ಬ್ಯಾಂಕಾಕ್: ನೀರು ಕುಡಿಯಲೆಂದು ಅಡುಗೆ ಮನೆಗೆ ಹೋದ ಮಹಿಳೆಯನ್ನು ದೈತ್ಯಾಕಾರದ ಹೆಬ್ಬಾವೊಂದು ಸುತ್ತಿಕೊಂಡಿದ್ದು, ಈ ವೇಳೆ ಮಹಿಳೆ ಹಾವಿನೊಂದಿಗೆ ಹೋರಾಟ ಮಾಡಿ ಕೊನೆಗೂ ತನ್ನನ್ನು ತಾನು ರಕ್ಷಿಸಿಕೊಂಡಿರುವ ಘಟನೆಯೊಂದು ಬ್ಯಾಂಕಾಕ್ ನಡೆದಿದೆ.
ಥಾಯ್ಲೆಂಡ್ ಅರೋಮ್ ಅರುಣ್ರೋಜ್ ಎಂಬ ಮಹಿಳೆ ಅಡುಗೆ ಮನೆಗೆ ಹೋಗಿದ್ದು, ನೀರು ಕುಡಿಯಲು ಮುಂದಾಗಿದ್ದಾರೆ. ಈ ವೇಳೆ ದೈತ್ಯಾಕಾರದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿದೆ. ಅತೀವ್ರ ನೋವು ಬಳಿಕ ಮಹಿಳೆ ತನ್ನ ದೇಹವನ್ನು ಹೆಬ್ಬಾವು ಸುತ್ತಿಕೊಂಡಿರುವುದನ್ನು ಗಮನಿಸಿದ್ದಾಳೆ. ಸುಮಾರು 4-5 ಮೀಟರ್ ಉದ್ದದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿರುವುದು ಕಂಡು ಬಂದಿದೆ.
ಬಳಿಕ ಹೆದರದ ಮಹಿಳೆ ಹಾವಿನಿಂದ ಬಿಡುಗಡೆಯಾಗಲು ಸಾಕಷ್ಟು ಯತ್ನ ನಡೆಸಿದ್ದಾರೆ. ಈ ವೇಳೆ ಹಾವು ಅನೇಕ ಬಾರಿ ಕಚ್ಚಿದೆ. ಬಳಿಕ ಮಹಿಳೆ ಹಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ರಕ್ಷಣೆಗಾಗಿ ಕೂಗಿದ್ದಾರೆ. ಸುಮಾರು 2 ಗಂಟೆಗಳ ಕಾಲ ಹಾವಿನೊಂದಿಗೆ ಸೆಣೆಸಾಟ ನಡೆಸಿದ್ದಾಳೆ. ಸುಮಾರು ಒಂದೂವರೆ ಗಂಟೆಗಳ ಬಳಿಕ ಆಕೆಯ ಕೂಗಾಟ ಕೇಳಿಸಿಕೊಂಡ ಕೆಲವರು ರಕ್ಷಣೆಗೆ ಧಾವಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ರಕ್ಷಣೆಗೆ ಬಂದ ಪೊಲೀಸರು ಮತ್ತು ಪ್ರಾಣಿ ನಿಯಂತ್ರಣ ಅಧಿಕಾರಿಗಳು ಹಾವು ತನ್ನ ಹಿಡಿತ ಬಿಡುವವರೆಗೆ ಅದರ ತಲೆಗೆ ಹೊಡೆದಿದ್ದಾರೆ. ಬಳಿಕ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಥಾಯ್ಲೆಂಡ್‌ನಲ್ಲಿ ಹಾವುಗಳ ಕಡಿತ ಸಾಮಾನ್ಯ. ಕಳೆದ ವರ್ಷ 26 ಜನರು ವಿಷಕಾರಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. 2023 ರಲ್ಲಿ ಹಾವುಗಳು ಮತ್ತು ಇತರ ಪ್ರಾಣಿಗಳ ವಿಷಕಾರಿ ಕಡಿತಕ್ಕೆ ಒಟ್ಟು 12,000 ಜನರು ಚಿಕಿತ್ಸೆ ಪಡೆದಿದ್ದಾರೆಂದು ವರದಿಗಳು ತಿಳಿಸಿವೆ.
ರೆಟಿಕ್ಯುಲೇಟೆಡ್ ಹೆಬ್ಬಾವು ಥೈಲ್ಯಾಂಡ್‌ನಲ್ಲಿ ಕಂಡುಬರುವ ಅತಿದೊಡ್ಡ ಹಾವಾಗಿದ್ದು, ಇವು ಸಾಮಾನ್ಯವಾಗಿ 1.5 ಮೀಟರ್‌ಗಳಿಂದ 6.5 ಮೀಟರ್‌ಗಳವರೆಗೆ (5 ರಿಂದ 21 ಅಡಿಗಳು) ಉದ್ದವಿರುತ್ತದೆ. ಇವು ಸುಮಾರು 75 ಕಿಲೋಗ್ರಾಂಗಳಷ್ಟು (165 ಪೌಂಡ್‌ಗಳು) ತೂಕವಿರುತ್ತದೆ.
ಸಣ್ಣ ಹೆಬ್ಬಾವುಗಳು ಇಲಿಗಳಂತಹ ಸಣ್ಣ ಸಸ್ತನಿಗಳನ್ನು ತಿಂದರೆ, ದೊಡ್ಡ ಹೆಬ್ಬಾವುಗಳು ಹಂದಿ, ಜಿಂಕೆ, ಸಾಕು ನಾಯಿ ಮತ್ತು ಬೆಕ್ಕುಗಳನ್ನು ಬೇಟೆಯಾಗುತ್ತವೆ. ಕೆಲವೊಮ್ಮೆ ಮನುಷ್ಯರ ಮೇಲೂ ಕೂಡ ದಾಳಿ ಮಾಡುತ್ತವೆ