ಅಮೆರಿಕದ ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದ ಜನಸಂದಣಿಯ ಮೇಲೆ ಟ್ರಕ್ ನುಗ್ಗಿದ್ದು ಕನಿಷ್ಠ 10 ಮಂದಿಯನ್ನು ಕೊಲ್ಲಲಾಗಿದ್ದು ಟ್ರಕ್ ಅನ್ನು ಸ್ಫೋಟಿಸುವ ಮೂಲಕ ಹತ್ಯಾಕಾಂಡ ನಡೆಸುವ ಸಂಚು ನಡೆದಿತ್ತಾ ಎಂಬ ಅನುಮಾನಗಳು ಮೂಡಿಸಿದೆ. ಹೌದು ಇದಕ್ಕೆ ಪುಷ್ಠಿಕೊಂಡುವಂತ ಮಾಹಿತಿಯನ್ನು FBI ಹೇಳಿದೆ.
ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡು ಸಂಭ್ರಮಿಸುತ್ತಿದ್ದವರ ಮೇಲೆ ಶಂಕಿತ ಚಾಲಕನು ಉದ್ದೇಶಪೂರ್ವಕವಾಗಿ ಟ್ರಕ್ ಹತ್ತಿಸಿದ್ದನು. ಈ ಅಪಘಾತದಲ್ಲಿ 10 ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ರೆಂಚ್ ಕ್ವಾರ್ಟರ್‌ನ ಹೃದಯಭಾಗದಲ್ಲಿರುವ ಬೌರ್ಬನ್ ಸ್ಟ್ರೀಟ್ ಮತ್ತು ಐಬರ್‌ವಿಲ್ಲೆ ಸ್ಟ್ರೀಟ್‌ನ ಛೇದಕದಲ್ಲಿ ಇಂದು ಮುಂಜಾನೆ 3:15ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತ ನಡೆಸಿದ್ದ ಟ್ರಕ್ ಚಾಲಕ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದನು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಚಾಲಕನನ್ನು ಹತ್ಯೆ ಮಾಡಿತ್ತು.
ಇದೊಂದು ಭಯೋತ್ಪಾದಕ ಕೃತ್ಯವೇ ಎಂಬುದನ್ನು ಪತ್ತೆ ಮಾಡಲು ಎಫ್ಬಿಐ ಅಖಾಡಕ್ಕೆ ಇಳಿದಿದೆ. ಮೊದಲ ಮಾಹಿತಿ ಪ್ರಕಾರ, ಘಟನಾ ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಟ್ರಕ್ ಅನ್ನು ಸ್ಫೋಟಿಸುವ ಮೂಲಕ ಹತ್ಯಾಕಾಂಡ ಸೃಷ್ಟಿಸುವ ಕುರಿತು ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ.
ನ್ಯೂ ಓರ್ಲಿಯನ್ಸ್ ಪೊಲೀಸ್ ಸೂಪರಿಂಟೆಂಡೆಂಟ್ ಅನ್ನಿ ಕಿರ್ಕ್‌ಪ್ಯಾಟ್ರಿಕ್ ಸುದ್ದಿಗೋಷ್ಠಿ ನಡೆಸಿದ್ದು ಈ ದಾಳಿ ಉದ್ದೇಶಪೂರ್ವಕ ಮತ್ತು ವಿನಾಶಕಾರಿ ಎಂದು ವಿವರಿಸಿದ್ದಾರೆ. ಆರೋಪಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸಾಯಿಸಲು ಪ್ರಯತ್ನಿಸಿದ್ದನು ಎಂದು ಹೇಳಿದ್ದಾರೆ.