ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಶ್ರೀಲಂಕಾದ ಐತಿಹಾಸಕ ನಗರ ಅನುರಾಧಪುರಕ್ಕೆ ಭೇಟಿ ನೀಡಿ, ಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕೆ ಅವರೊಂದಿಗೆ ಭಾರತದ ನೆರವಿನ ಎರಡು ಪ್ರಮುಖ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದರು.
ಅನುರಾಧಪುರ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ನೆರವಿನೊಂದಿಗೆ ನವೀಕರಿಸಲಾದ ಮಾಹೋ-ಒಮಂಥೈ ರೈಲು ಮಾರ್ಗ ಮತ್ತು ಮಾಹೋ-ಅನುರಾಧಪುರ ವಿಭಾಗಕ್ಕೆ ಹೊಸದಾಗಿ ಸ್ಥಾಪಿಸಲಾದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉಭಯ ನಾಯಕರು ಅಧಿಕೃತವಾಗಿ ಉದ್ಘಾಟಿಸಿದರು.
ಈ ನವೀಕರಣಗಳು ಶ್ರೀಲಂಕಾದ ಉತ್ತರ ರೈಲು ಸಂಪರ್ಕ ಜಾಲವನ್ನು ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಇದೇ ವೇಳೆ ಪ್ರಧಾನಿ ಮೋದಿ ಅನುರಾಧಪುರದಲ್ಲಿರುವ ಬೋಧಿ ವೃಕ್ಷ ಮತ್ತು ಮಹಾ ಬೋಧಿ ಬೌದ್ಧ ಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.