ಜಾನ್ ಸೀನ 
ಕ್ರೀಡೆ

BIG SHOCK... ಸೋಲಿನೊಂದಿಗೆ WWEಗೆ ಜಾನ್ ಸೀನಾ good bye..!

ಕೊನೆಯ ಮ್ಯಾಚ್ ನಲ್ಲಿ ಜಾನ್ ಸೀನಾ 'U can't See Me' ಮೊಮೆಂಟ್ ಮೂಲಕ ಪ್ರೇಕ್ಷಕರ ಮನ ಗೆದ್ದರು. ಆದರೆ. ಎದುರಾಳಿ ಗುಂಟರ್ ಅವರು ಜಾನ್ ಸೀನಾ ಅವರನ್ನು ಕುತ್ತಿಗೆಯ ಭಾಗದಲ್ಲಿ ಲಾಕ್ ಮಾಡಿ ಸೀನ ಅವರನ್ನು ಸೋಲು ಒಪ್ಪಿಕೊಳ್ಳುವಂತೆ ಮಾಡಿದರು.

ಕಳೆದ ಎರಡು ದಶಕಗಳಿಂದ ಅದೆಷ್ಟೋ ರೆಸ್ಲಿಂಗ್‌ ಪ್ರೇಮಿಗಳನ್ನು ರಂಜಿಸಿದ್ದ ಡಬ್ಲ್ಯೂಡಬ್ಲ್ಯೂಇ ಸೂಪರ್‌ ಸ್ಟಾರ್‌ ಜಾನ್‌ ಸೀನಾ ಅವರು ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ಭಾನುವಾರ (ಡಿ.14) ರಂದು ಅವರು ಸ್ಯಾಟರ್ ಡೇ ನೈಟ್ ಮೇನ್ ಇವೆಂಟ್ ನಲ್ಲಿ ಆಸ್ಟ್ರೀಯಾದ ಕುಸ್ತಿಪಟು ಗುಂಟರ್ (Gunther) ವಿರುದ್ಧದ ಪಂದ್ಯವು ಜಾನ್‌ ಸೀನಾ ಅವರ ಅಂತಿಮ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಜಾನ್ ಸೀನಾ ಅವರು ಸೋಲು ಕಂಡಿದ್ದು, ಸೋಲುನೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ಅಂತ್ಯ ಹೇಳಿದರು.

ಪಂದ್ಯ ವೀಕ್ಷಣೆಗೆ ಸುಮಾರು ಇಪ್ಪತ್ತು ಸಾವಿರ ಅಭಿಮಾನಿಗಳು ಜಾನ್ ಸೀನಾ ಅವರ ಕೊನೆಯ ಮ್ಯಾಚ್ ನೋಡಲು ನೆರೆದಿದ್ದರು.

ಕೊನೆಯ ಮ್ಯಾಚ್ ನಲ್ಲಿ ಜಾನ್ ಸೀನ್ 'U can't See Me' ಮೊಮೆಂಟ್ ಮೂಲಕ ಪ್ರೇಕ್ಷಕರ ಮನ ಗೆದ್ದರು. ಆದರೆ. ಎದುರಾಳಿ ಗುಂಟರ್ ಅವರು ಜಾನ್ ಸೀನಾ ಅವರನ್ನು ಕುತ್ತಿಗೆಯ ಭಾಗದಲ್ಲಿ ಲಾಕ್ ಮಾಡಿ ಸೀನ ಅವರನ್ನು ಸೋಲು ಒಪ್ಪಿಕೊಳ್ಳುವಂತೆ ಮಾಡಿದರು. ತಮ್ಮ 23 ವರ್ಷ ರೆಸ್ಲಿಂಗ್ ಕೆರಿಯರ್ ನಲ್ಲೇ ಜಾನ್ ಸೀನಾ ತಾನೇ ಸೋಲು ಒಪ್ಪಿಕೊಂಡಿದ್ದು ಇದೇ ಮೊದಲ ಬಾರಿಗೆ. ಜಾನ್ ಸೀನಾ ಟ್ಯಾಪ್‌ ಮೂಲಕ ಸೋತಿದ್ದು ನೋಡಿ ಅಭಿಮಾನಿಗಳು ಶಾಕ್ ಆದರು.

ಪಂದ್ಯದ ವೇಳೆ ಡಬ್ಲ್ಯೂಡಬ್ಲ್ಯೂಇ ಹಾಲ್ ಆಫ್ ಫೇಮರ್‌ಗಳಾದ ಮಿಚೆಲ್ ಮೆಕೂಲ್ ಮತ್ತು ಟ್ರಿಶ್ ಸ್ಟ್ರಾಟಸ್ ಜೊತೆಗೆ, ಸೀನಾ ಅವರ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳಾದ ಕರ್ಟ್ ಆಂಗಲ್, ಮಾರ್ಕ್ ಹೆನ್ರಿ ಮತ್ತು ರಾಬ್ ವ್ಯಾನ್ ಡ್ಯಾಮ್ ರಿಂಗ್‌ಸೈಡ್‌ನಲ್ಲಿ ಹಾಜರಿದ್ದರು.

ಡಬ್ಲ್ಯೂಡಬ್ಲ್ಯೂಇ ನ ಇತರ ದಿಗ್ಗಜರಾದ ದಿ ರಾಕ್, ಕೇನ್ ಮತ್ತು ಇತರರು ಸೀನಾ ಅವರ ಅಂತಿಮ ಪಂದ್ಯಕ್ಕೂ ಮುಂಚಿತವಾಗಿ ಅವರಿಗೆ ಶುಭ ಹಾರೈಸಿದರು.

ಡಬ್ಲ್ಯೂಡಬ್ಲ್ಯೂಇ ಕಾರ್ಯಕ್ರಮದ ಉದ್ದಕ್ಕೂ ಸೀನಾ ಅವರ ಸಾಧನೆಗಳನ್ನು ಎತ್ತಿ ತೋರಿಸುವ ಹಲವಾರು ವೀಡಿಯೊ ಪ್ಯಾಕೇಜ್‌ಗಳನ್ನು ಪ್ರದರ್ಶಿಸಲಾಯಿತು.

2001ರಲ್ಲಿ ಕುಸ್ತಿ ಪ್ರವೇಶಿಸಿದ ಜಾನ್ ಸೆನಾ 17 ಬಾರಿ WWE ಚಾಂಪಿಯನ್ ಆಗಿ ಪ್ರಶಸ್ತಿ ಗೆದ್ದಿದ್ದಾರೆ. ಕುಸ್ತಿ ಮತ್ತು ನಟನೆಯ ಹೊರತಾಗಿ, ಜಾನ್ ಸೀನಾ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೀನಾ ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಮನೂರು ಶಿವಶಂಕರಪ್ಪ ವಿಧಿವಶ: ಸಿಎಂ ಸೇರಿ ಗಣ್ಯರ ಸಂತಾಪ; ಡಿಸೆಂಬರ್ 15ರಂದು ಶಾಲಾ-ಕಾಲೇಜುಗಳಿಗೆ ರಜೆ!

3rd T20: ಭಾರತಕ್ಕೆ 7 ವಿಕೆಟ್‌ಗಳ ಅಮೋಘ ಜಯ; ದಕ್ಷಿಣ ಆಫ್ರಿಕಾ ವಿರುದ್ಧ 2-1 ಮುನ್ನಡೆ!

Hardik Pandya ಐತಿಹಾಸಿಕ ದಾಖಲೆ: T20 ಕ್ರಿಕೆಟ್‌ನಲ್ಲಿ 1000 ರನ್, 100 ವಿಕೆಟ್‌ ಪಡೆದ ಭಾರತದ ಮೊದಲ ವೇಗಿ!

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ

ಶಿವಾಜಿಯನ್ನು ಮುಸ್ಲಿಂ ವಿರೋಧಿ ಅನ್ನಬಾರದು: ಸಚಿವ ಸಂತೋಷ್​​ ಲಾಡ್; ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು- ಯತ್ನಾಳ್

SCROLL FOR NEXT