ಬ್ಯಾಗ್ ನೊಂದಿಗೆ ಮಹಿಳೆ 
ವಿದೇಶ

ದುಬೈ ಎಷ್ಟು ಸುರಕ್ಷಿತ? 'ಲಕ್ಸುರಿ ಬ್ಯಾಗ್' ಇಟ್ಟು ಮಹಿಳೆ ಪರಿಶೀಲನೆ, Video ವೈರಲ್! ಭಾರತದಲ್ಲಿ ಇಂತಹದ್ದೆಲ್ಲಾ ಮಾಡಬೇಡಿ ಎಂದ ನೆಟ್ಟಿಗರು!

100,000 AED (United Arab Emirates Dirham) ನಷ್ಟು ಹಣವನ್ನು ಬ್ಯಾಗ್ ನಲ್ಲಿ ಇಟ್ಟಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮಹಿಳೆ ಮಾಡಿರುವ ಈ ವಿಡಿಯೋ ದುಬೈನಲ್ಲಿನ ಸುರಕ್ಷತೆ ಕುರಿತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ದುಬೈ: ಮಹಿಳೆಯೊಬ್ಬರು ಇತ್ತೀಚೆಗೆ ದುಬೈನಲ್ಲಿ ತನ್ನ ಸುಮಾರು 27, 220 ಡಾಲರ್ ಮೊತ್ತದ ಐಷಾರಾಮಿ ಹರ್ಮ್ಸ್ ಬಿರ್ಕಿನ್ ಬ್ಯಾಗ್ ನ್ನು ಯಾರೂ ಇಲ್ಲದ ಸಾರ್ವಜನಿಕ ಸ್ಥಳವೊಂದರಲ್ಲಿ ಇಡುವ ಮೂಲಕ ನಗರ ಎಷ್ಟು ಸುರಕ್ಷಿತ ಎಂಬುದನ್ನು ಪರಿಶೀಲಿಸಿದ್ದಾರೆ. ಅಲಿಶಾ ಹಮಿರಾನಿ ಎಂಬ ಮಹಿಳೆ ಇನ್ಸಾಟಾಗ್ರಾಮ್ ನಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ.

ಆಕೆ ಬುರ್ ದುಬೈಗೆ ಹೋಗಲು ಅಬ್ರಾ ರೈಡ್ (ದೋಣಿಯಲ್ಲಿ ತೆರಳಲು) ಗೋಲ್ಡ್ ಸೌಕ್ ಪ್ರದೇಶದಲ್ಲಿ ಬ್ಯಾಗನ್ನು ಬಿಟ್ಟು ಹೋಗುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಆಕೆ ವಾಪಸ್ ಬಂದಾಗ ಯಾರೂ ಕೂಡಾ ಅವರ ಬ್ಯಾಗ್ ನ್ನು ಮುಟ್ಟಿರುವುದಿಲ್ಲ. ಇದನ್ನು ಕಂಡು ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ.

100,000 AED (United Arab Emirates Dirham) ನಷ್ಟು ಹಣವನ್ನು ಬ್ಯಾಗ್ ನಲ್ಲಿ ಇಟ್ಟಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮಹಿಳೆ ಮಾಡಿರುವ ಈ ವಿಡಿಯೋ ದುಬೈನಲ್ಲಿನ ಸುರಕ್ಷತೆ ಕುರಿತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ದೋಣಿಯಲ್ಲಿ ಕುಳಿತು ಕೊನೆಯ ಬಾರಿ ಇದನ್ನು ನಾನು ಮಾಡಿದ್ದೇನೆ. ನನ್ನ ಕ್ರಿಶ್ಚಿಯನ್ ಡಿಯರ್ ಬ್ಯಾಗ್ ಅನ್ನು ಬಿಟ್ಟಿದ್ದೇನೆ. ಅದನ್ನು ನನ್ನ ಪತಿ ಗಿಫ್ಟ್ ಆಗಿ ನೀಡಲು ಒಂದು ವರ್ಷ ಕಾಯಿಸಿದ್ದರು ಎಂದು ಹೇಳುವ ಮಹಿಳೆ, ಈಗ ನಾವು ಬಿರ್ ದುಬೈ ಮೆರೈನ್ ಟ್ರಾನ್ಸ್‌ಪೋರ್ಟ್ ಸ್ಟೇಷನ್‌ನಲ್ಲಿದ್ದೇನೆ. ವಾಪಸ್ ಬಂದಾಗ ಗೋಲ್ಡ್ ಸೌಕ್‌ನಲ್ಲಿ ಇಟ್ಟಿದ್ದ ಬ್ಯಾಗ್ ಇಲ್ಲಿಯೇ ಇದೆ. "ನನ್ನ ಪತಿ ಈ ವೀಡಿಯೊವನ್ನು ವೀಕ್ಷಿಸುತ್ತಿದ್ದರೆ, ದಯವಿಟ್ಟು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬುದನ್ನು ನೆನಪಿಡಿ ಎಂದು ಅವರು ಬರೆದುಕೊಂಡಿದ್ದಾರೆ.

ಹಮಿರಾನಿ ಅವರ ಪರಿಶೀಲನೆ ವಿಡಿಯೋ ದುಬೈ ಎಷ್ಟೊಂದು ಸುರಕ್ಷಿತ ನಗರ ಎಂಬುದನ್ನು ತೋರಿಸುತ್ತದೆ. ಈ ವೀಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ನಗರದ ಸುರಕ್ಷತೆಯ ಬಗ್ಗೆ ಕೊಂಡಾಡಿದ್ದಾರೆ. ಇಂತಹದೆಲ್ಲಾ ದುಬೈನಲ್ಲಿ ಮಾತ್ರ ನೋಡಬಹುದು. ಭಾರತದಲ್ಲಿ ಪ್ರಯತ್ನಿಸಬೇಡಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ಹಲವು ವಾಹನಗಳಿಗೆ ಬೆಂಕಿ: ನಾಲ್ವರು ಸಾವು, 25 ಮಂದಿ ಗಾಯ-Video

ಜಮ್ಮು-ಕಾಶ್ಮೀರದ ಉಧಂಪುರ್ ನಲ್ಲಿ ಎನ್ ಕೌಂಟರ್: ಪೊಲೀಸ್ ಹುತಾತ್ಮ

ಧನುರ್ಮಾಸ ಆರಂಭ: ಶೂನ್ಯ ಮಾಸದ ಪೂಜಾಫಲವೇನು: ಹುಗ್ಗಿ ಸೇವೆ ಮಾಡುವುದೇಕೆ? ಲಕ್ಷ್ಮಿ ನಾರಾಯಣರ ಅನುಗ್ರಹ ಪಡೆಯುವುದು ಹೇಗೆ?

ಕಳೆದ ಎರಡೂವರೆ ವರ್ಷಗಳಲ್ಲಿ 2,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ, ದೇಶದಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ: ಸಚಿವ ಚಲುವರಾಯಸ್ವಾಮಿ

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 5ನೇ ತರಗತಿವರೆಗಿನ ವಿದ್ಯಾರ್ಥಿಗಳ ದೈಹಿಕ ತರಗತಿಗಳಿಗೆ ಬ್ರೇಕ್!

SCROLL FOR NEXT