ಡೊನಾಲ್ಡ್ ಟ್ರಂಪ್  
ವಿದೇಶ

US Election 2024: ಡೊನಾಲ್ಡ್ ಟ್ರಂಪ್ ಗೆಲುವು, ಹೊಸ ದಾಖಲೆ ಮಟ್ಟಕ್ಕೆ Bitcoin ಬೆಲೆ ಏರಿಕೆ

ಆರಂಭಿಕ ವಹಿವಾಟಿನಲ್ಲಿ ಬಿಟ್‌ಕಾಯಿನ್ ಸುಮಾರು ಶೇಕಡಾ 8ರಷ್ಟು ಜಿಗಿದು 75,000 ಡಾಲರ್ ಗಿಂತ ಮೇಲಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಮಾರ್ಚ್‌ನಲ್ಲಿ ಮಾಡಿದ್ದ ದಾಖಲೆಯನ್ನು ಮುರಿದಿದೆ.

ಲಂಡನ್: ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ರಾಜಕೀಯವಾಗಿ ಬದಲಾವಣೆಗಳಾದಾಗ ಅದು ಬೇರೆ ದೇಶಗಳ ಮೇಲೆ ಆರ್ಥಿಕವಾಗಿ, ದ್ವಿಪಕ್ಷೀಯ ಪರಿಣಾಮಗಳು ಬೀರುತ್ತವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಟ್ರಂಪ್ ಅವರ ಗೆಲುವು ಕ್ರಿಪ್ಟೋಕರೆನ್ಸಿಗಳಿಗೆ ವರದಾನವಾಗಲಿದೆ ಎಂದು ಹೂಡಿಕೆದಾರರು ಪಣತೊಟ್ಟಿದ್ದರಿಂದ ಬಿಟ್‌ಕಾಯಿನ್ ಬೆಲೆ ನಿನ್ನೆ ಬುಧವಾರ ಹೊಸ ಗರಿಷ್ಠ ಮಟ್ಟವನ್ನು ತಲುಪಿತು.

ಆರಂಭಿಕ ವಹಿವಾಟಿನಲ್ಲಿ ಬಿಟ್‌ಕಾಯಿನ್ ಸುಮಾರು ಶೇಕಡಾ 8ರಷ್ಟು ಜಿಗಿದು 75,000 ಡಾಲರ್ ಗಿಂತ ಮೇಲಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಮಾರ್ಚ್‌ನಲ್ಲಿ ಮಾಡಿದ್ದ ದಾಖಲೆಯನ್ನು ಮುರಿದಿದೆ. ಬಿಟ್‌ಕಾಯಿನ್ ನಂತರ ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾದ ಈಥರ್ ಸೇರಿದಂತೆ ಇತರ ಕ್ರಿಪ್ಟೊಕರೆನ್ಸಿಗಳ ಬೆಲೆ ಶೇಕಡಾ 8ರಷ್ಟು ಏರಿಕೆಯಾಗಿದೆ.

ಮತ್ತೊಂದು ಟೋಕನ್, ಡಾಗ್‌ಕಾಯಿನ್ ಶೇಕಡಾ 18ರಷ್ಟು ಏರಿಕೆಯಾಗಿದೆ. ಇದು ಟ್ರಂಪ್‌ರ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾದ ಬಿಲಿಯನೇರ್ ಎಲೋನ್ ಮಸ್ಕ್ ಅವರ ನೆಚ್ಚಿನ ಕ್ರಿಪ್ಟೋಕರೆನ್ಸಿಯಾಗಿದೆ. ಟ್ರಂಪ್ ಈ ಹಿಂದೆ ಕ್ರಿಪ್ಟೋ ಕರೆನ್ಸಿ ವ್ಯವಹಾರವನ್ನು ನಂಬುತ್ತಿರಲಿಲ್ಲ. ಆದರೆ ಈಗ ಮನಸ್ಸು ಬದಲಿಸಿ ಚುನಾವಣೆಗೆ ಮುಂಚಿತವಾಗಿ ಕ್ರಿಪ್ಟೋಕರೆನ್ಸಿಗಳನ್ನು ಒಪ್ಪಿಕೊಂಡಿದ್ದಾರೆ.

ಅವರು ಅಮೆರಿಕವನ್ನು "ಭೂಮಿ ಮೇಲಿನ ಕ್ರಿಪ್ಟೋ ರಾಜಧಾನಿ" ಮಾಡಲು ಮತ್ತು ಬಿಟ್‌ಕಾಯಿನ್‌ನ "ಕಾರ್ಯತಂತ್ರದ ಮೀಸಲು" ದೇಶವನ್ನಾಗಿ ರಚಿಸುವುದಾಗಿ ವಾಗ್ದಾನ ಮಾಡಿದ್ದಾರೆ. ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್ ನ್ನು ಪ್ರಾರಂಭಿಸಿ ಇದು ಕ್ರಿಪ್ಟೋ ಕರೆನ್ಸಿಗಳನ್ನು ವ್ಯಾಪಾರ ಮಾಡಲು ಹೊಸ ಉದ್ಯಮವಾಗಿದೆ.

ಬಿಟ್‌ಕಾಯಿನ್ ಈ ವರ್ಷ ಶೇಕಡಾ 77ರಷ್ಟು ಹೆಚ್ಚಳ

"ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನಕ್ಕೆ ಅಧ್ಯಕ್ಷರಾಗಿ ಮರಳಿದರೆ ಬಿಟ್‌ಕಾಯಿನ್ ಯಾವಾಗಲೂ ಗಗನಕ್ಕೇರುವ ಒಂದು ಆಸ್ತಿಯಾಗಿದೆ" ಎಂದು ಬ್ರಿಟಿಷ್ ಆನ್‌ಲೈನ್ ಹೂಡಿಕೆ ವೇದಿಕೆಯಾದ ಎಜೆ ಬೆಲ್‌ನ ಹೂಡಿಕೆ ನಿರ್ದೇಶಕ ರಸ್ ಮೋಲ್ಡ್ ಹೇಳುತ್ತಾರೆ. ಟ್ರಂಪ್ ಈಗಾಗಲೇ ತಮ್ಮ ಡಿಜಿಟಲ್ ಕರೆನ್ಸಿಯ ಮೇಲಿನ ಪ್ರೀತಿಯನ್ನು ಘೋಷಿಸಿದ್ದಾರೆ. ಕ್ರಿಪ್ಟೋ ವ್ಯಾಪಾರಿಗಳು ಈಗ ಹೊಸ ನಿರೀಕ್ಷೆಯಲ್ಲಿದ್ದಾರೆ.

ಅಪಾಯವಿದೆ ಎಂದು ಎಚ್ಚರಿಸಿದ ತಜ್ಞರು

"ಟ್ರಂಪ್ ಅವರು ಅಧಿಕಾರಕ್ಕೆ ಬಂದರೆ ಹೂಡಿಕೆದಾರರು ಕ್ರಿಪ್ಟೋದಲ್ಲಿ ಹಣವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು" ಎಂದು ಹಾರ್ಗ್ರೀವ್ಸ್ ಲ್ಯಾನ್ಸ್‌ಡೌನ್‌ನಲ್ಲಿ ಹಣ ಮತ್ತು ಮಾರುಕಟ್ಟೆಗಳ ಮುಖ್ಯಸ್ಥ ಸುಸನ್ನಾ ಸ್ಟ್ರೀಟರ್ ಹೇಳುತ್ತಾರೆ. ಕ್ರಿಪ್ಟೋ ಉದ್ಯಮದ ಮೇಲೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಅಧ್ಯಕ್ಷ ಗ್ಯಾರಿ ಜೆನ್ಸ್ಲರ್ ನ್ನು ತೆಗೆದುಹಾಕುವುದಾಗಿ ಟ್ರಂಪ್ ಈಗಾಗಲೇ ಭರವಸೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT