ಸ್ಟಾಕ್ ಹೋಮ್: ಕೃತಕ ಬುದ್ದಿಮತ್ತೆ (AI) ಅಭಿವೃದ್ಧಿಯಲ್ಲಿ ಮಹತ್ತರ ಕೆಲಸಕ್ಕಾಗಿ ಅಮೆರಿಕದ ಜಾನ್ ಜೆ. ಹಾಪ್ ಫೀಲ್ಡ್ ಮತ್ತು ಕೆನಡಾದ ಜೆಫ್ರಿ ಇ. ಹಿಂಟನ್ ಅವರಿಗೆ ಈ ಬಾರಿಯ ಭೌತ ವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿದೆ.
ಭೌತಶಾಸ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ ವರ್ಕ್ ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸುವಲ್ಲಿ ಈ ಜೋಡಿ ಶ್ರಮಿಸಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ನೊಬೆಲ್ ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಶ್ ಕ್ರೌನ್ (ರೂ. 8.19 ಕೋಟಿ) ನಗದು ಬಹುಮಾನ ಒಳಗೊಂಡಿದೆ.
ನಮ್ಮ ಮಿದುಳು ಕೆಲಸ ಮಾಡುವ ರೀತಿಯನ್ನು ಅನುಕರಿಸಿಯೇ ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ಕೃತಕ ನ್ಯೂರಲ್ ನೆಟ್ ವರ್ಕ್ ಎನ್ನಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಕೃತಕ ನ್ಯೂರಲ್ ನೆಟ್ ವರ್ಕ್ ಸಹಕಾರಿಯಾಗಿದೆ.
ಈ ವರ್ಷದ ಇಬ್ಬರು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರು ಇಂದಿನ ಶಕ್ತಿಯುತ ಯಂತ್ರ ಕಲಿಕೆಯ ಅಡಿಪಾಯದ ವಿಧಾನ ಅಭಿವೃದ್ಧಿಪಡಿಸಲು ಭೌತಶಾಸ್ತ್ರದ ಸಾಧನಗಳನ್ನು ಬಳಸಿದ್ದಾರೆ" ಎಂದು ಸ್ವೀಡಿಷ್ ರಾಯಲ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಜೋಡಿಯು ಡಿಸೆಂಬರ್ 10 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಿಂಗ್ ಕಾರ್ಲ್ XVI ಗುಸ್ತಾಫ್ ಅವರಿಂದ ಚಿನ್ನದ ಪದಕ ಮತ್ತು 11 ಮಿಲಿಯನ್ ಡಾಲರ್ ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.