತಾ ಮೂರನೇ ಬಾರಿ ಬಾಹ್ಯಾಕಾಶದಲ್ಲಿ ಹಾರಲು ಸಿದ್ಧರಾಗಿದ್ದರು. ಸುನೀತಾ 2006 ರಲ್ಲಿ ಮೊದಲ ಬಾರಿಗೆ ಮತ್ತು 2012 ರಲ್ಲಿ ಎರಡನೇ ಬಾರಿಗೆ ಹಾರಿದ್ದಾರೆ. ಸುನಿತಾ ವಿಲಿಯಮ್ಸ್ ಅವರು ಎಕ್ಸ್‌ಪೆಡಿಷನ್ 32 ರ ಫ್ಲೈಟ್ ಎಂಜಿನಿಯರ್ ಮತ್ತು ಎಕ್ಸ್‌ಪೆಡಿಶನ್ 33 ರ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.

ಅಲ್ಲದೆ ಅವರು ಸುನೀತಾ ಒಟ್ಟು 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇದು ದಾಖಲೆ ಕೂಡ ಆಗಿದ್ದು, ಬಾಹ್ಯಾಕಾಶದಲ್ಲಿ ಸುದೀರ್ಘ ಕಾಲ ಇದ್ದ ಜಗತ್ತಿನ ಮೊದಲ ಮಹಿಳೆ ಎಂಬ ಕೀರ್ತಿಗೂ ಸುನಿತಾ ವಿಲಿಯಮ್ಸ್ ಭಾಜನರಾಗಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗನನ ಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT