ಜೆಫ್ರಿ ಎಪ್ಸ್ಟೀನ್ ಜೊತೆಗಿರುವ ಡೊನಾಲ್ಡ್ ಟ್ರಂಪ್. 
ವಿದೇಶ

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!

ಈ ದಾಖಲೆಗಳನ್ನೇಕೆ ತೆಗೆದುಹಾಕಲಾಗಿದೆ ಅಥವಾ ಇದು ಉದ್ದೇಶಪೂರ್ವಕ ಕ್ರಮವೇ ಎಂಬುದರ ಕುರಿತು ನ್ಯಾಯ ಇಲಾಖೆ ಯಾವುದೇ ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ.

ನ್ಯೂಯಾರ್ಕ್: ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಶುಕ್ರವಾರ ಲಭ್ಯವಿದ್ದ ಈ ದಾಖಲೆಗಳು ಶನಿವಾರದ ವೇಳೆಗೆ ವೆಬ್‌ಪುಟದಿಂದ ಕಣ್ಮರೆಯಾಗಿದ್ದು, ಇದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನಾಪತ್ತೆಯಾಗಿರುವ ದಾಖಲೆಗಳಲ್ಲಿದ್ದ ಫೋಟೋದಲ್ಲಿ ಡೊನಾಲ್ಡ್ ಟ್ರಂಪ್, ಜೆಫ್ರಿ ಎಪ್ಸ್ಟೀನ್, ಮೆಲಾನಿಯಾ ಟ್ರಂಪ್ ಹಾಗೂ ಎಪ್ಸ್ಟೀನ್‌ನ ದೀರ್ಘಕಾಲದ ಸಹಚರಿ ಘಿಸ್ಲೇನ್ ಮ್ಯಾಕ್ಸ್‌ವೆಲ್ ಜೊತೆಗಿರುವುದು ಕಂಡುಬಂದಿತ್ತು.

ಈ ದಾಖಲೆಗಳನ್ನೇಕೆ ತೆಗೆದುಹಾಕಲಾಗಿದೆ ಅಥವಾ ಇದು ಉದ್ದೇಶಪೂರ್ವಕ ಕ್ರಮವೇ ಎಂಬುದರ ಕುರಿತು ನ್ಯಾಯ ಇಲಾಖೆ ಯಾವುದೇ ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ, ನ್ಯಾಯ ಇಲಾಖೆಯ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನ್ಯಾಯ ಇಲಾಖೆ ವೆಬ್‌ಪುಟದಿಂದ ದಾಖಲೆಗಳು ನಾಪತ್ತೆಯಾಗಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಹಾಗೂ ಅನುಮಾನಗಳು ಮೂಡಲು ಎಡೆ ಮಾಡಿಕೊಟ್ಟಿದೆ.

ಅಮೆರಿಕದ ಮೇಲ್ವಿಚಾರಣಾ ಸಮಿತಿಯ ಡೆಮಾಕ್ರ್ಯಾಟ್ ಸದಸ್ಯರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿ, ಟ್ರಂಪ್ ಫೋಟೋ ಇರುವ ದಾಖಲೆ ನಾಪತ್ತೆಯಾದ ವಿಚಾರವನ್ನು ಉಲ್ಲೇಖಿಸಿ, “ಇನ್ನೇನು ಮುಚ್ಚಿಡಲಾಗುತ್ತಿದೆ? ಅಮೆರಿಕದ ಜನತೆಗೆ ಪಾರದರ್ಶಕತೆ ಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಬಹಿರಂಗಗೊಂಡ ‘ಎಪ್‌ಸ್ಟೀನ್ ಫೈಲ್ಸ್’ ಜಗತ್ತಿನ ರಾಜಕೀಯ, ವ್ಯಾಪಾರ ಮತ್ತು ಗೂಢಾಚಾರ ಜಾಲಗಳ ಮೇಲೆ ಭಾರೀ ಅನುಮಾನಗಳನ್ನು ಹುಟ್ಟುಹಾಕಿದೆ.

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಕೋಟ್ಯಧಿಪತಿ ಮತ್ತು ಲೈಂಗಿಕ ಅಪರಾಧಿಯ ಸುತ್ತ ಹೆಣೆದುಕೊಂಡಿರುವ ‘Epstein files’ ಇತ್ತೀಚೆಗೆ ಜಗತ್ತಿನಾದ್ಯಂತ ಭಾರೀ ಸಂಚಲನ ಮೂಡಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಬಹಿರಂಗಗೊಂಡಿರುವ ಈ ಸಾವಿರಾರು ಪುಟಗಳ ದಾಖಲೆಗಳು ಕೇವಲ ಲೈಂಗಿಕ ಹಗರಣವನ್ನಷ್ಟೇ ಅಲ್ಲ, ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಕರಾಳ ಮುಖವನ್ನೂ ಅನಾವರಣಗೊಳಿಸಿವೆ.

ಎಪ್‌ಸ್ಟೀನ್ ಮತ್ತು ಆತನ ಗೆಳತಿ ಗಿಸ್ಲೇನ್ ಮ್ಯಾಕ್ಸ್‌ವೆಲ್ ನಡೆಸುತ್ತಿದ್ದ ‘ಸೆಕ್ಸ್ ಟ್ರಾಫಿಕಿಂಗ್’ ಜಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಿಂದ ಹಿಡಿದು ಬ್ರಿಟನ್ ರಾಜಮನೆತನದವರೆಗಿನ ನಂಟು ಇತ್ತೆಂಬುದು ಈ ದಾಖಲೆಗಳಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ, ಈ ಕಡತಗಳು ಕೇವಲ ಪಟ್ಟಿಯಲ್ಲ, ಬದಲಾಗಿ 2015ರ ಮಾನನಷ್ಟ ಮೊಕದ್ದಮೆಯೊಂದರ ವಿಚಾರಣೆಯ ಭಾಗವಾಗಿ ಸಂಗ್ರಹಿಸಲಾದ ಸಾಕ್ಷ್ಯಗಳಾಗಿವೆ ಎನ್ನಲಾಗಿದೆ.

ಈ ಕಡತಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಬಿಲ್ ಕ್ಲಿಂಟನ್ ಅವರ ಹೆಸರುಗಳು ಪ್ರಸ್ತಾಪವಾಗಿದೆ. ಆದರೆ, ಟ್ರಂಪ್ ಅವರ ಹೆಸರು ದಾಖಲೆಗಳಲ್ಲಿದ್ದರೂ, ಎಪ್‌ಸ್ಟೀನ್ ದ್ವೀಪದಲ್ಲಿ ಅವರು ಅಕ್ರಮ ಎಸಗಿದ್ದಾರೆ ಅಥವಾ ಅಪ್ರಾಪ್ತರೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಯಾವುದೇ ನೇರ ಸಾಕ್ಷ್ಯ ಅಥವಾ ಸಂತ್ರಸ್ತೆಯರ ಹೇಳಿಕೆ ಈ ದಾಖಲೆಗಳಲ್ಲಿಲ್ಲ.

ಟ್ರಂಪ್ ಅವರು ಎಪ್‌ಸ್ಟೀನ್ ಅವರ ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ. ಇನ್ನು ಬಿಲ್ ಕ್ಲಿಂಟನ್ ಅವರು ಎಪ್‌ಸ್ಟೀನ್ ಜೊತೆ ಆಪ್ತವಾಗಿದ್ದರು ಮತ್ತು ವಿಮಾನ ಪ್ರಯಾಣ ಮಾಡಿದ್ದರು ಎಂಬುದು ದೃಢಪಟ್ಟಿದ್ದರೂ, ಅವರ ಮೇಲೂ ನೇರವಾದ ಲೈಂಗಿಕ ಆರೋಪಗಳು ಈ ನಿರ್ದಿಷ್ಟ ಕಡತಗಳಲ್ಲಿ ಸಾಬೀತಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಳಿಗಾಲದ ಅಧಿವೇಶನ ಮುಕ್ತಾಯ: 2026-27ನೇ ಸಾಲಿನ ರಾಜ್ಯ ಬಜೆಟ್'ಗೆ ಸಿದ್ದರಾಮಯ್ಯ ಸಿದ್ಧತೆ: ಈ ಬಾರಿ ಬಜೆಟ್ ಗಾತ್ರ, ಸಾಲ ಪ್ರಮಾಣ ಹೆಚ್ಚಳ ಸಾಧ್ಯತೆ..!

ಸಿದ್ದು ಅತ್ಯಾಪ್ತ ರಾಜಣ್ಣ ಭೇಟಿಯಾದ ಡಿಕೆ ಶಿವಕುಮಾರ್, ಏನಿದರ ಗುಟ್ಟು?

ಸಿಎಂ ಪಟ್ಟಕ್ಕೆ ಪರಮೇಶ್ವರ್ ಹೆಸರು?: ಹೊಸ ದಾಳ ಉರುಳಿಸಲು ಸಿದ್ದು ಬಣ ಸಜ್ಜು..!

ರಾಜ್ಯದಲ್ಲಿ ಚಳಿಯೋ ಚಳಿ; ಉತ್ತರ ಒಳನಾಡಿನ ಜಿಲ್ಲೆಗಳಿಗೆ 'Orange' ಅಲರ್ಟ್‌ ಘೋಷಣೆ

'ಅದೃಷ್ಟ ಹುಡುಕಿಕೊಂಡು ಬಂದಾಗ ಯಾವ ನಂಬರ್ ಬೇಕಾಗಿಲ್ಲ: ಹೈಕಮಾಂಡ್ ಗೆ ಶಾಸಕ HC ಬಾಲಕೃಷ್ಣ ವಾರ್ನಿಂಗ್?

SCROLL FOR NEXT