ಪಾಕಿಸ್ತಾನ ಸೇನೆ ಮೇಲೆ ಬಂಡುಕೋರ ದಾಳಿ (ಸಂಗ್ರಹ ಚಿತ್ರ) 
ವಿದೇಶ

ಪಾಕಿಸ್ತಾನ ವಿರುದ್ಧ ಮತ್ತೆ ಮುಗಿಬಿದ್ದ Balochistan ಬಂಡುಕೋರರು, 9 ಸೈನಿಕರು ಹತ!

ಬಲೂಚ್ ಲಿಬರೇಶನ್ ಆರ್ಮಿ ಗುಂಪು ಮಾರಕ ದಾಳಿಗಳ ಸರಣಿಯ ನಂತರ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಆ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದ ದಿನವೇ ಈ ದಾಳಿ ನಡೆದಿದೆ.

ಕ್ವೆಟ್ಟಾ: ಅಮೆರಿಕ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಬಲೂಚಿಸ್ತಾನ ಬಂಡುಕೋರರು ದಾಳಿ ನಡೆಸಿದ್ದಾರೆ.

ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ತಾನದ ವಾಶುಕ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಂಬತ್ತು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗುಂಪು ಮಾರಕ ದಾಳಿಗಳ ಸರಣಿಯ ನಂತರ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಆ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದ ದಿನವೇ ಅಂದರೆ ಸೋಮವಾರ ಈ ದಾಳಿ ನಡೆದಿದೆ.

ದಾಳಿ ನಡೆದ ವಾಶುಕ್ ಜಿಲ್ಲೆಯ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು, ಡಜನ್ಗಟ್ಟಲೆ ಉಗ್ರರು ಪೊಲೀಸ್ ಠಾಣೆ ಮತ್ತು ಗಡಿ ಪಡೆಗಳ ಆವರಣದ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು.

ಮೋಟಾರ್‌ಬೈಕ್‌ಗಳಲ್ಲಿ ಬಂದ ಸುಮಾರು 40 ರಿಂದ 50 ಭಯೋತ್ಪಾದಕರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿ ಅವುಗಳನ್ನು ಧ್ವಂಸ ಮಾಡಿದರು. ವಾಶುಕ್ ಜಿಲ್ಲೆಯ ಬಸಿಮಾ ನಗರದ ಫ್ರಾಂಟಿಯರ್ ಕಾರ್ಪ್ಸ್ ಕಾಂಪೌಂಡ್ ಮೇಲೆ ಉಗ್ರಗಾಮಿಗಳು ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದಿದ್ದಾರೆ.

ಈ ವೇಳೆ ಕನಿಷ್ಠ 9 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದು, ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಆಂತರಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇನ್ನು ಈ ದಾಳಿಗೆ ಸಂಬಂಧಿಸಿದಂತೆ ಈ ವರೆಗೂ ಯಾವುದೇ ಸಂಘಟನೆ ಹೊಣೆಹೊತ್ತುಕೊಂಡಿಲ್ಲ. ಆದರೆ ಪಾಕಿಸ್ತಾನ ಸೇನೆ ಬಿಎಲ್ಎ (ಬಲೂಚ್ ಲಿಬರೇಶನ್ ಆರ್ಮಿ) ಈ ದಾಳಿ ಮಾಡಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತಕ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!

ಇಟಲಿಯಲ್ಲಿ ಪ್ರಧಾನಿ ಮೋದಿ: “ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್” ಎಂದು ಆತ್ಮೀಯ ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ..!

ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ: ತೈಲ ಬೆಲೆ ಭಾರೀ ಕುಸಿತ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Bangladesh ಸರ್ಕಾರಿ ಕಚೇರಿಯಲ್ಲಿ ಭಾರತೀಯ ಅಧಿಕಾರಿ ನಿಗೂಢ ಸಾವು, ತನಿಖೆ ಆರಂಭ

SCROLL FOR NEXT