ಸಾಂದರ್ಭಿಕ ಚಿತ್ರ  
ವಿದೇಶ

Sudan: ಡಾರ್ಫರ್ ಪ್ರದೇಶದಲ್ಲಿ ಆಸ್ಪತ್ರೆ ಮೇಲೆ ದಾಳಿ; ಕನಿಷ್ಠ 70 ಮಂದಿ ಸಾವು- WHO ಮುಖ್ಯಸ್ಥ

ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್-ಫತ್ತಾಹ್ ಬುರ್ಹಾನ್ ಅವರ ನೇತೃತ್ವದಲ್ಲಿ ಸುಡಾನ್ ಮಿಲಿಟರಿ ಮತ್ತು ಮಿತ್ರ ಪಡೆಗಳಿಗೆ ಈ ಯುದ್ಧದಿಂದ ಸಾಕಷ್ಟು ನಷ್ಟವಾಗಿದೆ.

ಖಾರ್ಟೂಮ್(ಸುಡಾನ್): ಎಲ್ ಫಾಶರ್ ನಗರದಲ್ಲಿನ ಏಕೈಕ ಕಾರ್ಯಚರಣೆಯಲ್ಲಿರುವ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 70 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಈ ದಾಳಿ, ಇತ್ತೀಚಿನ ದಿನಗಳಲ್ಲಿ ಆಫ್ರಿಕನ್ ರಾಷ್ಟ್ರದ ಅಂತರ್ಯುದ್ಧ ಉಲ್ಬಣಗೊಂಡಂತೆ ನಡೆಯುತ್ತಿರುವ ಸರಣಿ ದಾಳಿಗಳ ಭಾಗವಾಗಿದೆ.

ಸೌದಿ ಟೀಚಿಂಗ್ ಮೆಟರ್ನಲ್ ಆಸ್ಪತ್ರೆಯ ಮೇಲಿನ ದಾಳಿಯನ್ನು ಸ್ಥಳೀಯ ಅಧಿಕಾರಿಗಳು ಬಂಡುಕೋರರ ಕ್ಷಿಪ್ರ ಬೆಂಬಲ ಪಡೆಗಳ ಮೇಲೆ ಆರೋಪಿಸಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್-ಫತ್ತಾಹ್ ಬುರ್ಹಾನ್ ಅವರ ನೇತೃತ್ವದಲ್ಲಿ ಸುಡಾನ್ ಮಿಲಿಟರಿ ಮತ್ತು ಮಿತ್ರ ಪಡೆಗಳಿಗೆ ಈ ಯುದ್ಧದಿಂದ ಸಾಕಷ್ಟು ನಷ್ಟವಾಗಿದೆ. ನಿನ್ನೆ ಖಾರ್ಟೌಮ್‌ನ ಉತ್ತರಕ್ಕೆ ಉರಿಯುತ್ತಿರುವ ತೈಲ ಸಂಸ್ಕರಣಾಗಾರದ ಬಳಿ ಬುರ್ಹಾನ್ ಕಾಣಿಸಿಕೊಂಡಿದ್ದು, ಅವರ ಪಡೆಗಳು ಆರ್‌ಎಸ್‌ಎಫ್‌ನಿಂದ ವಶಪಡಿಸಿಕೊಂಡಿವೆ.

ಆರ್‌ಎಸ್‌ಎಫ್ ಎಚ್ಚರಿಕೆಯ ನಂತರ ದಾಳಿ

ಎಲ್ ಫಾಶರ್‌ನಲ್ಲಿ ಸೌದಿ ಆಸ್ಪತ್ರೆಯ ದಾಳಿಯಲ್ಲಿ, WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಕ್ಸ್ ಖಾತೆಯಲ್ಲಿ ಸಾವಿನ ಸಂಖ್ಯೆ ಬಗ್ಗೆ ತಿಳಿಸಿದ್ದಾರೆ. ಆರ್ ಎಸ್ ಎಫ್ ಮತ್ತು ಸುಡಾನ್ ಮಿಲಿಟರಿ ಎರಡರ ಸಂವಹನ ಸವಾಲುಗಳು ಮತ್ತು ಉತ್ಪ್ರೇಕ್ಷೆಗಳನ್ನು ಗಮನಿಸಿದರೆ ಸುಡಾನ್ ಕುರಿತು ವರದಿ ಮಾಡುವುದು ನಂಬಲಾಗದಷ್ಟು ಕಷ್ಟಕರವಾಗಿದೆ.

ಸುಡಾನ್‌ನ ಎಲ್ ಫಾಶರ್‌ನಲ್ಲಿರುವ ಸೌದಿ ಆಸ್ಪತ್ರೆಯ ಮೇಲಿನ ಭಯಾನಕ ದಾಳಿಯಿಂದ 70 ಮಂದಿ ಮೃತಪಟ್ಟಿದ್ದಾರೆ ಎಂದು ಘೆಬ್ರೆಯೆಸಸ್ ಬರೆದಿದ್ದಾರೆ. ದಾಳಿಯ ಸಮಯದಲ್ಲಿ, ಆಸ್ಪತ್ರೆಯು ಆರೈಕೆ ಪಡೆಯುತ್ತಿದ್ದ ರೋಗಿಗಳಿಂದ ತುಂಬಿಹೋಗಿತ್ತು ಎಂದಿದ್ದಾರೆ. ಅಲ್ ಮಲ್ಹಾದಲ್ಲಿನ ಮತ್ತೊಂದು ಆರೋಗ್ಯ ಸೌಲಭ್ಯದ ಮೇಲೂ ದಾಳಿ ನಡೆಸಲಾಯಿತು ಎಂದು ಅವರು ಹೇಳಿದರು.

ದಾಳಿಯನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ಘೆಬ್ರೆಯೆಸಸ್ ಗುರುತಿಸಲಿಲ್ಲ, ಆದರೂ ಸ್ಥಳೀಯ ಅಧಿಕಾರಿಗಳು ದಾಳಿಗೆ ಆರ್ ಎಸ್ ಎಫ್ ನ್ನು ದೂಷಿಸಿದ್ದಾರೆ. ಸುಡಾನ್‌ನಲ್ಲಿ ವಿಶ್ವ ಸಂಸ್ಥೆಗಾಗಿ ಮಾನವೀಯ ಪ್ರಯತ್ನಗಳನ್ನು ಸಂಘಟಿಸುವ ವಿಶ್ವಸಂಸ್ಥೆಯ ಅಧಿಕಾರಿ ಕ್ಲೆಮೆಂಟೈನ್ ನ್ಕ್ವೆಟಾ-ಸಲಾಮಿ ಎಚ್ಚರಿಕೆ ನೀಡಿದ್ದು, ಆರ್‌ಎಸ್‌ಎಫ್ ಈ ಹಿಂದೆ ಸುಡಾನ್ ಸಶಸ್ತ್ರ ಪಡೆಗಳೊಂದಿಗೆ ಮಿತ್ರರಾಷ್ಟ್ರಗಳ ಪಡೆಗಳಿಗೆ ನಗರವನ್ನು ಖಾಲಿ ಮಾಡುವಂತೆ 48 ಗಂಟೆಗಳ ಅಂತಿಮ ಗಡುವು ನೀಡಿತ್ತು, ಮುಂಬರುವ ದಾಳಿಯನ್ನು ಸೂಚಿಸಿತ್ತು ಎಂದಿದ್ದಾರೆ. ಆದರೆ ಎಲ್ ಫಾಶರ್‌ನಲ್ಲಿ ನಡೆದ ದಾಳಿಯನ್ನು ಆರ್‌ಎಸ್‌ಎಫ್ ತಕ್ಷಣ ಒಪ್ಪಿಕೊಂಡಿಲ್ಲ.

ಆರ್‌ಎಸ್‌ಎಫ್ ಮತ್ತು ಸುಡಾನ್‌ನ ಮಿಲಿಟರಿ ನಡುವೆ ಏಪ್ರಿಲ್ 2023 ರಲ್ಲಿ ಪರಸ್ಪರ ಕದನವಾಗಿ ಸಂಘರ್ಷದಲ್ಲಿ 28,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು, ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದರು. ದೇಶದ ಕೆಲವು ಭಾಗಗಳಲ್ಲಿ ಕ್ಷಾಮವುಂಟಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT