ರಾಜ್ಯ ಟಿವಿಯಲ್ಲಿ ಕಾಣಿಸಿಕೊಂಡ ಸೈನಿಕರು 
ವಿದೇಶ

ಆಫ್ರಿಕಾದಲ್ಲಿ ಮತ್ತೊಂದು ದಂಗೆ: ಬೆನಿನ್ ಅಧ್ಯಕ್ಷನ ಪದಚ್ಯುತಿ, ಆಡಳಿತ ಮಿಲಿಟರಿ ವಶಕ್ಕೆ; TV ಯಲ್ಲಿ ಕಾಣಿಸಿಕೊಂಡ ಸೈನಿಕರು ಮಾಡಿದ್ದೇನು?

"ಮಿಲಿಟರಿ ಕಮಿಟಿ ಫಾರ್ ರಿಫೌಂಡೇಶನ್" (CMR) ಎಂದು ಕರೆದುಕೊಳ್ಳುವ ಸೈನಿಕರು, ಪ್ಯಾಟ್ರಿಸ್ ಟ್ಯಾಲನ್ ಅವರನ್ನು ಭೇಟಿಯಾಗಿ ಗಣರಾಜ್ಯದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯಟಿವಿಯಲ್ಲಿ ಹೇಳಿದ್ದಾರೆ.

ಬೆನಿನ್: ಪಶ್ಚಿಮ ಆಫ್ರಿಕಾದ ಬೆನಿನ್ ನಲ್ಲಿ ಮಿಲಿಟರಿ ಸಿಬ್ಬಂದಿ ಭಾನುವಾರ ದಂಗೆ ಎದಿದ್ದು, ಅಧ್ಯಕ್ಷ ಪ್ಯಾಟ್ರಿಸ್ ಟ್ಯಾಲನ್ ಅವರನ್ನು ಪದಚ್ಯುತಿಗೊಳಿಸಿರುವುದಾಗಿ ಘೋಷಿಸಿದೆ. ಆದರೆ ಟ್ಯಾಲನ್ ಸುರಕ್ಷಿತವಾಗಿದ್ದು, ಸೈನ್ಯ ಮತ್ತೆ ನಿಯಂತ್ರಣವನ್ನು ಪಡೆಯುತ್ತಿದೆ ಎಂದು ಹೇಳಿದೆ.

"ಮಿಲಿಟರಿ ಕಮಿಟಿ ಫಾರ್ ರಿಫೌಂಡೇಶನ್" (CMR) ಎಂದು ಕರೆದುಕೊಳ್ಳುವ ಸೈನಿಕರು, ಪ್ಯಾಟ್ರಿಸ್ ಟ್ಯಾಲನ್ ಅವರನ್ನು ಭೇಟಿಯಾಗಿ ಗಣರಾಜ್ಯದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯಟಿವಿಯಲ್ಲಿ ಹೇಳಿದ್ದಾರೆ.

ಮಡಗಾಸ್ಕರ್ ಮತ್ತು ಗಿನಿಯಾ-ಬಿಸ್ಸೌದಲ್ಲಿ ಹಲವು ತಿಂಗಳುಗಳಿಂದ ಎರಡು ದಂಗೆಗಳು ನಡೆದ ನಂತರ ಈ ಘೋಷಣೆ ಮಾಡಲಾಗಿದೆ. ಬೆನಿನ್ ಉತ್ತರದಲ್ಲಿ ನೈಜರ್ ಮತ್ತು ಬುರ್ಕಿನಾ ಫಾಸೊದ ಗಡಿಯಾಗಿದೆ. ಇವುಗಳನ್ನು ಸಹ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಆರ್ಥಿಕ ರಾಜಧಾನಿಯಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸದ ಬಳಿ ಗುಂಡಿನ ದಾಳಿ ವರದಿಯಾಗಿದೆ" ಎಂದು ಫ್ರೆಂಚ್ ರಾಯಭಾರ ಕಚೇರಿ X ನಲ್ಲಿ ತಿಳಿಸಿದೆ.

ಭದ್ರತೆಗಾಗಿ ಫ್ರೆಂಚ್ ನಾಗರಿಕರನ್ನು ಮನೆಯೊಳಗೆ ಇರಲು ಸೂಚಿಸಿದೆ. ಆದರೆ 10 ವರ್ಷಗಳಿಂದ ಪಶ್ಚಿಮ ಆಫ್ರಿಕಾದ ರಾಷ್ಟ್ರದ ಅಧ್ಯಕ್ಷರಾಗಿರುವ ಟ್ಯಾಲನ್ ಅವರ ಕುಟುಂಬ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ನಗರ ಮತ್ತು ದೇಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸುದ್ದಿಸಂಸ್ಥೆ AFP ಗೆ ರಾಯಭಾರ ಕಚೇರಿ ತಿಳಿಸಿದೆ.

ಬೆನಿನ್‌ ರಾಜಕೀಯ ಇತಿಹಾಸದಲ್ಲಿ ಹಲವಾರು ದಂಗೆಗಳಾಗಿವೆ. 2016 ರಲ್ಲಿ ಅಧಿಕಾರಕ್ಕೆ ಬಂದ ಟ್ಯಾಲನ್, ಸಂವಿಧಾನವು ಅನುಮತಿಸಿದ ಗರಿಷ್ಠವಾದ 2026 ರಲ್ಲಿ ಅವರ ಎರಡನೇ ಅವಧಿ ಮುಗಿಯಲಿದೆ. ಅವರ ಉತ್ತರಾಧಿಕಾರಿಯಾಗುವ ಸ್ಪರ್ಧೆಯಿಂದ ಮುಖ್ಯ ವಿರೋಧ ಪಕ್ಷವನ್ನು ಹೊರಗಿಡಲಾಗಿದ್ದು, ಆಡಳಿತ ಪಕ್ಷ ಇತರ ವಿರೋಧ ಪಕ್ಷಗಳೊಂದಿಗೆ ಅಧಿಕಾರಕ್ಕಾಗಿ ಹೋರಾಡುತ್ತಿತ್ತು. ಕೊಟೊನೌದ "ಹತ್ತಿ ರಾಜ" ಎಂದು ಕರೆಯಲ್ಪಡುವ 67 ವರ್ಷದ ಮಾಜಿ ಉದ್ಯಮಿ ಟ್ಯಾಲನ್, ಬೆನಿನ್‌ಗೆ ಆರ್ಥಿಕ ಅಭಿವೃದ್ಧಿಯನ್ನು ತಂದಿದ್ದಕ್ಕಾಗಿ ಪ್ರಶಂಸಿಸಲ್ಪಟ್ಟಿದ್ದಾರೆ ಆದರೆ ಅನೇಕ ಕಾರಣಗಳಿಂದ ಸರ್ವಾಧಿಕಾರದ ಆರೋಪವನ್ನು ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಮಲಯಾಳಂ ನಟಿ ಮೇಲೆ ಅತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಮಧ್ಯಪ್ರದೇಶ: ಕೋಟಿ ಕೋಟಿ ಬಹುಮಾನ ಹೊಂದಿದ್ದ 10 ನಕ್ಸಲರು ಶಸ್ತ್ರಾಸ್ತ್ರ ಸಹಿತ ಶರಣಾಗತಿ!

ಡಿಕೆಶಿ ಅವಕಾಶ ಕೇಳಿದ್ರು, ಆದ್ರೆ CM ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸ್ಫೋಟಕ ಹೇಳಿಕೆ

'₹500 ಕೋಟಿ ಕೊಟ್ಟರೆ ಸಿಎಂ ಹುದ್ದೆ': ನವಜೋತ್ ಕೌರ್ ಸಿಧು 'ಮೆಂಟಲ್ ಆಸ್ಪತ್ರೆಗೆ' ದಾಖಲಾಗಬೇಕು; ಡಿಕೆ ಶಿವಕುಮಾರ್

SCROLL FOR NEXT