ಕ್ಸಿ-ಜಿನ್ ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ವಿದೇಶ

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆ ಪ್ರಧಾನಿ ಮೋದಿ ಮಹತ್ವದ ಭೇಟಿ!

ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದು, "ದ್ವಿಪಕ್ಷೀಯ ಸಂಬಂಧಗಳನ್ನು ದೀರ್ಘಾವಧಿಯಲ್ಲಿ ಸ್ಥಿರಗೊಳಿಸುವುದು" ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಕುರಿತು ಹೆಚ್ಚಿನ ಚರ್ಚೆಗಾಗಿ ನಿರ್ಧರಿಸಿದ್ದಾರೆ.

ನವದೆಹಲಿ: ಏಳು ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಭೇಟಿಗಾಗಿ ಚೀನಾಕ್ಕೆ ಆಗಮಿಸಿದ್ದು, ಬದಲಾಗುತ್ತಿರುವ ಭಾರತ-ಚೀನಾ ಬಾಂಧವ್ಯದಲ್ಲಿ ಮಹತ್ವದ ಕ್ಷಣವಾಗಿದೆ.

ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯಕ್ಕೆ ಅಡ್ಡಿಯಾಗಿರುವ ಟ್ರಂಪ್ ಸುಂಕಾಸ್ತ್ರ ಜಾಗತಿಕ ಆರ್ಥಿಕತೆ ಮೇಲೆ ಅನಿಶ್ಚಿತತೆಯ ಕಾರ್ಮೋಡ ಉಂಟು ಮಾಡಿರುವಂತೆಯೇ ಮೋದಿ ಅವರು ಶನಿವಾರ ಸಂಜೆ ಟಿಯಾಂಜಿನ್‌ಗೆ ಆಗಮಿಸಿದ್ದಾರೆ.

ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದು, "ದ್ವಿಪಕ್ಷೀಯ ಸಂಬಂಧಗಳನ್ನು ದೀರ್ಘಾವಧಿಯಲ್ಲಿ ಸ್ಥಿರಗೊಳಿಸುವುದು" ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಕುರಿತು ಹೆಚ್ಚಿನ ಚರ್ಚೆಗಾಗಿ ನಿರ್ಧರಿಸಿದ್ದಾರೆ.

ಭಾರತ ಮತ್ತು ಚೀನಾ ಎರಡೂ ದೊಡ್ಡ ಭೌಗೋಳಿಕ ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವಾಗ ತಮ್ಮ ಸಂಬಂಧದಲ್ಲಿ ದೀರ್ಘಕಾಲೀನ ಸ್ಥಿರತೆಯನ್ನು ಖಾತ್ರಿಗೆ ಕ್ರಮಗಳನ್ನು ರೂಪಿಸಲು ಬಯಸುತ್ತಿವೆ.

ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಎರಡೂ ದೇಶಗಳು ಪ್ರಮುಖ ರಾಷ್ಟ್ರಗಳಾಗಿರುವುದರಿಂದ ಟ್ರಂಪ್ ಸುಂಕ ಹೇರಿಕೆಯಿಂದ ಆಗಿರುವ ಅಂತಾರಾಷ್ಟ್ರೀಯ ಆರ್ಥಿಕ ಸ್ಥಿರತೆಯನ್ನು ಮರುಸ್ಥಾಪಿಸುವತ್ತ ಮಾತುಕತೆಗಳು ನಡೆಯಲಿವೆ. ಹೆಚ್ಚಿನ ನಂಬಿಕೆ ಮತ್ತು ಪರಸ್ಪರರ ಕಾಳಜಿಗಳಿಗೆ ಆದ್ಯತೆ ನೀಡುವ ಮೂಲಕ ದ್ವಿಪಕ್ಷೀಯ ಸಂಬಂಧದಲ್ಲಿ ದೀರ್ಘಾವಧಿಯ ಸ್ಥಿರತೆಯನ್ನು ಎರಡು ಕಡೆಯವರು ಎದುರು ನೋಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

2020 ರ ಗಡಿ ಘರ್ಷಣೆಗಳಿಗೆ ಮುಂಚಿತವಾಗಿ ಕಜಾನ್‌ನಲ್ಲಿ ಮೋದಿ ಮತ್ತು ಕ್ಸಿ ಅವರ ಕೊನೆಯ ಸಭೆಯ ನಂತರ ಸಂಬಂಧಗಳನ್ನು ತಹಬಂದಿಗೆ ತರಲು ಎರಡೂ ರಾಷ್ಟ್ರಗಳು ಈಗಾಗಲೇ ಪ್ರಯತ್ನಗಳನ್ನು ನಡೆಸಿವೆ. ಆರ್ಥಿಕ ವಿಚಾರಗಳು ಚರ್ಚೆಗಳಿಗೆ ಕೇಂದ್ರವಾಗಿದೆ. ಒತ್ತಡದಲ್ಲಿರುವ ವ್ಯಾಪಾರ ಸಂಬಂಧದೊಂದಿಗೆ, ಎರಡೂ ಕಡೆಯವರು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ. ಹೆಚ್ಚುವರಿಯಾಗಿ, ನೇರ ವಿಮಾನಗಳ ಪುನರಾರಂಭ ಮತ್ತು ಜನರಿಂದ ಜನರ ವಿನಿಮಯದ ಪುನರುಜ್ಜೀವನವು ಪ್ರಮುಖ ವಿಷಯಗಳೆಂದು ನಿರೀಕ್ಷಿಸಲಾಗಿದೆ.

"ಪ್ರಸ್ತುತ ಬಿಕ್ಕಟ್ಟಿನ ನಡುವೆ ವಿಶ್ವ ಆರ್ಥಿಕತೆಗೆ ಸ್ಥಿರತೆ ತರಲು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾಗಿರುವ ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡುವ ಅಗತ್ಯತೆಯ ಬಗ್ಗೆ ಪ್ರಧಾನಿ ಮೋದಿ ಕೂಡಾ ಈ ಹಿಂದೆ ಮಾತನಾಡಿದ್ದರು.

ಗಡಿಯುದ್ದಕ್ಕೂ ಶಾಂತಿಯು ನಿರ್ಣಾಯಕ ವಿಷಯವಾಗಿ ಉಳಿದಿದೆ. ಗಡಿಯಲ್ಲಿ ಶಾಂತಿಯು ನಮ್ಮ ದ್ವಿಪಕ್ಷೀಯ ಸಂಬಂಧದ ಬೆಳವಣಿಗೆಗೆ ಆಧಾರವಾಗಿದೆ ಎಂಬ ತಿಳುವಳಿಕೆ ಇದೆ. ಆರ್ಥಿಕ ಅಥವಾ ರಾಜತಾಂತ್ರಿಕ ಕ್ಷೇತ್ರಗಳಲ್ಲಿನ ಯಾವುದೇ ಪ್ರಗತಿಯು ಗಡಿಯುದ್ದಕ್ಕೂ ಸ್ಥಿರತೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕನ್ನಡ ಕಲಿಯಲು ಯತ್ನ, ಎಲ್ಲಾ ಭಾಷೆ, ಸಂಪ್ರದಾಯಗಳ ಬಗ್ಗೆ ಗೌರವ ಇದೆ: ರಾಷ್ಟ್ರಪತಿ ಮುರ್ಮು

ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ, ಆದ್ರೂ ಯಾವುದೇ ಲಾಭ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ

DKS ನಟ್ಟು ಬೋಲ್ಟು ಹೇಳಿಕೆ ಕಿತಾಪತಿಗೆ ಸಾಧು ಕೋಕಿಲ ಕಾರಣ; ದರ್ಶನ್ ಸ್ನೇಹದ ಬಗ್ಗೆ ನಟ ಸುದೀಪ್ ಹೇಳಿದ್ದೇನು?

Indian Stock Market: GDP ವರದಿ ಎಫೆಕ್ಟ್; ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಲಾಭ!

'Vote chori' ಮಾಹಿತಿಯ ಹೈಡ್ರೋಜನ್ ಬಾಂಬ್ ಬರ್ತಾ ಇದೆ.. PM Modi ಮುಖ ಕೂಡ ತೋರಿಸಲಾಗಲ್ಲ: Rahul Gandhi

SCROLL FOR NEXT