ನವದೆಹಲಿ: ಕರಾಚಿಯಲ್ಲಿ ತನ್ನನ್ನು ಕೈಬಿಟ್ಟ ಪತಿ ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆಗೆ ಸಿದ್ಧತೆಗೆ ನಡೆಸಿದ್ದಾರೆ ಎಂದು ಪಾಕಿಸ್ತಾನದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ನಿಕಿತಾ ನಾಗ್ದೇವ್ ಎಂದು ಗುರುತಿಸಲಾದ ಮಹಿಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯ ಕೋರಿ ಹತಾಶೆಯ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದು ಎರಡೂ ದೇಶಗಳ ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ಕಾನೂನು ಸಂಸ್ಥೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕರಾಚಿಯ ನಿವಾಸಿ ನಿಕಿತಾ, ದೀರ್ಘಾವಧಿಯ ವೀಸಾದಲ್ಲಿ ಇಂದೋರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮೂಲದ ವ್ಯಕ್ತಿ ವಿಕ್ರಮ್ ನಾಗ್ದೇವ್ ಅವರನ್ನು ಜನವರಿ 26, 2020 ರಂದು ಹಿಂದೂ ಪದ್ಧತಿಗಳ ಪ್ರಕಾರ ಕರಾಚಿಯಲ್ಲಿ ವಿವಾಹವಾಗಿರುವುದಾಗಿ ಆರೋಪಿಸಿದ್ದಾರೆ.
ಒಂದು ತಿಂಗಳ ನಂತರ ವಿಕ್ರಮ್ ಆಕೆಯನ್ನು ಫೆಬ್ರವರಿ 26 ರಂದು ಭಾರತಕ್ಕೆ ಕರೆತಂದರು. ಆದರೆ ತಿಂಗಳುಗಳಲ್ಲಿ, ಅವರ ಜೀವನ ತಲೆಕೆಳಗಾಗಿತ್ತು ಎಂದು ನಿಕಿತಾ ಹೇಳಿಕೊಂಡಿದ್ದಾರೆ.
ಜುಲೈ 9, 2020 ರಂದು, ವೀಸಾ ತಾಂತ್ರಿಕ ದೋಷದ ನೆಪದಲ್ಲಿ ಅಟ್ಟಾರಿ ಗಡಿಯಲ್ಲಿ ಕೈಬಿಡಲಾಯಿತು. ಅಲ್ಲದೇ ಬಲವಂತವಾಗಿ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು. ಅಂದಿನಿಂದ ನನ್ನನ್ನು ಮರಳಿ ಕರೆತರಲು ವಿಕ್ರಮ್ ಎಂದಿಗೂ ಪ್ರಯತ್ನಿಸಲಿಲ್ಲ. ನಾನು ಅವರನ್ನು ಭಾರತಕ್ಕೆ ಕರೆಯುವಂತೆ ಮನವಿ ಮಾಡುತ್ತಲೇ ಇದೆ. ಆದರೆ ಅವರು ಪ್ರತಿ ಬಾರಿಯೂ ನಿರಾಕರಿಸಿದರು ಎಂದು ನಿಕಿತಾ, ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಇಂದು ನ್ಯಾಯ ಸಿಗದಿದ್ದರೆ ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅನೇಕ ಹುಡುಗಿಯರು ತಮ್ಮ ವೈವಾಹಿಕ ಮನೆಗಳಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳ ಎದುರಿಸುತ್ತಾರೆ. ಎಲ್ಲರೂ ನನ್ನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಅವರು ಮನವಿ ಮಾಡಿದ್ದಾರೆ.