PTI
ವಿದೇಶ

Canada: ಡಿವೈಡರ್‌ಗೆ Tesla ಕಾರು ಭೀಕರ ಡಿಕ್ಕಿ; ಗುಜರಾತ್ ಮೂಲದ ನಾಲ್ವರ ದುರ್ಮರಣ!

ಮೃತರೆಲ್ಲರೂ ಗುಜರಾತ್ ಮೂಲದವರು. ಮೃತರಲ್ಲಿ ಗೋಧ್ರಾ ನಿವಾಸಿಗಳಾದ ಕೇತಾಬಾ ಗೋಹಿಲ್ (29) ಮತ್ತು ಅವರ ಸಹೋದರ ನೀಲ್ರಾಜ್ ಗೋಹಿಲ್ (25) ಮತ್ತು ಆನಂದ್ ಜಿಲ್ಲೆಯ ಬೋರ್ಸಾದ್ ನಿವಾಸಿ ಜೈರಾಜ್ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ.

ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಟೆಸ್ಲಾ ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ನಾಲ್ವರು ಭಾರತೀಯರು ಸಾವನ್ನಪ್ಪಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟೊರೊಂಟೊ ಡೌನ್‌ಟೌನ್‌ನ ಲೇಕ್ ಶೋರ್ ಬೌಲೆವರ್ಡ್ ಈಸ್ಟ್ ಮತ್ತು ಚೆರ್ರಿ ಸ್ಟ್ರೀಟ್ ಪ್ರದೇಶದಲ್ಲಿ ಕಳೆದ ವಾರ ಗುರುವಾರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

25-32 ವರ್ಷದೊಳಗಿನ ಐವರು ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕಾಂಕ್ರೀಟ್ ಪಿಲ್ಲರ್ ಗೆ ಡಿಕ್ಕಿ ಹೊಡೆದು ನಂತರ ಗಾರ್ಡ್ ರೈಲಿಗೆ ಗುದ್ದಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ವೇಗದ ಚಾಲನೆ ಅಪಘಾತಕ್ಕೆ ಪ್ರಮುಖ ಕಾರಣ ಇರಬಹುದು ಎಂದು ಶಂಕಿಸಲಾಗಿದೆ ಎಂದು ಟೊರೊಂಟೊ ಪೊಲೀಸ್ ಡ್ಯೂಟಿ ಇನ್ಸ್‌ಪೆಕ್ಟರ್ ಫಿಲಿಪ್ ಸಿಂಕ್ಲೇರ್ ಹೇಳಿದ್ದಾರೆ.

ಮೃತರೆಲ್ಲರೂ ಗುಜರಾತ್ ಮೂಲದವರು. ಮೃತರಲ್ಲಿ ಗೋಧ್ರಾ ನಿವಾಸಿಗಳಾದ ಕೇತಾಬಾ ಗೋಹಿಲ್ (29) ಮತ್ತು ಅವರ ಸಹೋದರ ನೀಲ್ರಾಜ್ ಗೋಹಿಲ್ (25) ಮತ್ತು ಆನಂದ್ ಜಿಲ್ಲೆಯ ಬೋರ್ಸಾದ್ ನಿವಾಸಿ ಜೈರಾಜ್ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ. ಇನ್ನು 25 ವರ್ಷದ ಯುವತಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ವೇಳೆ ಕೆಲ ಚಾಲಕರು ನೆರವಾಗಿದ್ದು ಯುವತಿಯನ್ನು ರಕ್ಷಿಸಿದ್ದಾರೆ. ಟೊರೊಂಟೊದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತೀಯ ಪ್ರಜೆಗಳ ದುರಂತ ನಷ್ಟಕ್ಕೆ ಹೃತ್ಪೂರ್ವಕ ಸಂತಾಪ ಎಂದು ಟೊರೊಂಟೊದಲ್ಲಿನ ಭಾರತೀಯ ದೂತಾವಾಸದ ಅಧಿಕೃತ ಹ್ಯಾಂಡಲ್ ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ