ಮಾಜಿ ರೆಸ್ಲಿಂಗ್ ಸೂಪರ್ ಸ್ಟಾರ್ ಕೇನ್ ಜೊತೆ ಲಿಂಡಾ 
ವಿದೇಶ

ಶಿಕ್ಷಣ ಇಲಾಖೆ ಮುಖ್ಯಸ್ಥರಾಗಿ ಮಾಜಿ WWE CEO Linda McMahon ನೇಮಿಸಿದ ಡೊನಾಲ್ಡ್ ಟ್ರಂಪ್!

ನಾವು ಶಿಕ್ಷಣವನ್ನು ರಾಜ್ಯಗಳಿಗೆ ಹಿಂತಿರುಗಿಸುತ್ತೇವೆ ಮತ್ತು ಲಿಂಡಾ ಆ ಪ್ರಯತ್ನವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ತಮಗಿದೆ. ಆಕೆ fierce advocate for Parents' Rights ಎಂದೇ ಖ್ಯಾತಿ ಪಡೆದವರಾಗಿದ್ದಾರೆ.

ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸರ್ಕಾರದ ಕಾರ್ಯ ಈಗಾಗಲೇ ಪ್ರಾರಂಭಿಸಿದ್ದು, ಶಿಕ್ಷಣ ಇಲಾಖೆಯ ಮುಖ್ಯಸ್ಥರನ್ನಾಗಿ ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ (WWE) ನ ಮಾಜಿ ಸಿಇಒ ಲಿಂಡಾ ಮೆಕ್‌ಮಹೋನ್ ಅವರನ್ನು ನೇಮಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ನಾವು ಶಿಕ್ಷಣವನ್ನು ರಾಜ್ಯಗಳಿಗೆ ಹಿಂತಿರುಗಿಸುತ್ತೇವೆ ಮತ್ತು ಲಿಂಡಾ ಆ ಪ್ರಯತ್ನವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ತಮಗಿದೆ.

ಆಕೆ fierce advocate for Parents' Rights ಎಂದೇ ಖ್ಯಾತಿ ಪಡೆದವರಾಗಿದ್ದಾರೆ. ಹೀಗಾಗಿ ಆಕೆಯ ಆಯ್ಕೆ ಸಮಂಜಸ ಎಂದು ನಾನು ಭಾವಿಸುತ್ತೇನೆ. ಸರ್ಕಾರದಲ್ಲಿ ಸುಮಾರು 4,000 ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯವನ್ನು ಇದು ಹೊಂದಿದೆ ಎಂದಿದ್ದಾರೆ.

ಅಂತೆಯೇ ಶಿಕ್ಷಣ ಇಲಾಖೆಯಲ್ಲಿ ಮೆಕ್ ಮಹೋನ್ ಸಾಕಷ್ಟು ಅನುಭವಹೊಂದಿದ್ದು, ಕನೆಕ್ಟಿಕಟ್ ಶಿಕ್ಷಣ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಯನ್ನು ಮತ್ತು ಖಾಸಗಿ ಕ್ಯಾಥೋಲಿಕ್ ಶಾಲೆಯಾದ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದ ಟ್ರಸ್ಟಿಗಳ ಮಂಡಳಿಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿದ್ದಾರೆ ಎಂದು ಟ್ರಂಪ್ ಹೇಳಿದರು.

ಮೆಕ್ ಮಹೋನ್ ಅವರು ಜನವರಿಯಲ್ಲಿ ಶ್ವೇತಭವನಕ್ಕೆ ಹಿಂದಿರುಗುವ ಮುನ್ನ ಟ್ರಂಪ್ ಅವರ ಪರಿವರ್ತನಾ ತಂಡದ ಸಹ-ಅಧ್ಯಕ್ಷರಾಗಿದ್ದರು. ಮೆಕ್ ಮಹೋನ್ 2009 ರಲ್ಲಿ WWE ಅನ್ನು ತೊರೆದು ಅಮೆರಿಕ ಸೆನೆಟ್‌ಗೆ ಸ್ಪರ್ಧಿಸಿದ್ದರು. 2021 ರಿಂದ, ಅವರು ಟ್ರಂಪ್ ನೇತೃತ್ವದ ಅಮೇರಿಕಾ ಫಸ್ಟ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನಲ್ಲಿ ಸೆಂಟರ್ ಫಾರ್ ದಿ ಅಮೇರಿಕನ್ ವರ್ಕರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT