Kerala: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಅಂಬಲಪುಳದಲ್ಲಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲಿರುವ CPM ನ ಮಾಜಿ ನಾಯಕ ಜಿ. ಸುಧಾಕರನ್ ಅವರಿಗೆ ಯುಡಿಎಫ್ ಬೆಂಬಲ ನೀಡಲು ನಿರ್ಧರಿಸಿದ ನಂತರ ಕಾಂಗ್ರೆಸ್ ತೊರೆದಿದ್ದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂಜೆ ಜಾಬ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
MJ Job (right) with BJP state president Rajeev Chandrasekar
ರಾಜೀವ್ ಚಂದ್ರಶೇಖರ್ ಜೊತೆಗೆ ಎಂಜಿ ಜಾಬ್
Updated on

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ.

ಅಂಬಲಪುಳದಲ್ಲಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲಿರುವ CPM ನ ಮಾಜಿ ನಾಯಕ ಜಿ. ಸುಧಾಕರನ್ ಅವರಿಗೆ ಯುಡಿಎಫ್ ಬೆಂಬಲ ನೀಡಲು ನಿರ್ಧರಿಸಿದ ನಂತರ ಕಾಂಗ್ರೆಸ್ ತೊರೆದಿದ್ದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂಜೆ ಜಾಬ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಮಂಗಳವಾರ ಇಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಸಮ್ಮುಖದಲ್ಲಿ ಜಾಬ್ ಮತ್ತು ಇತರ ಕೆಲವು ನಾಯಕರು ಬಿಜೆಪಿಗೆ ಸೇರ್ಪಡೆಯಾದರು.

ಜಾಬ್ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ, ವಿಶೇಷವಾಗಿ ಅಲಪ್ಪುಳದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಸ್ ಒಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

MJ Job (right) with BJP state president Rajeev Chandrasekar
ಕೇರಳ ಚುನಾವಣೆ: ಕಮ್ಯುನಿಸ್ಟ್‌ ಮುಕ್ತ ಭಾರತಕ್ಕೆ ಕಾಂಗ್ರೆಸ್ ಪಣ; ಮೈತ್ರಿ ವಿರುದ್ಧವೇ ತೊಡೆ ತಟ್ಟಿದ LDF (ನೇರ ನೋಟ)

ಜಾಬ್ ಹೊರತುಪಡಿಸಿ, ಪಾಲಕ್ಕಾಡ್‌ನ ಮಾಜಿ ಕಾಂಗ್ರೆಸ್ ಡಿಸಿಸಿ ಉಪಾಧ್ಯಕ್ಷ ಪ್ರಾಣೇಶ್ ರಾಜೇಂದ್ರನ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. ಚೆನ್ನಿತ್ತಲ ಗ್ರಾಮ ಪಂಚಾಯತ್‌ನ ಮಾಜಿ ಯುಡಿಎಫ್ ಅಭ್ಯರ್ಥಿ ಆಥಿರಾ ಅನಿಲ್‌ಕುಮಾರ್ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಅವರ ಪತಿ ವಿನೇಶ್ ಕುರುಪ್ ಕೂಡ ಕೇಸರಿ ಪಡೆಗೆ ಸೇರಿದರು.

ಇಂದು ಬಿಜೆಪಿ ಸೇರಿದವರಲ್ಲಿ ಎನ್‌ಸಿಪಿಯ ಮಾಜಿ ಕಾರ್ಯದರ್ಶಿ ಮತ್ತು ಕೇರಳ ರಾಜ್ಯ ಹಿಂದುಳಿದ ಸಮುದಾಯಗಳ ಕಲ್ಯಾಣ ನಿಗಮದ ಮಾಜಿ ನಿರ್ದೇಶಕ ಜಯಕುಮಾರ್ ಸೇರಿದ್ದಾರೆ. ಸೋಮವಾರ, ಕೆಪಿಸಿಸಿ ಪದಾಧಿಕಾರಿಗಳು ಮತ್ತು ಸಿಪಿಎಂ, ಎನ್‌ಸಿಪಿ ಮತ್ತು ಎಎಪಿಯ ಮಾಜಿ ನಾಯಕರು ಸೇರಿದಂತೆ 40 'ಪ್ರಮುಖ' ಜನರು ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com