ಡೊನಾಲ್ಡ್ ಟ್ರಂಪ್-ಜಾನ್ ಬೋಲ್ಟನ್ 
ವಿದೇಶ

ಭಾರತದ ಮೇಲೆ ಸುಂಕ ವಿಧಿಸಿದ್ದನ್ನು ಟೀಕಿಸಿದ್ದ ಟ್ರಂಪ್ ಆಪ್ತ, ಮಾಜಿ NSA ಮುಖ್ಯಸ್ಥನ ಮನೆ ಮೇಲೆ FBI ದಾಳಿ!

ಜಾನ್ ಬೋಲ್ಟನ್ ಟ್ರಂಪ್ ಅವರ ಮಾಜಿ ಸಹಾಯಕರಾಗಿದ್ದು ಸುಂಕಗಳ ಕುರಿತು ಹಲವಾರು ಬಾರಿ ಅಮೆರಿಕ ಸರ್ಕಾರವನ್ನು ಟೀಕಿಸಿದ್ದರು.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳನ್ನು ಟೀಕಿಸಿದ್ದ ಮಾಜಿ ಎನ್ಎಸ್ಎ ಜಾನ್ ಬೋಲ್ಟನ್ ಅವರ ಮನೆ ಮೇಲೆ FBI ದಾಳಿ ನಡೆಸಿದೆ. ಜಾನ್ ಬೋಲ್ಟನ್ ಟ್ರಂಪ್ ಅವರ ಮಾಜಿ ಸಹಾಯಕರಾಗಿದ್ದು ಸುಂಕಗಳ ಕುರಿತು ಹಲವಾರು ಬಾರಿ ಅಮೆರಿಕ ಸರ್ಕಾರವನ್ನು ಟೀಕಿಸಿದ್ದರು.

ದಾಖಲೆಗಳಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಎಫ್‌ಬಿಐ ಅಧಿಕಾರಿಗಳು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಜಾನ್ ಬೋಲ್ಟನ್ ಅವರ ವಾಷಿಂಗ್ಟನ್ ಡಿಸಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರ ಆದೇಶದ ಮೇರೆಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮೇರಿಲ್ಯಾಂಡ್‌ನ ಬೆಥೆಸ್ಡಾದಲ್ಲಿರುವ ಬೋಲ್ಟನ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಪಟೇಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, 'ಯಾರೂ ಕಾನೂನಿಗಿಂತ ದೊಡ್ಡವರಿಲ್ಲ. ಎಫ್‌ಬಿಐ ಅಧಿಕಾರಿಗಳು ಕಾರ್ಯಾಚರಣೆಯಲ್ಲಿದ್ದಾರೆ' ಎಂದು ಬರೆದಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಟ್ರಂಪ್ ಸುಂಕವನ್ನು ವಿಧಿಸಿದ್ದಾರೆ. ಆದರೆ ಚೀನಾದ ಮೇಲೆ ಸುಂಕ ವಿಧಿಸಿಲ್ಲ. ಹೀಗಾಗಿ ಭಾರತ ರಷ್ಯಾ-ಚೀನಾಕ್ಕೆ ಹತ್ತಿರವಾಗಲು ಇದೇ ಕಾರಣವಾಗಿರಬಹುದು. ಟ್ರಂಪ್ ಆಡಳಿತವು ಇದರ ಬಗ್ಗೆ ಗಮನ ಹರಿಸದಿರುವುದು ಉದ್ದೇಶಪೂರ್ವಕವಲ್ಲದ ತಪ್ಪು ಎಂದು ಬೋಲ್ಟನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಟ್ರಂಪ್ ಭಾರತದೊಂದಿಗಿನ ಸಂಬಂಧವನ್ನು ನಿಭಾಯಿಸಬೇಕಾಗಿದೆ ಎಂದು ಬೋಲ್ಟನ್ ಹೇಳಿದರು. ನಾವು ಸಂಬಂಧಕ್ಕೆ ಆಗುವ ಹಾನಿಯ ಬಗ್ಗೆ ಗಮನಹರಿಸಬೇಕು. ಸಾಧ್ಯವಾದಷ್ಟು ಬೇಗ ಭಾರತದೊಂದಿಗಿನ ಸಂಬಂಧವನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ನಾವು ಯೋಚಿಸಬೇಕು.

ಭಾರತ-ಯುಎಸ್ ಸಂಬಂಧಗಳು ಕೆಟ್ಟ ಸ್ಥಿತಿಯಲ್ಲಿವೆ. ಇದು ಭಾರತವನ್ನು ಚೀನಾ ಮತ್ತು ರಷ್ಯಾಕ್ಕೆ ಹತ್ತಿರ ತರುತ್ತಿದೆ. ಇದು ಭವಿಷ್ಯದಲ್ಲಿ ಅಮೆರಿಕಕ್ಕೆ ಸಮಸ್ಯೆಗಳು ಉಂಟು ಮಾಡಬಹುದು ಎಂದು ಬೋಲ್ಟನ್ ಹೇಳಿದರು. ಟ್ರಂಪ್ ಮತ್ತು ಅಮೆರಿಕ ಭಾರತ ರಷ್ಯಾದ ತೈಲವನ್ನು ಖರೀದಿಸುವುದು. ಅದನ್ನು ಸಂಸ್ಕರಿಸುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಲ್ಲಿ ಸಮಸ್ಯೆ ಇದ್ದರೆ ಈ ಬಗ್ಗೆ ಚರ್ಚೆ ನಡೆಯಬೇಕು. ಭಾರತ ಯಾವುದೇ ರೀತಿಯ ನಿಷೇಧವನ್ನು ಉಲ್ಲಂಘಿಸಿಲ್ಲ ಎಂಬುದು ಸಹ ಸತ್ಯ ಎಂದು ಬೋಲ್ಟನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT