ಸಾಂದರ್ಭಿಕ ಚಿತ್ರ 
ವಿದೇಶ

ಹಿಜ್ಬುಲ್ಲಾ ಕಮಾಂಡರ್ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಎರಡು ವಾರಗಳ ಹಿಂದೆ ದಕ್ಷಿಣ ಲೆಬನಾನ್‌ನಲ್ಲಿನ ಅಯ್ತಾ ಆಶ್-ಶಾಬ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದ ಇಸ್ರೇಲ್ ಸೇನೆ ಇದೀಗ ಹಿಜ್ಬುಲ್ಲಾದ ಕಮಾಂಡರ್ ಹಸನ್ ಅಕಿಲ್ ಜವಾದ್ ನನ್ನು ವಶಕ್ಕೆ ಪಡೆದಿದೆ.

ಟೆಲ್ ಅವೀವ್: ದಕ್ಷಿಣ ಲೆಬನಾನ್‌ ನಲ್ಲಿ ಹೆಜ್ಬೊಲ್ಲಾ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಇಸ್ರೇಲ್ ಸೇನೆ ಬುಧವಾರ ಮಹತ್ವದ ಮುನ್ನಡೆ ಸಾಧಿಸಿದ್ದು, ಹಿಜ್ಬುಲ್ಲಾ ಕಮಾಂಡರ್ ನನ್ನು ವಶಕ್ಕೆ ಪಡೆದಿದೆ.

ಹೌದು.. ಎರಡು ವಾರಗಳ ಹಿಂದೆ ದಕ್ಷಿಣ ಲೆಬನಾನ್‌ನಲ್ಲಿನ ಅಯ್ತಾ ಆಶ್-ಶಾಬ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದ ಇಸ್ರೇಲ್ ಸೇನೆ ಇದೀಗ ಹಿಜ್ಬುಲ್ಲಾದ ಕಮಾಂಡರ್ ಹಸನ್ ಅಕಿಲ್ ಜವಾದ್ ನನ್ನು ವಶಕ್ಕೆ ಪಡೆದಿದೆ.

ಅಂತೆಯೇ ಇದೇ ಸುರಂಗದಲ್ಲಿ ಹಸನ್ ಅಕಿಲ್ ಜವಾದ್ ಗೆ ರಕ್ಷಣೆ ನೀಡುತ್ತಿದ್ದ ಬಂಡುಕೋರರನ್ನೂ ಕೂಡ ಇಸ್ರೇಲ್ ನ ಗೋಲಾನಿ ಬ್ರಿಗೇಡ್ ಪಡೆಗಳು ವಶಪಡಿಸಿಕೊಂಡಿದೆ ಎಂದು IDF ಘೋಷಿಸಿದೆ.

ಗುಪ್ತಚರ ವರದಿಯನ್ನು ಅನುಸರಿಸಿ ಇಸ್ರೇಲ್ ಸೇನೆ ಈ ಕಾರ್ಯಾಚರಣೆ ನಡೆಸಿದ್ದು, ಸೈನಿಕರು ಜವಾದ್ ಮತ್ತು ಇತರ ಕಾರ್ಯಕರ್ತರನ್ನು ಹೆಜ್ಬುಲ್ಲಾ ಕಮಾಂಡ್ ಸೆಂಟರ್‌ನ ಸುರಂಗದಲ್ಲಿ ವಶಕ್ಕೆ ಪಡೆಯುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಹೆಜ್ಬೊಲ್ಲಾ ಆಪರೇಟಿವ್‌ಗಳು ಶರಣಾಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ವೇಳೆ ಗುಪ್ತಚರ ನಿರ್ದೇಶನಾಲಯದ ಘಟಕ 504ರಲ್ಲಿ ವಿಚಾರಣೆಗೊಳಪಡಿಸಿ ಹೆಚ್ಚಿನ ವಿಚಾರಣೆಗಾಗಿ ಇಸ್ರೇಲ್‌ಗೆ ಕರೆತರಲಾಯಿತು. ಅಂತೆಯೇ ದಕ್ಷಿಣ ಲೆಬನಾನ್‌ನಲ್ಲಿ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಹಲವಾರು ಇತರ ಹಿಜ್ಬುಲ್ಲಾ ಕಾರ್ಯಕರ್ತರನ್ನು ಸಹ ಬಂಧಿಸಲಾಗಿದೆ. ಅಲ್ಲದೆ ಸುರಂಗದಲ್ಲಿದ್ದ ಸುಮಾರು ಅರ್ಧ ಟನ್ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಐಡಿಎಫ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT