ಜಸ್ಟಿನ್ ಬೀಬರ್-ಹೈಲಿ ರೋಡ್ ಬೀಬರ್ online desk
ವಿದೇಶ

Pop Singer Justin Bieber ದಾಂಪತ್ಯದಲ್ಲಿ ಬಿರುಕು; 300 ಮಿಲಿಯನ್ ಡಾಲರ್ ಜೀವನಾಂಶ; ವಿಚ್ಛೇದನ ನೀಡಲು ಪತ್ನಿಗೆ ಸ್ನೇಹಿತರಿಂದ ಒತ್ತಡ?

ಹೈಲಿಯ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಕೆಯ ಸ್ನೇಹಿತರು 30 ವರ್ಷದ ಗಾಯಕನನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ.

ನವದೆಹಲಿ: ಪಾಪ್ ಸೂಪರ್‌ಸ್ಟಾರ್ ಜಸ್ಟಿನ್ ಬೀಬರ್ (Justin Bieber ) ಮತ್ತು ಅವರ ಪತ್ನಿ ಹೈಲಿ ರೋಡ್ ಬೀಬರ್ ಅವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹಬ್ಬಿವೆ.

6 ವರ್ಷಗಳ ದಾಂಪತ್ಯದ ನಂತರ ಜಸ್ಟಿನ್ ಬೀಬರ್ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು $300 ಮಿಲಿಯನ್ ಜೀವನಾಂಶ ನೀಡುವ ಸಾಧ್ಯತೆ ಇದೆ ಎಂದು ವದಂತಿಗಳಿವೆ. ಜಸ್ಟಿನ್ ಬೀಬರ್ ಅವರ "ಸ್ವೀಕಾರಾರ್ಹವಲ್ಲದ ನಡವಳಿಕೆ"ಯಿಂದಾಗಿ ಬೀಬರ್ ಅವರನ್ನು ಬಿಡುವಂತೆ ಹೈಲಿ ಸ್ನೇಹಿತರಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ದಂಪತಿಗೆ ಹತ್ತಿರವಿರುವ ಮೂಲವೊಂದು ದಿ ಯುಎಸ್ ಸನ್‌ಗೆ ಮಾಹಿತಿ ನೀಡಿ, ಹೇಲಿ ಬಹುತೇಕ ಮೊದಲಿನಿಂದಲೂ ಸಮಸ್ಯಾತ್ಮಕ ದಾಂಪತ್ಯದಲ್ಲಿದ್ದಾರೆ."ಹೈಲಿ ಮದುವೆಯ ಆರಂಭದಿಂದಲೂ ಜಸ್ಟಿನ್ ಜೊತೆ ಹೋರಾಡುತ್ತಿದ್ದಾಳೆ" ಎಂದು ಉಲ್ಲೇಖಿಸಿದ್ದಾರೆ. "ಆಕೆ ಅವನನ್ನು ಹುಚ್ಚನಂತೆ ಪ್ರೀತಿಸುತ್ತಾಳೆ, ಆದರೆ ಆತ ಹಾಗೆ ಇಲ್ಲ" ಎಂದು ತಿಳಿಸಿವೆ.

ಹೈಲಿಯ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಕೆಯ ಸ್ನೇಹಿತರು 30 ವರ್ಷದ ಗಾಯಕನನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ.

ಜಸ್ಟಿನ್ ಬೀಬರ್ ಮತ್ತು ಹೈಲಿ ರೋಡ್ ಬೀಬರ್ ಕೆಲವು ವರ್ಷಗಳ ಡೇಟಿಂಗ್ ನಂತರ 2015 ರಲ್ಲಿ ವಿವಾಹವಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಮಾದಕ ದ್ರವ್ಯ ಸೇವನೆಯಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿದ ನಂತರ ಹೈಲಿ ಜಸ್ಟಿನ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಈ ದಂಪತಿಗೆ ಕಳೆದ ವರ್ಷ ಮಗು ಹುಟ್ಟಿದ್ದು, ಜ್ಯಾಕ್ ಬ್ಲೂಸ್ ಬೀಬರ್ ಎಂದು ನಾಮಕರಣ ಮಾಡಿದ್ದಾರೆ.

ಜಸ್ಟಿನ್ ಮತ್ತು ಹೈಲಿಯ ದಾಂಪತ್ಯದಲ್ಲಿನ ಉದ್ವಿಗ್ನತೆಯ ಬಗ್ಗೆ ಚರ್ಚಿಸುತ್ತಾ, "ಜಸ್ಟಿನ್ ಭರವಸೆ ನೀಡಿದ ನಂತರ ಹೈಲಿ 2015 ರಲ್ಲಿ ಅವರೊಂದಿಗೆ ಇರಲು ಒಪ್ಪಿಕೊಂಡರು. ಅವರು ಈಗ ಅವನು ಮಾದಕ ವ್ಯಸನದ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಅದು ಹೈಲಿ ಆತಂಕಕ್ಕೆ ಕಾರಣವಾಗಿದ್ದು, ತನ್ನ ಜೀವನ ಹಾಳಾಗಬಹುದು ಎಂದು ಆಕೆ ಭಯಪಡುತ್ತಾಳೆ" ಎಂದು ನ್ಯಾಷನಲ್ ಎನ್ಕ್ವೈರರ್ ವರದಿ ಮಾಡಿದೆ.

ವರದಿಗಳ ಪ್ರಕಾರ, ಹೈಲಿ ತನ್ನ ಮಗುವಿನ ಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಮತ್ತು ಮಗುವಿನ ಭವಿಷ್ಯದ ದೃಷ್ಟಿಯಿಂದ ಆಕೆ ವಿಚ್ಛೇದನದ ಬಗ್ಗೆ ಯೋಚಿಸುತ್ತಿದ್ದಾರೆ. ತನ್ನ ಮಗನನ್ನು ನಕಾರಾತ್ಮಕತೆಯಿಂದ ದೂರವಿಡಲು ಆಕೆ ಬಯಸುತ್ತಿದ್ದಾರೆ ಎಂದು ದಂಪತಿಗಳಿಗೆ ಹತ್ತಿರವಿರುವ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT