ಪ್ರಧಾನಿ ಮೋದಿ, ಮೆಕ್ಸಿಕೋ ಅಧ್ಯಕ್ಷರ ಸಾಂದರ್ಭಿಕ ಚಿತ್ರ 
ವಿದೇಶ

ಅಮೆರಿಕ ಆಯ್ತು, ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕದ ಘೋಷಣೆ!

ಮಸೂದೆ ಪರವಾಗಿ 76 ಮತಗಳು ವಿರುದ್ಧವಾಗಿ 5 ಮತಗಳು ಬಿದ್ದಿದ್ದು, 35 ಮಂದಿ ಗೈರು ಹಾಜರಿಯೊಂದಿಗೆ ಸೆನೆಟ್ ಮಸೂದೆಯನ್ನು ಅಂಗೀಕರಿಸಿದೆ.

ಮೆಕ್ಸಿಕೋ: ಅಮೆರಿಕ ಆಯ್ತು, ಇದೀಗ ಮೆಕ್ಸಿಕೋ ಕೂಡಾ ಭಾರತದ ಮೇಲೆ ಶೇ. 50 ರಷ್ಟು ಸುಂಕವನ್ನು ಘೋಷಿಸಿದೆ. ಮೆಕ್ಸಿಕೋ ರಾಷ್ಟ್ರೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸುವ ಸಲುವಾಗಿ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಯ್ದ ಆಮದು ಉತ್ಪನ್ನಗಳ ಮೇಲೆ 2026 ರಿಂದ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಮೆಕ್ಸಿಕೋ ಸೆನೆಟ್‌ನಲ್ಲಿನ ವರದಿಯ ಪ್ರಕಾರ, ದೇಶದ ಸಂಸತ್ತಿನ ಮೇಲ್ಮನೆ ಬುಧವಾರ ಸಾಮಾನ್ಯ ಆಮದು ಮತ್ತು ರಫ್ತು ತೆರಿಗೆ ಕಾನೂನಿನ ವಿವಿಧ ಸುಂಕದ ವರ್ಗೀಕರಣಗಳನ್ನು ಮಾರ್ಪಡಿಸಿ ದೈನಂದಿನ ಗ್ರಾಹಕ ಸರಕುಗಳು, ಪೀಠೋಪಕರಣಗಳು, ಪಾದರಕ್ಷೆಗಳಂತಹ ಸರಕುಗಳ ಮೇಲೆ ಶೇಕಡಾ 5 ರಿಂದ 50 ರವರೆಗಿನ ಸುಂಕಗಳನ್ನು ವಿಧಿಸಿದೆ ಎಂದು ಮೆಕ್ಸಿಕೋದ ಸುದ್ದಿವಾಹಿನಿ ಎಲ್ ಯೂನಿವರ್ಸಲ್ ವರದಿ ಮಾಡಿದೆ.

ವಾಹನಗಳ ಬಿಡಿ ಭಾಗಗಳು, ಲಘು ಕಾರುಗಳು, ಬಟ್ಟೆಗಳು, ಪ್ಲಾಸ್ಟಿಕ್‌ಗಳು, ಉಕ್ಕು, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ಜವಳಿ, ಪೀಠೋಪಕರಣಗಳು, ಪಾದರಕ್ಷೆಗಳು, ಚರ್ಮದ ಸರಕುಗಳು, ಕಾಗದ ಮತ್ತು ರಟ್ಟು, ಮೋಟಾರ್‌ಸೈಕಲ್‌ಗಳು, ಅಲ್ಯೂಮಿನಿಯಂ, ಟ್ರೇಲರ್‌ಗಳು, ಗಾಜು ಮತ್ತು ಸಾಬೂನುಗಳು, ಸುಗಂಧ ದ್ರವ್ಯಗಳುಗಳ ಮೇಲೆ ಹೆಚ್ಚುವರಿ ಸುಂ ವಿಧಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಸೂದೆ ಪರವಾಗಿ 76 ಮತಗಳು ವಿರುದ್ಧವಾಗಿ 5 ಮತಗಳು ಬಿದ್ದಿದ್ದು, 35 ಮಂದಿ ಗೈರು ಹಾಜರಿಯೊಂದಿಗೆ ಸೆನೆಟ್ ಮಸೂದೆಯನ್ನು ಅಂಗೀಕರಿಸಿದೆ.1,400 ವಿವಿಧ ಉತ್ಪನ್ನಗಳ ಮೇಲಿನ ಸುಂಕಗಳೊಂದಿಗೆ ಚೀನಾ, ದಕ್ಷಿಣ ಕೊರಿಯಾ ಪ್ರಸ್ತುತ ಮೆಕ್ಸಿಕೊದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹೊಂದಿಲ್ಲ.

ಸುಂಕ ದೈನಂದಿನ ಗ್ರಾಹಕ ಸರಕುಗಳಾದ ಬಟ್ಟೆ, ಪಾದರಕ್ಷೆಗಳು, ವಸ್ತುಗಳು ಮತ್ತು ಪೀಠೋಪಕರಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು PRI ಪಕ್ಷದ ಸದಸ್ಯೆ ಕ್ರಿಸ್ಟಿನಾ ರೂಯಿಜ್, ಎಚ್ಚರಿಸಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.

ಮೆಕ್ಸಿಕೋದ ಆರ್ಥಿಕ ಸುದ್ದಿ ವಪ್ರಕಟಿಸುವ ಎಲ್ ಫೈನಾನ್ಷಿಯರ್ ಪ್ರಕಾರ, ಚೀನಾ ಮತ್ತು ಇತರ ಏಷ್ಯಾದ ದೇಶಗಳ ಮೇಲೆ ಸುಂಕಗಳನ್ನು ವಿಧಿಸಲು ಸೆನೆಟ್ ಅನುಮೋದಿಸಿದೆ ಎಂದು ಹೇಳಿದೆ. ಮೆಕ್ಸಿಕೋ ಸರ್ಕಾರವು ದೇಶದ ಉದ್ಯಮಕ್ಕೆ ಹೆಚ್ಚಿನ ರಕ್ಷಣೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ ಎಂದು Mexiconewsdaily.com ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತ ಮೇಲೆ ಶೇ.50 ಸುಂಕ ರದ್ದು ಮಾಡಿ, ಇದರಿಂದ ನಮ್ಮ ದೇಶಕ್ಕೇ ನಷ್ಟ': Donald Trump ಗೆ ಸೆನೆಟ್ ಸದಸ್ಯರ ಬೇಡಿಕೆ, ನಿರ್ಣಯ ಮಂಡನೆ

ಕಾಂಗ್ರೆಸ್‌ ಪ್ರತಿಭಟನೆಗೆ ಹೊಸ ಅಸ್ತ್ರ: ಆಳಂದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ CID ಚಾರ್ಜ್ ಶೀಟ್ ಸಲ್ಲಿಕೆ

MUDA Scam: ಮಾಜಿ ಆಯುಕ್ತರಿಂದ ಸಂಬಂಧಿಕರ ಮೂಲಕ ನಗದು ಲಂಚ ಪಡೆದು ನಿವೇಶನ ಹಂಚಿಕೆ!

ಒಂದು ತಿಂಗಳೊಳಗೆ ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ: ಶಿವರಾಜ್ ತಂಗಡಗಿ

ಬೆಂಗಳೂರು: ಕೃಷ್ಣರಾವ್ ಪಾರ್ಕ್ ನಲ್ಲಿ ಉದ್ಯಮಿ ಮೇಲೆ ಗುಂಡು ಹಾರಿಸಿ ಆರೋಪಿ ಪರಾರಿ

SCROLL FOR NEXT