ವಿದೇಶ

ಅಮೆರಿಕದೊಂದಿಗೆ ನಮ್ಮ ಹಳೆಯ ಸಂಬಂಧ ಮುಗಿದಿದೆ: ವಿಜಯೋತ್ಸವ ಭಾಷಣದಲ್ಲಿ ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನಿ

ನಾವು ಈ ವ್ಯಾಪಾರ ಯುದ್ಧವನ್ನು ಗೆಲ್ಲುತ್ತೇವೆ" ಎಂದು ಕಾರ್ನಿ ಒಟ್ಟಾವಾದಲ್ಲಿ ವಿಜಯೋತ್ಸವ ಭಾಷಣದಲ್ಲಿ ಬೆಂಬಲಿಗರಿಗೆ ಹೇಳಿದರು. ಟ್ರಂಪ್‌ರ ಸುಂಕ ಸಮರ ಮತ್ತು ಸ್ವಾಧೀನ ಬೆದರಿಕೆಗಳಿಂದ ಬರುವ 'ಸವಾಲಿನ' ದಿನಗಳ ಬಗ್ಗೆ ಎಚ್ಚರಿಕೆ ನೀಡಿದರು.

ಕೆನಡಾದ ಹೊಸಯಾದ ಪ್ರಧಾನಿ ಮಾರ್ಕ್ ಕಾರ್ನಿ, ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ದೇಶದ ಹಳೆಯ ಸಂಬಂಧ, ನಿರಂತರವಾಗಿ ಹೆಚ್ಚುತ್ತಿರುವ ಏಕೀಕರಣವನ್ನು ಆಧರಿಸಿದ ಸಂಬಂಧ, 'ಮುಗಿದಿದೆ' ಎಂದು ಹೇಳಿದ್ದಾರೆ.

"ಇವು ದುರಂತಗಳು, ಆದರೆ ಇದು ನಮ್ಮ ಹೊಸ ವಾಸ್ತವವೂ ಆಗಿದೆ. ನಾವು ಅಮೆರಿಕದ ದ್ರೋಹದ ಆಘಾತದಿಂದ ಹೊರಬಂದಿದ್ದೇವೆ, ಆದರೆ ಅದರ ಪಾಠಗಳನ್ನು ನಾವು ಎಂದಿಗೂ ಮರೆಯಬಾರದು. ನಾವು ನಮ್ಮನ್ನು ನಾವು ನೋಡಿಕೊಳ್ಳಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪರಸ್ಪರ ಕಾಳಜಿ ವಹಿಸಬೇಕು" ಎಂದು ಅವರು ಹೇಳಿದ್ದಾರೆ.

"ನಾವು ಈ ವ್ಯಾಪಾರ ಯುದ್ಧವನ್ನು ಗೆಲ್ಲುತ್ತೇವೆ" ಎಂದು ಕಾರ್ನಿ ಒಟ್ಟಾವಾದಲ್ಲಿ ವಿಜಯೋತ್ಸವ ಭಾಷಣದಲ್ಲಿ ಬೆಂಬಲಿಗರಿಗೆ ಹೇಳಿದರು. ಟ್ರಂಪ್‌ರ ಸುಂಕ ಸಮರ ಮತ್ತು ಸ್ವಾಧೀನ ಬೆದರಿಕೆಗಳಿಂದ ಬರುವ 'ಸವಾಲಿನ' ದಿನಗಳ ಬಗ್ಗೆ ಎಚ್ಚರಿಕೆ ನೀಡಿದರು.

ವಾಷಿಂಗ್ಟನ್‌ನ ಬೆದರಿಕೆಗಳ ಹಿನ್ನೆಲೆಯಲ್ಲಿ ಕೆನಡಾದ ಏಕತೆಯ ಮಹತ್ವವನ್ನು ಕಾರ್ನಿ ಒತ್ತಿ ಹೇಳಿದರು. "ಅಧ್ಯಕ್ಷ ಟ್ರಂಪ್ ಅಮೆರಿಕ ನಮ್ಮನ್ನು ವಿಲೀನಗೊಳಿಸಿಕೊಳ್ಳಲು ಅಥವಾ ನಮ್ಮನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಅದು ಎಂದಿಗೂ ... ಎಂದಿಗೂ ಸಂಭವಿಸುವುದಿಲ್ಲ" ಎಂದು ಅವರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ನಮ್ಮ ಜಗತ್ತು ಮೂಲಭೂತವಾಗಿ ಬದಲಾಗಿದೆ ಎಂಬ ವಾಸ್ತವವನ್ನು ಗುರುತಿಸಬೇಕು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೊಸದಾಗಿ ಆಯ್ಕೆಯಾದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಅಭಿನಂದಿಸಿದ್ದಾರೆ ಮತ್ತು ದೀರ್ಘ ರಾಜತಾಂತ್ರಿಕ ತಂಪಿನ ನಂತರ ಭಾರತ-ಕೆನಡಾ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. "ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ನಮ್ಮ ಜನರಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಪ್ರಧಾನಿ ಮೋದಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT