SFJ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ 
ವಿದೇಶ

ಅಮಿತ್ ಶಾ ವಿದೇಶ ಪ್ರವಾಸದ ಮಾಹಿತಿ ನೀಡಿದ್ರೆ 10 ಲಕ್ಷ ಡಾಲರ್ ಬಹುಮಾನ: ಖಲಿಸ್ತಾನಿ ಉಗ್ರ Pannun ಘೋಷಣೆ

ದೇಶದಾದ್ಯಂತ ನವೆಂಬರ್ 26ರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಆರ್‌ಪಿಎಫ್ ಶಾಲೆಗಳನ್ನು ಬಹಿಷ್ಕರಿಸಬೇಕು ಎಂದು ಗುರುಪತ್ವಂತ್ ಸಿಂಗ್ ಪನ್ನು ಒತ್ತಾಯಿಸಿದ್ದಾನೆ.

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿದೇಶ ಪ್ರವಾಸದ ಮಾಹಿತಿ ನೀಡಿದ್ರೆ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಖಲಿಸ್ತಾನಿ ಉಗ್ರ ಹಾಗೂ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಘೋಷಿಸಿದ್ದಾನೆ.

ಇತ್ತೀಚೆಗೆ ಬಿಡುಗಡೆಯಾದ ವೀಡಿಯೋವೊಂದರಲ್ಲಿ ಪನ್ನುನ್, 'ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)1984 ರಲ್ಲಿ ಪಂಜಾಬ್‌ನಲ್ಲಿ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದಾನೆ.

'1984ರ ಸಿಖ್‌ ಹತ್ಯಾಕಾಂಡದ ವೇಳೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಕಾನೂನುಬಾಹಿರ ಹತ್ಯೆಗಳು ಸೇರಿದಂತೆ ವಿವಿಧ ದೌರ್ಜನ್ಯಗಳನ್ನು ಎಸಗಿದ್ದಾರೆ.

ಹಾಗಾಗಿ ದೇಶದಾದ್ಯಂತ ನವೆಂಬರ್ 26ರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಆರ್‌ಪಿಎಫ್ ಶಾಲೆಗಳನ್ನು ಬಹಿಷ್ಕರಿಸಬೇಕು ಎಂದು ಗುರುಪತ್ವಂತ್ ಸಿಂಗ್ ಪನ್ನು ಒತ್ತಾಯಿಸಿದ್ದಾನೆ.

ಗೃಹ ಸಚಿವ ಶಾ ಅವರು ಭಾರತದ ಸಿಆರ್‌ಪಿಎಫ್‌ನ ನೇತೃತ್ವ ವಹಿಸುತ್ತಿದ್ದಾರೆ. ಕೆನಡಾದ ಸಿಖ್‌ ನಾಯಕ ಹರ್ದೀಪ್‌ ಸಿಂಗ್‌ ನಿ‌ಜ್ಜರ್‌ ಹತ್ಯೆಗೆ ನ್ಯೂಯಾರ್ಕ್‌ನಲ್ಲಿ ಸಂಚು ರೂಪಿಸಿದ್ದರು ಎಂದೂ ಪನ್ನು ಆರೋಪಿಸಿದ್ದಾನೆ. ಇದೇ ಕಾರಣಕ್ಕೆ ಅಮಿತ್ ಶಾ ಅವರ ವಿದೇಶ ಪ್ರವಾಸದ ಮಾಹಿತಿ ನೀಡಿದ್ರೆ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾನೆ.

ಈಚೆಗೆ ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಸಿಆರ್‌ಪಿಎಫ್ ಶಾಲೆ ಬಳಿಯ ಸ್ಫೋಟ ಸಂಭವಿಸಿತ್ತು. ಇದರ ಬೆನ್ನಲ್ಲೇ ದೇಶದಾದ್ಯಂತ ಸಿಆರ್‌ಪಿಎಫ್ ಶಾಲೆಗಳು ಮತ್ತು ಎರಡು ಕೇಂದ್ರೀಯ ವಿದ್ಯಾಲಯಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು.

ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ. ಕಾಕತಾಳೀಯವೆಂಬಂತೆ, ಸಿಖ್ ಹತ್ಯಾಕಾಂಡಕ್ಕೆ 40 ವರ್ಷ ಪೂರ್ಣಗೊಳ್ಳುವ ನಿರ್ದಿಷ್ಟ ದಿನಾಂಕದಂದು ಏರ್‌ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನು ಎಚ್ಚರಿಕೆ ನೀಡಿದ್ದರು.

ಆದಾಗ್ಯೂ, ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಮಾಡಿದ ವಿಡಿಯೋ ಹಕ್ಕು ಪರಿಶೀಲನೆಗೆ ಒಳಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಟೆಲಿಗ್ರಾಮ್‌ಗೆ ಪತ್ರವನ್ನೂ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT