ಯೆಮೆನ್  
ವಿದೇಶ

Yemen ಕರಾವಳಿಯಲ್ಲಿ ಘೋರ ದುರಂತ: ದೋಣಿ ಮುಳುಗಿ ಕನಿಷ್ಠ 54 ವಲಸಿಗರ ಸಾವು, ಹಲವರು ನಾಪತ್ತೆ..!

ಹಡಗಿನಲ್ಲಿದ್ದ ಸುಮಾರು 150 ಜನರ ಪೈಕಿ 10 ಜನರನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಅವರು ಹೇಳಿದ್ದಾರೆ.

ಅಡೆನ್: ಯೆಮೆನ್ ಕರಾವಳಿಯಲ್ಲಿ ಘೋರ ದುರಂತವೊಂದ ಸಂಭವಿಸಿದ್ದು, ಸುಮಾರು 150 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಟ 54 ಮಂದಿ ವಲಸಿಗರು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೆಮೆನ್‌ನ ದಕ್ಷಿಣ ಅಬ್ಯಾನ್ ಪ್ರಾಂತ್ಯದ ಅಹ್ವರ್ ಜಿಲ್ಲೆಯ ಬಳಿ ದೋಣಿ ಮಗುಚಿ ಬಿದ್ದಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಹಡಗಿನಲ್ಲಿದ್ದ ಸುಮಾರು 150 ಜನರ ಪೈಕಿ 10 ಜನರನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಅವರು ಹೇಳಿದ್ದಾರೆ.

ಒಂಬತ್ತು ಇಥಿಯೋಪಿಯನ್ನರು ಮತ್ತು ಒಬ್ಬ ಯೆಮೆನ್ ಪ್ರಜೆಯನ್ನು ರಕ್ಷಿಸಲಾಗಿದೆ. ಆದರೆ, 12ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಯೆಮೆನ್ ನಲ್ಲಿ ಆಫ್ರಿಕಾದಿಂದ ಬರುವ ಅನಿಯಮಿತ ವಲಸಿಗರು ಬರುತ್ತಿದ್ದು, ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.

ಒಂದು ದಶಕಕ್ಕೂ ಹೆಚ್ಚು ಕಾಲದ ಅಂತರ್ಯುದ್ಧದ ಹೊರತಾಗಿಯೂ, ಪೂರ್ವ ಆಫ್ರಿಕಾ ಪ್ರದೇಶದಿಂದ ಕೆಲಸಕ್ಕಾಗಿ ಗಲ್ಫ್ ಅರಬ್ ದೇಶಗಳನ್ನು ತಲುಪಲು ಪ್ರಯತ್ನಿಸುತ್ತಿರುವ ವಲಸಿಗರಿಗೆ ಯೆಮೆನ್ ಒಂದು ಪ್ರಮುಖ ಮಾರ್ಗವಾಗಿದೆ.

ಕೆಂಪು ಸಮುದ್ರ ಅಥವಾ ಅಡೆನ್ ಕೊಲ್ಲಿಯಾದ್ಯಂತ ಅಪಾಯಕಾರಿ, ಕಿಕ್ಕಿರಿದ ದೋಣಿಗಳಲ್ಲಿ ವಲಸಿಗರನ್ನು ಕಳ್ಳಸಾಗಣೆದಾರರು ಕರೆದೊಯ್ಯುತ್ತಾರೆ. ಕಳೆದ ವರ್ಷ 60,000 ಕ್ಕೂ ಹೆಚ್ಚು ವಲಸಿಗರ ಯೆಮೆನ್‌ಗೆ ಆಗಮಿಸಿದ್ದಾರೆಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

SCROLL FOR NEXT